ಸಲಗದಲ್ಲಿ ಬದಲಾಯ್ತು ಧನಂಜಯ್‌ ಗೆಟಪ್‌

Team Udayavani, Jul 29, 2019, 3:14 PM IST

Salaga-Dhananjay-(3)

ಶಿವರಾಜಕುಮಾರ್‌ ಅಭಿನಯದ “ಟಗರು’ ಮೂಲಕ “ಡಾಲಿ’ ಧನಂಜಯ್‌ ಎಂದೇ ಕರೆಸಿಕೊಳ್ಳುತ್ತಿರುವ ಧನಂಜಯ್‌, “ದುನಿಯಾ’ ವಿಜಯ್‌ ನಿರ್ದೇಶನದ “ಸಲಗ’ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ “ಸಲಗ’ ಸಾಕಷ್ಟು ಕುತೂಹಲ ಕೆರಳಿಸಿದೆ. ಅದಕ್ಕೆ ಕಾರಣ ಹಲವು.

ಮೊದಲನೆಯದು ಇದು “ದುನಿಯಾ’ ವಿಜಯ್‌ ನಿರ್ದೇಶನದ ಮೊದಲ ಚಿತ್ರ. ಎರಡನೆಯದು ಇಲ್ಲೂ ಧನಂಜಯ್‌ ಖಡಕ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣಕ್ಕೂ ಮುನ್ನ, “ಸಲಗ’ ಚಿತ್ರತಂಡ ಹರಿಬಿಟ್ಟ ಫೋಟೋಗಳು ಸಾಕಷ್ಟು ಗಮನ ಸೆಳೆದಿದ್ದವು. ಆ ಪೈಕಿ ಧನಂಜಯ್‌ ಫೋಟೋ ಕೂಡ ಸಖತ್‌ ವೈರಲ್‌ ಆಗಿತ್ತು. ಧನಂಜಯ್‌ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದು, ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿಯೇ ಖಡಕ್‌ ಪೊಲೀಸ್‌ ಅಧಿಕಾರಿ ಗೆಟಪ್‌ನಲ್ಲಿದ್ದರು. ಅದಾದ ಬಳಿಕ ಚಿತ್ರತಂಡ ಒಂದೊಂದೇ ಫೋಟೋಗಳನ್ನೂ ಸಹ ಹೊರಬಿಟ್ಟಿತ್ತು. ಈಗ ಧನಂಜಯ್‌ ಪಾತ್ರದ ಮತ್ತೂಂದು ಹೊಸ ಗೆಟಪ್‌ ಫೋಟೋ ಹೊರಬಂದಿದೆ.

ಧನಂಜಯ್‌ ಇಲ್ಲಿ ಕ್ಲೀನ್‌ ಶೇವ್‌ ಮಾಡಿ, ಪಕ್ಕಾ ಆಫಿಶಿಯಲ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್‌ ಸ್ಲಿಮ್‌ ಆಗಿಯೂ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆ ಫೋಟೋವನ್ನ ಸೂಕ್ಷ್ಮವಾಗಿ ಗಮನಿಸಿದರೆ, ಪಕ್ಕಾ ಖದರ್‌ ತುಂಬಿರುವ ಪೊಲೀಸ್‌ ಅಧಿಕಾರಿಯಾಗಿ ತನಿಖೆ ನಡೆಸುತ್ತಿರುವ ಗೆಟಪ್‌ನಲ್ಲಿದ್ದಾರೆ. ಸದ್ಯಕ್ಕೆ ಈ ಫೋಟೋಗಳು ಸಣ್ಣದ್ದೊಂದು ಕುತೂಹಲ ಮೂಡಿಸಿರುವುದಂತೂ ನಿಜ.

“ಟಗರು’ ಚಿತ್ರದಲ್ಲಿ ಧನಂಜಯ್‌ ಪಕ್ಕಾ ವಿಲನ್‌ ಆಗಿ ಗಮನಸೆಳೆದಿದ್ದರು. ಶಿವರಾಜಕುಮಾರ್‌ ಎದುರು ಅಬ್ಬರಿಸಿದ್ದರು. ಇಲ್ಲಿ ಪಕ್ಕಾ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ, “ದುನಿಯಾ’ ವಿಜಯ್‌ ಎದುರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಚಿತ್ರದಲ್ಲಿ “ಕಾಕ್ರೋಚ್‌’ ಖ್ಯಾತಿಯ ಸುಧಿ, ಯಶ್‌ ಶೆಟ್ಟಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಯಶ್‌ ಶೆಟ್ಟಿ ಮತ್ತು “ಕಾಕ್ರೋಚ್‌’ ಸುಧಿ ಅವರ ಗೆಟಪ್‌ ಕೂಡ ಅವರದು ವಿಲನ್‌ ಪಾತ್ರಗಳು ಎಂಬುದನ್ನು ಸಾರಿ ಹೇಳುತ್ತಿವೆ.

ಈಗಾಗಲೇ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದ್ದು, ಕೆ.ಪಿ.ಶ್ರೀಕಾಂತ್‌ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಔಟ್‌ ಅಂಡ್‌ ಔಟ್‌ ಮಾಸ್‌ ಸಬೆjಕ್ಟ್ ಆಗಿದ್ದು, ಆ್ಯಕ್ಷನ್‌ಗೆ ಹೆಚ್ಚು ಒತ್ತು ಕೊಡಲಾಗಿದೆ. ಇದು ಕಾಡಿನೊಳಗಿರುವ ಸಲಗವಲ್ಲ, ನಾಡಿನೊಳಗಿರುವ ಸಲಗ. ಒಬ್ಬ ಅಮಾಯಕ ವ್ಯಕ್ತಿ ಭೂಗತಲೋಕದಲ್ಲಿ ಸಿಲುಕಿದಾಗ ನಡೆಯುವ ಕಥೆ ಸಲಗ ಚಿತ್ರದಲ್ಲಿದೆ ಎನ್ನುತ್ತದೆ ಚಿತ್ರತಂಡ. ಇನ್ನು ಈ “ಸಲಗ’ ಚಿತ್ರದ ಮೂಲಕ ವಿಜಯ್‌ ಮತ್ತೂಮ್ಮೆ ಮಾಸ್‌ ಹೀರೋ ಆಗಿ ಮಿಂಚಲಿದ್ದಾರೆ. ಚಿತ್ರಕ್ಕೆ ಸಂಜನಾ ಆನಂದ್‌ ನಾಯಕಿಯಾಗಿದ್ದಾರೆ. “ಟಗರು’ ಚಿತ್ರಕ್ಕೆ ಸಂಗೀತ ನೀಡಿದ ಚರಣ್‌ರಾಜ್‌ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಟಾಪ್ ನ್ಯೂಸ್

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

Tragedy: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು…

Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು

ಪೋಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ

Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.