ಭಾರತ- ಚೀನಾ ಗಡಿಯಲ್ಲಿ ಕೋಮಲ್!
ಹೊಸ ಚಿತ್ರ ಕುಂಗ್ ಕಾ ಪಾಸ್
Team Udayavani, Aug 19, 2019, 3:01 AM IST
ನಟ ಕೋಮಲ್ “ಕೆಂಪೇಗೌಡ -2′ ಚಿತ್ರದ ಮೂಲಕ ಒಂದಷ್ಟು ಗಮನಸೆಳೆದಿದ್ದು ಗೊತ್ತೇ ಇದೆ. ಆ ಸಿನಿಮಾ ನೋಡಿದವರೆಲ್ಲರಿಗೂ ಕೋಮಲ್ ಒಬ್ಬ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದು ಸುಳ್ಳಲ್ಲ. ಆ ಚಿತ್ರದ ಮೂಲಕ ಪಕ್ಕಾ ಆ್ಯಕ್ಷನ್ ಹೀರೋ ಅಂತಾನೆ ಗುರುತಿಸಿಕೊಂಡ ಕೋಮಲ್, “ಕೆಂಪೇಗೌಡ -2′ ನಂತರ ಮತ್ತೆ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಹೌದು, ಕೋಮಲ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅದರ ಹೆಸರು “ಕುಂಗ್ ಕಾ ಪಾಸ್’. ಈ ಹೆಸರು ಕೇಳಿದರೆ, ಒಂದಷ್ಟು ಮಂದಿಗಂತೂ ಬೇಗನೇ ಅರ್ಥ ಆಗಲ್ಲ. ಹೌದು, “ಕುಂಗ್ ಕಾ ಪಾಸ್’ ಎಂಬುದು ಚೀನಾ ಹಾಗು ಭಾರತ ಗಡಿ ಭಾಗದ ಹೆಸರು. ಅಲ್ಲಿಗೆ ಅದೊಂದು ಪಕ್ಕಾ ಮಾಸ್ ಸಿನಿಮಾ ಆಗುತ್ತೆ ಎಂಬುದರಲ್ಲಿ ಅನುಮಾನವಿಲ್ಲ. “ಕುಂಗ್ ಕಾ ಪಾಸ್’ ಚಿತ್ರದಲ್ಲಿ ಕೋಮಲ್ ಅವರು ಆರ್ಮಿ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಲ್ಲಿರುವ ಫೋಟೋ ಆ ಪಾತ್ರವನ್ನು ಸೂಚಿಸುತ್ತದೆ. ಇನ್ನು, ಈ ಚಿತ್ರವನ್ನು ನಿರೋಷ್ ಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಕೋಮಲ್ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಹೆಸರು ಪಕ್ಕಾ ಆಗಿದ್ದು, ಉಳಿದಂತೆ ಯಾರೆಲ್ಲ ತಂತ್ರಜ್ಞರು, ಕಲಾವಿದರು ಇರುತ್ತಾರೆ ಎಂಬ ವಿವರ ಇಲ್ಲ. ಅಂದಹಾಗೆ, “ಕುಂಗ್ ಕಾ ಪಾಸ್’ ಚಿತ್ರದ ಪೋಸ್ಟರ್ ಕೋಮಲ್ ಅವರ ವಾಟ್ಸಾಪ್ ಸ್ಟೇಟಸ್ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು