ಅತೃಪ್ತ ಶಾಸಕರ ನಿಲ್ಲದ ಮಿಂಚಿನ ಓಟ

ನಿದ್ದೆಗೆಡಿಸಿದ ಸಿಎಂ 'ವಿಶ್ವಾಸ'ದ ನುಡಿ;ಹೇಳಿಕೆ ನೀಡಿದಾಗಿನಿಂದ ಸಂಚರಿಸುತ್ತಲೇ ಇರುವ ಅತೃಪ್ತರು!

Team Udayavani, Jul 14, 2019, 6:00 AM IST

aaa

ಶಿರಡಿಗೆ ಭೇಟಿ ನೀಡಿದ ಅತೃಪ್ತ ಶಾಸಕರ ತಂಡ.

ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ವಿಧಾನಸೌಧದ ಆವರಣದಲ್ಲಿ ಅತೃಪ್ತ ಶಾಸಕರು ಓಡೋಡಿ ಬಂದು ಸ್ಪೀಕರ್‌ ಕೆ. ರಮೇಶ್‌ ಕುಮಾರ್‌ ಅವರಿಗೆ ರಾಜೀನಾಮೆ ಸಲ್ಲಿಸಿದ ಚಿತ್ರ ಜನರ ಕಣ್ಣ ಮುಂದೆ ಕಟ್ಟಿದಂತಿದೆ. ಆದರೆ, ಆ ಓಟ ಕೇವಲ ಅಲ್ಲಿಯೇ ನಿಲ್ಲಲಿಲ್ಲ; ಬದಲಿಗೆ ಅಲ್ಲಿಂದ ಶುರುವಾಗಿ ಈಗ ‘ಮಿಂಚಿನ ಓಟ’ದ ರೂಪ ಪಡೆದುಕೊಂಡಿದೆ!

ರಾಜೀನಾಮೆ ಸಲ್ಲಿಸಿದ್ದೇ ತಡ, ಅತೃಪ್ತ ಶಾಸಕರು ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಓಡಿದರು. ನಂತರ ಮುಂಬೈಗೂ ಹಾರಿದರು. ಅಲ್ಲಿಂದ ದೇವರ ದರ್ಶನದ ನೆಪದಲ್ಲಿ ಮಹಾರಾಷ್ಟ್ರ ಪ್ರದಕ್ಷಿಣೆ ನೆಪದಲ್ಲಿ ಹಾಕುತ್ತಿದ್ದಾರೆ. ಈ ಓಟಕ್ಕೆ ಮೂಲ ಕಾರಣ ರಾಜೀನಾಮೆ ಬೆನ್ನಲ್ಲೇ ಘೋಷಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ‘ವಿಶ್ವಾಸ ಮತ’. ಈ ನಿರ್ಣಯದಿಂದ ಕಂಗಾಲಾದ ಅತೃಪ್ತ ಶಾಸಕರ ಗುಂಪು ಒಂದೇ ಕಡೆ ನೆಲೆ ನಿಲ್ಲದೆ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡುತ್ತಿದೆ.

ಸ್ಪೀಕರ್‌ ಕಚೇರಿಗೆ ತೆರಳಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ ನಂತರದಿಂದ ಈವರೆಗೆ ಅಂದರೆ ಎರಡು ದಿನಗಳಲ್ಲಿ ಅತೃಪ್ತ ಶಾಸಕರ ತಂಡ ಸುಮಾರು 1,500 ಕಿಮೀ ‘ಓಡಿದೆ’. ಇಲ್ಲಿಂದ ಮುಂಬೈನ ರೆನೈಸನ್ಸ್‌ ರೆಸಾರ್ಟ್‌ಗೆ ಓಡಿದ ಈ ತಂಡ ಸುಧಾರಿಸಿಕೊಳ್ಳುವಷ್ಟರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಯಂಪ್ರೇರಿತರಾಗಿ ‘ವಿಶ್ವಾಸ’ದ ಮತಕ್ಕೆ ನಿರ್ಣಯಿಸಿದರು. ಇದರಿಂದ ತಕ್ಷಣ ಅತೃಪ್ತರು ರೆಸಾರ್ಟ್‌ನಿಂದ ಹೊರಬಂದು ಮುಂಬೈ ನಗರದಲ್ಲಿರುವ ವಿನಾಯಕ ದೇವರ ಮೊರೆಹೋದರು. ಆದರೂ ಸಮಾಧಾನ ಆಗಲಿಲ್ಲ. 300 ಕಿ.ಮೀ. ದೂರದ ಶನಿಶಿಂಗಣಾಪುರ, ಅಲ್ಲಿಂದ 92 ಕಿ.ಮೀ. ದೂರದ ಶಿರಡಿ ಸಾಯಿಬಾಬಾ ದರ್ಶನ ಪಡೆದರು. ನಂತರ ಶನಿವಾರ ರಾತ್ರಿ ಔರಂಗಾಬಾದ್‌ನಲ್ಲಿ ಅತೃಪ್ತರು ತಂಗಿದರು. ಮೂಲಗಳ ಪ್ರಕಾರ ಹೆಚ್ಚು-ಕಡಿಮೆ ಇನ್ನೂ ಎರಡು ಮೂರು ದಿನಗಳು ಈ ಮಿಂಚಿನ ಓಟ ನಿಲ್ಲುವುದಿಲ್ಲ.

ಇಡೀ ದಿನದ ಓಟ
ರಿನೈಸನ್ಸ್‌ ರೆಸಾರ್ಟ್‌ನಿಂದ ಶನಿ ಸಿಂಗಣಾಪುರ- 300 ಕಿ.ಮೀ.
ಶನಿ ಶಿಂಗಣಾಪುರದಿಂದ ಶಿರಡಿ- 92 ಕಿ.ಮೀ.
ಶಿರಡಿಯಿಂದ ನಾಗ್ಪುರದ ಔರಂಗಾಬಾದ್‌ (ವಾಸ್ತವ್ಯ)- 108 ಕಿಮೀ.

ಇಂದು ಎಲ್ಲಿಗೆ ಭೇಟಿ?
ಔರಂಗಾಬಾದ್‌ನಿಂದ ಅಜಂತಾ-ಎಲ್ಲೋರಾ ಗುಹೆಗಳ ವೀಕ್ಷಣೆ

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

11-

Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.