ಪ್ರತಿಕೂಲ ಹವಾಮಾನ: ಕೈಕೊಟ್ಟ ನಾಡದೋಣಿ ಮೀನುಗಾರಿಕೆ

Team Udayavani, Jul 15, 2019, 5:46 AM IST

meenu

ಮಲ್ಪೆ: ಈ ಬಾರಿ ಉತ್ತಮ ಮೀನುಗಾರಿಕೆ ನಡೆಯಬಹುದೆಂಬ ನಿರೀಕ್ಷೆಗೆ ಪ್ರತಿಕೂಲ ಹವಾಮಾನ ತಣ್ಣೀರೆರಚಿದೆ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆ ಇನ್ನೂ ಸರಿಯಾಗಿ ಆರಂಭ ಗೊಂಡಿಲ್ಲ. ಅತ್ತ ಯಾಂತ್ರಿಕ ಮೀನು ಗಾರಿಕೆಯ ನಿಷೇಧದ ಅವಧಿಯೂ ಮುಗಿಯುತ್ತಾ ಬರುತ್ತಿದೆ. ಹೆಜಮಾಡಿ, ಉಚ್ಚಿಲ, ಕಾಪು ಗಂಗೊಳ್ಳಿ ಕೋಡಿ ಮತ್ತಿತರ ಕಡೆಗಳಲ್ಲಿಯೂ ಕೂಡ ಮೀನುಗಾರಿಕೆ ಸರಿಯಾಗಿ ನಡೆದಿಲ್ಲ.

ಕಳೆದ ಮೂರ್‍ನಾಲು ದಿನಗಳಲ್ಲಿ ಕೆಲವು ಕಡೆ ಕೆಲವೊಂದು ನಾಡದೋಣಿಗಳು ಸಮುದ್ರಕ್ಕೆ ಇಳಿದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಮೀನುಗಳು ಸಿಕ್ಕಿಲ್ಲ. ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಶನಿವಾರ ಮತ್ತು ರವಿವಾರ ಸುಮಾರು 20ರಷ್ಟು ನಾಡದೋಣಿಗಳು ತೆರಳಿವೆ. ಸುಮಾರು 3-4 ದೋಣಿಗಳಿಗೆ 10-15
ಬುಟ್ಟಿಯಷ್ಟು ಸೋಡಿ ಮೀನು ದೊರಕಿದೆ. ಇದು ದಿನದ ಖರ್ಚಿಗೂ ಸಾಕಾಗುತ್ತಿಲ್ಲ ಎನ್ನುತ್ತಾರೆ ಮೀನುಗಾರರು.

ಕನಿಷ್ಠ 25 ಸಾವಿರ ರೂ. ಸಂಪಾದನೆ ಆಗಿಲ್ಲ
ಕಳೆದ ವರ್ಷ ಜೂನ್‌ ತಿಂಗಳಿನಿಂದ ಜು. 14ರ ವರೆಗೂ ಭಾರಿ ಮಳೆಗಾಳಿ
ಯಿಂದಾಗಿ ಸಮುದ್ರ ಪ್ರಕ್ಷುಬ್ಧ ಗೊಂಡು ಮೀನುಗಾರರು ಪೂರ್ಣ
ಪ್ರಮಾಣದಲ್ಲಿ ಕಡಲಿಗೆ ಇಳಿಯದಂತೆ ಮಾಡಿತ್ತು. ಆದರೂ ಈ ಸಮಯಕ್ಕಾಗು ವಾಗ ಪ್ರತಿ ದೋಣಿಗೆ ಕನಿಷ್ಠ 1 ಲಕ್ಷ ರೂ. ಮೌಲ್ಯದ ಮೀನು ದೊರಕಿತ್ತು. ಆದರೆ ಈ ಬಾರಿ ಯಾರಿಗೂ ಮೀನು ಸಿಕ್ಕಿಲ್ಲ. ಬೆರಳೆಣಿಕೆಯ ದೋಣಿಗಳಿಗೆ ಚಿಲ್ಲರೆ ಮೀನು ಸಿಕ್ಕಿದರೂ ಲಾಭಕ್ಕಿಂತ ನಷ್ಟದ ಪ್ರಮಾಣವೇ ಜಾಸ್ತಿಯಾಗಿದೆ. ಬಹುತೇಕ ಮೀನುಗಾರರು ಬರಿಗೈಯಲ್ಲಿ ವಾಪಾಸಾಗಿದ್ದಾರೆ.

ಮೀನು ಬಂದಿಲ್ಲ
ಉತ್ತಮ ಮಳೆಯಾಗದಿದ್ದರೆ ಮೀನು ಸಿಗುವುದು ಕಷ್ಟ. ಮಳೆ ಕೊರೆತೆಯಾಗಿದ್ದು ಒಂದೂ ನೆರೆ ಬಾರದ ಕಾರಣ ಸಿಹಿನೀರು ಕಡಲಿಗೆ ಸೇರಿಲ್ಲ. ಇದೇ ಕಾರಣ ಮೀನುಗಳು ತೀರ ಪ್ರದೇಶಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ. ಇನ್ನೊಂದು ಕಾರಣ ಎರಡು ಮೂರು ತಿಂಗಳ ಹಿಂದೆ ಸಮುದ್ರತೀರದಲ್ಲಿ ಕಪ್ಪು ಬಣ್ಣದ ತೈಲ ಮಿಶ್ರಿತ ಜಿಡ್ಡಿನ ಪ್ರಮಾಣ ತೀರ ಪ್ರದೇಶವನ್ನು ಸೇರುತ್ತಿತ್ತು. ಸಮುದ್ರ ಮಧ್ಯೆ ಹಡಗುಗಳಿಂದ ಕಚ್ಚಾ ತೈಲದ ವಿಲೇವಾರಿಯಿಂದಾಗಿ ಅದು ಸಮುದ್ರ ತೀರವನ್ನು ಸೇರುತ್ತಿದೆ ಎನ್ನಲಾಗುತ್ತಿದ್ದು, ಇದು ಎರಡು ಮೂರು ಸಲ ಪುನರಾವರ್ತನೆಯಾಗಿತ್ತು. ಇದು ಜಲಚರ ನಾಶಕ್ಕೆ ಕಾರಣವಾಗಿರಬಹುದೆಂದು ಮೀನುಗಾರರು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.

ದೇವರಿಗೆ ಮೊರೆ
ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಭಾರಿ ಹಿನ್ನೆಡೆಯಾಗಿದ್ದರಿಂದ ಮೀನುಗಾರರು ದೇವರಿಗೆ ಮೊರೆ ಹೋಗಿದ್ದಾರೆ. ಮೀನುಗಾರರು ಕಲ್ಮಾಡಿ ಬೊಬ್ಬರ್ಯ ದೈವಸ್ಥಾನದಲ್ಲಿ ದರ್ಶನ ಸೇವೆ ನಡೆಸಿದ್ದಾರೆ. ಕಾಪು ಮಾರಿಯಮ್ಮನಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ, ತಮ್ಮ ಕಷ್ಟವನ್ನು ತೋಡಿಕೊಳ್ಳಲಿದ್ದಾರೆ.

ಇಳುವರಿ ಇಲ್ಲದೆ ಸಾಲ ತೀರಿಸುವ ಚಿಂತೆ
ಇನ್ನೂ ಸರಿಯಾಗಿ ಮೀನುಗಾರಿಕೆ ಆರಂಭವಾಗಿಲ್ಲ. ಹೋದ ಮೀನುಗಾರರಿಗೆ ಸಂಪಾದನೆ ಇಲ್ಲ. ಸಮುದ್ರದಲ್ಲಿ ಸರಿಯಾದ ಮೀನಿನ ಇಳುವರಿ ಇಲ್ಲ. ಒಂದು ಸಲ ಕಡಲಿಗಿಳಿದು ಬರಬೇಕಾದರೆ 20ರಿಂದ 25ಸಾವಿರ ರೂಪಾಯಿ ಬೇಕು. ಮೀನು ಸಿಗದಿದ್ದರೆ ನಷ್ಟ. ಸಾಲ ತೀರಿಸುವ ಬಗ್ಗೆ ಚಿಂತೆಯಾಗಿದೆ.
-ರಮೇಶ್‌ ಮೈಂದನ್‌ ಕುತ್ಪಾಡಿ, ನಾಡದೋಣಿ ಮೀನುಗಾರರು

ಆಶಾದಾಯಕ ಮೀನುಗಾರಿಕೆ ಆದರೆ ಮಾತ್ರ ನೆಮ್ಮದಿ ಸಾಂಪ್ರದಾಯಿಕ ಮಳೆಗಾಲದ ಮೀನುಗಾರಿಕೆ ಜೂನ್‌ ತಿಂಗಳಲ್ಲಿ ಆರಂಭಗೊಂಡು
ಜು.31ಕ್ಕೆ ಕೊನೆಗೊಳ್ಳುತ್ತದೆ.
ಆ. 1ರಿಂದ ಯಾಂತ್ರಿಕ ಮೀನುಗಾರಿಕೆ ಆರಂಭವಾಗುತ್ತದೆ. ಆ.1ರಿಂದ ಟ್ರಾಲ್‌ಬೋಟ್‌ಗಳು ಸಮುದ್ರಕ್ಕೆ ಇಳಿಯಲು ಅವಕಾಶ ವಿದ್ದರೂ ಆ. 10ರ
ಬಳಿಕ ಹಿಂತಿರುಗುತ್ತವೆ. ಅಷ್ಟರೊಳಗೆ ನಾಡದೋಣಿ ಮೀನುಗಾರರಿಗೆ ಆಶಾದಾಯಕ ಮೀನುಗಾರಿಕೆ ನಡೆದರೆ ಮಾತ್ರ ಒಂಚೂರು
ನೆಮ್ಮದಿ ಸಿಗಬಹುದು.
-ಕೃಷ್ಣ ಎಸ್‌. ಸುವರ್ಣ, ಪಡುತೋನ್ಸೆ ಬೆಂಗ್ರೆ

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.