ಆಸ್ಪತ್ರೆಯಲ್ಲಿ ದಾಂಧಲೆ; ಐಸಿಯುನಲ್ಲಿ ನರ್ಸ್ ಇಲ್ಲದೆ 330 ಕೆಜಿ ತೂಕದ ವ್ಯಕ್ತಿ ಸಾವು!
Team Udayavani, Jul 8, 2019, 7:03 PM IST
ಇಸ್ಲಾಮಾಬಾದ್: 330 ಕೆಜಿ ತೂಕದ ಅಜಾನುಬಾಹು ವ್ಯಕ್ತಿಯೊಬ್ಬರು ತೂಕ ಇಳಿಕೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯಲ್ಲಿ ಏಕಾಏಕಿ ಸಂಭವಿಸಿದ ಗಲಾಟೆಯಿಂದಾಗಿ ನರ್ಸ್ ಸಕಾಲಕ್ಕೆ ರೋಗಿಯನ್ನು ಗಮನಿಸದೇ ಇದ್ದ ಪರಿಣಾಮ ಪಾಕಿಸ್ತಾನದ ಅತೀ ಭಾರದ ವ್ಯಕ್ತಿ ಸಾವಿಗೀಡಾಗಿರುವ ಘಟನೆ ಸೋಮವಾರ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಲಾಹೋರ್ ನಿಂದ 400 ಕಿಲೋ ಮೀಟರ್ ದೂರದಲ್ಲಿರುವ ಸಾದಿಖ್ ಬಾದ್ ನಿವಾಸಿ ನೂರುಲ್ ಹಸನ್ (55ವರ್ಷ) ಬರೋಬ್ಬರಿ 330 ಕೆಜಿ ತೂಕ ಹೊಂದಿದ್ದರು. ಇತ್ತೀಚೆಗಷ್ಟೇ ಪಾಕ್ ಆರ್ಮಿ ಜನರಲ್ ಖ್ವಾಮರ್ ಜಾವೆದ್ ಬಾಜ್ವಾ, ನೂರುಲ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಗುವಂತೆ ಪಾಕಿಸ್ತಾನ ಆರ್ಮಿ ಹೆಲಿಕಾಪ್ಟರ್ ಮೂಲಕ ಲಾಹೋರ್ ಗೆ ಕರೆದೊಯ್ಯುವಂತೆ ನಿರ್ದೇಶನ ನೀಡಿದ್ದರು.
ಲಾಹೋರ್ ಆಸ್ಪತ್ರೆಯಲ್ಲಿ ಹಸನ್ ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಐಸಿಯುನಲ್ಲಿ ಇಟ್ಟಿದ್ದರು. ಏತನ್ಮಧ್ಯೆ ಬೆಳಗ್ಗೆ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬರು ಸಾವನ್ನಪ್ಪಿದ್ದ ಘಟನೆಗೆ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿ, ಕಿಟಕಿ ಒಡೆದು ಬಿಟ್ಟಿದ್ದರು. ಇದರಿಂದಾಗಿ ನರ್ಸ್ ಗಳು ಐಸಿಯುನಿಂದ ಹೊರಹೋಗಿದ್ದರಿಂದ ಉಸಿರಾಟದಿಂದ ತೊಂದರೆಯಿಂದ ಹಸನ್ ಸಾವನ್ನಪ್ಪಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ