65 ಕೋಟಿ ರೂ. ವೆಚ್ಚದಲ್ಲಿ ನಿರಂತರ ನೀರು

ಕೊಳ್ಳೇಗಾಲಕ್ಕೆ ನಿರಂತರ ಶುದ್ಧ ಕುಡಿಯುವ ನೀರಿನ ಯೋಜನೆ • 3ನೇ ಹಂತದ ಕಾಮಗಾರಿಗೆ ಸಿದ್ಧತೆ

Team Udayavani, Jul 20, 2019, 1:25 PM IST

cn-tdy-2

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿಗಾಗಿ ಸಿದ್ಧತೆಗಳು ನಡೆದಿದ್ದು, ಪೈಪುಗಳು ಮತ್ತಿತರ ಪರಿಕರಗಳನ್ನು ಶೇಖರಿಸಲಾಗಿದೆ.

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣಕ್ಕೆ ನಿರಂತರ (24×7) ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 65 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಕ್ಕೆ ನಗರಸಭೆ ಸಿದ್ಧತೆ ನಡೆಸಿದೆ.

ಕೊಳ್ಳೇಗಾಲ ನಗರಕ್ಕೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಯೋಜನೆಯ ಮೊದಲ ಹಂತ 1965ರಲ್ಲಿ ಅನುಷ್ಠಾನಗೊಂಡಿದೆ. ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 4.5 ಎಂಎಲ್ಡಿ ನೀರು ಸರಬರಾಜಾಗುತ್ತಿತ್ತು. 2ನೇ ಹಂತದ ಕಾಮಗಾರಿಯು 2006-07ರಲ್ಲಿ ಅನುಷ್ಠಾನಗೊಂಡಿದ್ದು, 2010ರ ಜನಗಣತಿ ಆಧಾರದ ಅನುಗುಣವಾಗಿ ಸುಮಾರು 9.0 ಎಂಎಲ್ಡಿ ನೀರು ಸದಸ್ಯ ಸರಬರಾಜಾಗುತ್ತಿದೆ.

ಪ್ರಸ್ತುತ ಕೊಳ್ಳೇಗಾಲ ಪಟ್ಟಣಕ್ಕೆ ಕಾವೇರಿ ನದಿಯಿಂದ ಸುಮಾರು 7 ಎಂಎಲ್ಡಿ ಹಾಗೂ ಎಲ್ಲ 31 ವಾರ್ಡುಗಳಲ್ಲಿ ಸುಮಾರು 120 ಬೋರ್‌ವೆಲ್ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಶುದ್ಧಿಕರಣ ಘಟಕದಲ್ಲಿ ಅಳವಡಿಸಿರುವ ಮೋಟಾರ್‌ ಪಂಪುಗಳು, ಕವಾಟಗಳು, ನೀರು ಶೋಧಕಗಳನ್ನು ಅಳವಡಿಸಿ ಸುಮಾರು 15 ವರ್ಷಗಳಾಗಿದ್ದು ದುರಸ್ತಿಯಲ್ಲಿವೆ.

3ನೇ ಹಂತದ ಕಾಮಗಾರಿಗೆ ಸಿದ್ಧತೆ: 2019-20ರಲ್ಲಿ 3ನೇ ಹಂತದ ಕಾಮಗಾರಿಯಾಗಿ ಈ ಪರಿಕರಗಳನ್ನು ಬದಲಾಯಿಸಿ ಪುನಶ್ಚೇತನಗೊಳಿಸಿ, 2035ರ ಜನಗಣತಿಗೆ ಅನುಗುಣವಾಗಿ 13.5 ಎಂಎಲ್ಡಿ ಹಾಗೂ 2050ರ ಜನಗಣತಿಗೆ ಅನುಗುಣವಾಗಿ 16.6 ಎಂಎಲ್ಡಿಗೆ ಉನ್ನತೀಕರಿಸುವ ಕಾಮಗಾರಿ ಹಾಗೂ ಸಮಗ್ರವಾಗಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು 12 ವಲಯಗಳಾಗಿ ವಿಂಗಡಿಸಿ ಸುಮಾರು 185 ಕಿ.ಮೀ. ವಿತರಣಾ ಜಾಲ, 6 ಮೇಲ್ಮಟ್ಟದ ಸಂಗ್ರಹಣಾಗಾರ ನಿರ್ಮಿಸುವ ಕಾಮಗಾರಿ, 16 ಸಾವಿರ ಸಂಖ್ಯೆಯ ಮನೆ ನಲ್ಲಿ ಸಂಪರ್ಕದ ಜತೆಗೆ ಮೀಟರ್‌ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಯೋಜನೆಯ ಒಟ್ಟು ಅಂದಾಜು ರೂ. 65 ಕೋಟಿಗಳಾಗಿದ್ದು ಬೆಂಗಳೂರಿನ ಮಾಲೂ ಕನ್ಸ್‌ಸ್ಟಕ್ಷನ್‌ ಗೆ ನಗರಸಭೆ ವತಿಯಿಂದ ಟೆಂಡರ್‌ ಆಹ್ವಾನಿಸಿ ಆಯ್ಕೆ ಮಾಡಿ ಯೋಜನೆಯನ್ನು ವಹಿಸಲಾಗಿದೆ.

ನಗರಕ್ಕೆ ನಿರಂತರ ಶುದ್ಧ ನೀರು ಪೂರೈಕೆ: ಕೊಳ್ಳೇಗಾಲ ನಗರಕ್ಕೆ ನಿರಂತರ (24×7) ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗುವುದರಿಂದ ಜಲಮೂಲದಿಂದ ಸಂಗ್ರಹಿಸಿದ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ನಿರಂತರವಾಗಿ ಸರಬರಾಜು ಮಾಡಲಾಗುವುದು. ಪ್ರತಿ ಮನೆಗೂ ಸಾಕಷ್ಟು ನೀರಿನ ಪೂರೈಕೆ ಮಾಡಿ ಕನಿಷ್ಠ ದರ ನೀಡುವುದು ಅವಶ್ಯವಾಗಿದೆ. ಪ್ರತಿ ಬಳಕೆದಾರರೂ ನೀರಿನ ದರವನ್ನು ನಿಯಮಿತವಾಗಿ ನೀಡಿದರೆ ನೀರಿನ ಪೂರೈಕೆಯನ್ನು ಸರಿಯಾಗಿ ನಿರ್ವಹಿಸಬಹುದಾಗಿದೆ. ನೀರಿನ ಪೂರೈಕೆ ವೆಚ್ಚ ಮತ್ತು ಆದಾಯ ಸರಿಸಮಾನವಾಗಿ ಇರಬೇಕು. ನೀರು ನಿರಂತರವಾಗಿ ಪೂರೈಕೆ ಆಗುವುದರಿಂದ ನೀರಿನ ಅಪವ್ಯಯವಾಗುವುದನ್ನು ತಡೆಗಟ್ಟುವುದು ಹಾಗೂ ಪರಿಸರ ಸ್ವಚ್ಛತೆಗೆ ಸಹಕರಿಸುವುದು. ಅನಧಿಕೃತ ನಳ ಸಂಪರ್ಕಗಳನ್ನು ತಡೆಗಟ್ಟುವುದು, ಹೊಸ ತಾಂತ್ರಿಕತೆಯನ್ನು ಅಳವಡಿಸುವುದರಿಂದ ಪದೇಪದೇ ಬರುವ ದುರಸ್ಥಿ ವೆಚ್ಚಗಳನ್ನು ತಡೆಗಟ್ಟುವುದು ಯೋಜನೆಯ ಉದ್ದೇಶವಾಗಿದೆ.

ಮೀಟರ್‌ ಅಳವಡಿಸಿದರೆ ಬಳಕೆ ಪ್ರಮಾಣ ಪತ್ತೆ: ಮೀಟರ್‌ ಅಳವಡಿಕೆಯಿಂದ ಬಳಸಿದಷ್ಟೇ ನೀರಿಗೆ ದರ ಪಾವತಿಸಬಹುದು. ಬಳಕೆಯ ನೀರಿನ ಪ್ರಮಾಣ ತಿಳಿಯಲಿದೆ. ಮೀಟರ್‌ ತಕ್ಕಂತೆ ದರ ಪಾವತಿಸುವುದರಿಂದ ಉತ್ತಮ ನೀರಿನ ಸೌಲಭ್ಯ ಲಭ್ಯವಾಗಿ ವಿತರಣಾ ವ್ಯವಸ್ಥೆಯ ಖಚಿತ ಮಾಹಿತಿ ದೊರೆಯುತ್ತದೆ. ನಿರ್ವಹಣೆಯ ಕಾರ್ಯಕ್ಷಮತೆ ಹೆಚ್ಚುತ್ತದೆ. ಶೇ. 40ರಿಂದ ಶೇ. 50ರಷ್ಟು ನೀರು ಸೋರಿಕೆಯಿಂದ ಆಗುವ ನಷ್ಟ ತಪ್ಪಿ ನಿಯಮಿತ ನೀರು ಪೂರೈಕೆಯಾಗಲಿದೆ. ನೀರಿನ ದರವನ್ನು ವೈಜ್ಞಾನಿಕವಾಗಿ ವಿಧಿಸಲಾಗುವುದು. ನೀರಿನ ಸಂರಕ್ಷಣೆ, ಜಲಮೂಲ ಕಾಯಿಲೆಗಳ ಬಗ್ಗೆ ತಿಳಿವಳಿಕೆ ಮೂಡಲಿದೆ. ಜಲಮೂಲಗಳಿಂದ ಬರುವ ಖಾಯಿಲೆಗಳನ್ನು ತಡೆಗಟ್ಟಬಹುದು.

ನಿರಂತರ ನೀರು ಪೂರೈಕೆಯಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆ ನಿವಾರಣೆಯಾಗಿ ಉತ್ತಮ ಆರೋಗ್ಯ ಲಭಿಸಲಿದೆ. ವಿತರಿಸಲು ಲಭ್ಯವಿರುವ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ನೀರನ್ನು ಸಂಗ್ರಹ ಮಾಡಬೇಕಾಗಿರುವುದಿಲ್ಲ. 10 ಮೀ. ಎತ್ತರದವರೆಗೆ ನೀರು ಬರುವುದರಿಂದ ಯಾವುದೇ ನೀರೆತ್ತುವ ಮೋಟಾರ್‌ಗಳ ಅವಶ್ಯಕತೆ ಇರುವುದಿಲ್ಲ. ಚಾವಣಿ ಮೇಲೆ ನೀರು ಸಂಗ್ರಹಾಗಾರ ಬೇಕಾಗಿರುವುದಿಲ್ಲ. ನಿರ್ವಹಣೆ ಖರ್ಚು, ಸಮಯ ಉಳಿತಾಯವಾಗಲಿದೆ ಎಂದು ನಗರಸಭೆ ತಿಳಿಸಿದೆ. ಯೋಜನೆ ಸಂಪೂರ್ಣವಾಗಿ ಸರ್ಕಾರದ ಹಣದಿಂದಲೇ ಅನುಷ್ಠಾನಗೊಳ್ಳುತ್ತಿರುವುದರಿಂದ ಮರುಪಾವತಿಸುವ ಪ್ರಶ್ನೆ ಉದ್ಗವಿಸುವುದಿಲ್ಲ. ಯೋಜನೆ ಖಾಸಗೀಕರಣವಾಗುವುದಿಲ್ಲ. ಸಾರ್ವಜನಿಕರು ನೀರನ್ನು ಬಳಸಿದ ಪ್ರಮಾಣಕ್ಕೆ ನೀರಿನ ತೆರಿಗೆಯನ್ನು ಕೌನ್ಸಿಲ್ ನಿರ್ಣಯದಂತೆ ಪಾವತಿಸಬಹುದಾಗಿದೆ ಎಂದು ನಗರಸಭೆ ತಿಳಿಸಿದೆ.

● ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

7-haveri

Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ; ವಿಡಿಯೋ ವೈರಲ್

Kollywood: ಕಮಲ್‌ ಹಾಸನ್‌ ʼಇಂಡಿಯನ್‌ -2ʼ ಬಿಡುಗಡೆ ಮುಂದೂಡಿಕೆ; ಈ ತಿಂಗಳಿನಲ್ಲಿ ರಿಲೀಸ್?

Kollywood: ಕಮಲ್‌ ಹಾಸನ್‌ ʼಇಂಡಿಯನ್‌ -2ʼ ಬಿಡುಗಡೆ ಮುಂದೂಡಿಕೆ; ಈ ತಿಂಗಳಿನಲ್ಲಿ ರಿಲೀಸ್?

dvs

Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ

6–strike

Holenarasipur: ಶಾಸಕ ಹೆಚ್.ಡಿ. ರೇವಣ್ಣ ಬಂಧನ ಹಿನ್ನೆಲೆ ಬಂದ್ ಗೆ ಕರೆ

Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್

Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

7-haveri

Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ; ವಿಡಿಯೋ ವೈರಲ್

Kollywood: ಕಮಲ್‌ ಹಾಸನ್‌ ʼಇಂಡಿಯನ್‌ -2ʼ ಬಿಡುಗಡೆ ಮುಂದೂಡಿಕೆ; ಈ ತಿಂಗಳಿನಲ್ಲಿ ರಿಲೀಸ್?

Kollywood: ಕಮಲ್‌ ಹಾಸನ್‌ ʼಇಂಡಿಯನ್‌ -2ʼ ಬಿಡುಗಡೆ ಮುಂದೂಡಿಕೆ; ಈ ತಿಂಗಳಿನಲ್ಲಿ ರಿಲೀಸ್?

dvs

Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.