ನನೆಗುದಿಗೆ ಬಿದ್ದ ಯೋಜನೆಗಳ ವಿವರ ನೀಡಲು ಆಗ್ರಹ

ವಾರದಲ್ಲಿ ಡಿಸಿ ಕಚೇರಿಗೆ ಮುತ್ತಿಗೆ: ಮಾಜಿ ಶಾಸಕ ಎ.ಪಾಪಾರೆಡ್ಡಿ ಎಚ್ಚರಿಕೆ

Team Udayavani, Jul 19, 2019, 4:27 PM IST

Udayavani Kannada Newspaper

ರಾಯಚೂರು: ಜುರಾಲಾ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಪ್ರದೇಶಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾದರೂ ಅದನ್ನು ಬಳಸದೆ ಕಾಲಕ್ಷೇಪ ಮಾಡಲಾಗುತ್ತಿದೆ. ವಾರದೊಳಗೆ ಹಣದ ಸ್ಪಷ್ಟ ವಿವರಣೆ ನೀಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಗಡುವು ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1978ನೇ ಇಸ್ವಿಯಲ್ಲಿ ರಾಜ್ಯದ ಮುಖ್ಯಮಂತ್ರಿ ದೇವರಾಜ ಅರಸ್‌ ಹಾಗೂ ಆಂಧ್ರಪ್ರದೇಶ ಸಿಎಂ ಚನ್ನಾರೆಡ್ಡಿ ನೇತೃತ್ವದಲ್ಲಿ ಯೋಜನೆ ಜಾರಿಗೊಂಡಿತ್ತು. ಇದರಿಂದ ಕೃಷ್ಣ ನದಿ ಪಾತ್ರದ ಕೆಲ ಹಳ್ಳಿಗಳು, ಪ್ರಮುಖ ದೇವಸ್ಥಾನಗಳಿಗೆ ಮುಳುಗಡೆ ಭೀತಿ ಎದುರಾಯಿತು. ಈ ಬಗ್ಗೆ ನಾನು ಶಾಸಕನಾಗಿದ್ದಾಗ ರಾಜ್ಯದ ಮುಖ್ಯ ಕಾರ್ಯದರ್ಶಿ ಜತೆ ಚರ್ಚಿಸಿ ಈ ಸ್ಥಳಗಳ ಅಭಿವೃದ್ಧಿಗೆ ಒತ್ತಾಯಿಸಿದ್ದೆ. ಆಗ ಆಂಧ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿತ್ತು ಎಂದು ವಿವರಿಸಿದರು.

ನನ್ನ ಅವಧಿ ಬಳಿಕ ಮೂವರು ಶಾಸಕರು ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಜಾ ಅಮರಪ್ಪ ನಾಯಕ, ತಿಪ್ಪರಾಜ ಹವಾಲ್ದಾರ್‌ ಈ ಬಗ್ಗೆ ಪ್ರಶ್ನಿಸಲೇ ಇಲ್ಲ. ಈಗ ಆಯ್ಕೆಯಾಗಿರುವ ದದ್ದಲ್ ಬಸನಗೌಡ ಕೂಡ ಒಂದು ವರ್ಷವಾದರೂ ಈ ಸ್ಥಳಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.

ಈ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸಿ ಅಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬೇಕು. ಈ ಭಾಗ ಸಂಪೂರ್ಣ ಬರಕ್ಕೆ ತುತ್ತಾಗಿರುವ ಕಾರಣ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ, ಈವರೆಗೂ ಅದು ಆಗದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಇದು ಸರ್ಕಾರಕ್ಕೆ ಸಂಬಂಧಿಸಿದ ಕಾಮಗಾರಿಯಲ್ಲ. ಸಂಪೂರ್ಣ ಅಧಿಕಾರ ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಶಾಸಕರದ್ದಾಗಿದೆ. ಹೀಗಾಗಿ ಒಂದು ವಾರದೊಳಗೆ ಕಾಮಗಾರಿ ಸಂಪೂರ್ಣ ವಿವರ, ಹಣದ ವಿವರ ಸ್ಪಷ್ಟಪಡಿಸಬೇಕು. ಕಾಮಗಾರಿ ಯಾವಾಗ ಆರಂಭಿಸಲಾಗುತ್ತದೆ ಎಂಬುದನ್ನು ತಿಳಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಾರಾಯಣಪುರ ಬಲದಂಡೆ ಕಾಲುವೆ ಯೋಜನೆ ಮೂಲ ನೀಲನಕ್ಷೆಯಂತೆ ಸಾಗದೆ ಮನಬಂದಂತೆ ತೆಗೆದುಕೊಂಡು ಹೋಗಲಾಗಿದೆ. ಗದ್ವಾಲ್ ರಸ್ತೆ ಮೂಲಕ ಸಾಗಬೇಕಿದ್ದ ಕಾಲುವೆಯನ್ನು ಶಾಖವಾದಿ ಮಾರ್ಗವಾಗಿ ತೆಗೆದುಕೊಂಡು ಹೋಗಲಾಗಿದೆ. ಈ ಬಗ್ಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಖಂಡರಾದ ತಿಮ್ಮಪ್ಪ ನಾಯಕ, ವೆಂಕಟೇಶ, ವೆಂಕಟರಾವ್‌, ಶರಣಪ್ಪ ಹನುಮಂತರೆಡ್ಡಿ, ಬಸಾರೆಡ್ಡಿ, ಸೂಗೂರಪ್ಪ, ರಂಗಾರೆಡ್ಡಿ ಇತರರು ಇದ್ದರು.

ಟಾಪ್ ನ್ಯೂಸ್

SIT ಎದುರು ಎಚ್‌.ಡಿ.ರೇವಣ್ಣ ಮೊಂಡಾಟ; ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ನಿರಾಕರಣೆ

SIT ಎದುರು ಎಚ್‌.ಡಿ.ರೇವಣ್ಣ ಮೊಂಡಾಟ; ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ನಿರಾಕರಣೆ

HD ರೇವಣ್ಣನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು

HD ರೇವಣ್ಣನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

1-wqeqweqwewq

IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

police

Chikkaballapur: ಆಂಧ್ರದಿಂದ ಗಾಂಜಾ ತರುತ್ತಿದ್ದ ಇಬ್ಬರ ಬಂಧನ

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-weewqeq

Gadag; ಮತದಾನದ ಮುನ್ನಾ ದಿನ ಬಸ್‌ಗಳು ಫುಲ್ ರಶ್: ಜನರ ಪರದಾಟ

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

SIT ಎದುರು ಎಚ್‌.ಡಿ.ರೇವಣ್ಣ ಮೊಂಡಾಟ; ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ನಿರಾಕರಣೆ

SIT ಎದುರು ಎಚ್‌.ಡಿ.ರೇವಣ್ಣ ಮೊಂಡಾಟ; ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ನಿರಾಕರಣೆ

HD ರೇವಣ್ಣನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು

HD ರೇವಣ್ಣನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

1-wqeqweqwewq

IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.