ಸ್ಟೇಡಿಯಂನಲ್ಲೇ ಕುಸಿದ ಆವಿಷ್ಕ ಫೆರ್ನಾಂಡೊ ತಂದೆ
Team Udayavani, Jul 30, 2019, 5:01 AM IST
ಕೊಲಂಬೊ: ವಿಶ್ವಕಪ್ ಫೈನಲ್ ಸೂಪರ್ ಓವರ್ ವೇಳೆ ನ್ಯೂಜಿಲ್ಯಾಂಡ್ ಆಲ್ರೌಂಡರ್ ಜಿಮ್ಮಿ ನೀಶಮ್ ಸಿಕ್ಸರ್ ಸಿಡಿಸಿದ್ದನ್ನು ಕಾಣುತ್ತಲೇ ಅವರ ಬಾಲ್ಯದ ಕೋಚ್ ಡೇವಿಡ್ ಗಾರ್ಡನ್ ನಿಧನ ಹೊಂದಿದ ಘಟನೆಯೊಂದು ಸಂಭವಿಸಿತ್ತು. ರವಿವಾರ ರಾತ್ರಿ ಕೊಲಂಬೊ ಏಕದಿನ ಪಂದ್ಯದ ವೇಳೆ ಇಂಥದೇ ದುರಂತವೊಂದು ಮರುಕಳಿಸುವುದು ಸ್ವಲ್ಪದರಲ್ಲೇ ತಪ್ಪಿದೆ.
ಶ್ರೀಲಂಕಾ ಆರಂಭಕಾರ 21ರ ಹರೆಯದ ಆವಿಷ್ಕ ಫೆರ್ನಾಂಡೊ ಅಮೋಘ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನತ್ತ ಕೊಂಡೊ ಯ್ಯುತ್ತಿದ್ದರು. ಆಗ ಸ್ಟೇಡಿಯಂನಲ್ಲಿದ್ದು ಅವರ ಆಟವನ್ನು ವೀಕ್ಷಿಸುತ್ತಿದ್ದ ತಂದೆ ಅಲ್ಲಿಯೇ ಕುಸಿದು ಬಿದ್ದ ಘಟನೆ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರೀಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ ಆವಿಷ್ಕ ಫೆರ್ನಾಂಡೊ ಅವರಿಗೆ ಈ ಘಟನೆ ಬಗ್ಗೆ ತಿಳಿದದ್ದು ಔಟಾಗಿ ಡ್ರೆಸ್ಸಿಂಗ್ ರೂಮ್ಗೆ ಮರಳಿದ ಬಳಿಕವೇ. ತಂದೆ ಮಧು ಮೇಹಿಯಾಗಿದ್ದರು ಎಂಬುದಾಗಿ ಆವಿಷ್ಕ ತಿಳಿಸಿದ್ದಾರೆ. ಈ ಪಂದ್ಯದಲ್ಲಿ 82 ರನ್ ಹೊಡೆದ ಅವರು ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು