ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಎಸ್ ಪಿಜಿ ಭದ್ರತೆ ವಾಪಸ್, ಇನ್ಮುಂದೆ “Z “ಪ್ಲಸ್ ಭದ್ರತೆ
Team Udayavani, Aug 26, 2019, 11:24 AM IST
ನವದೆಹಲಿ:ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ನೀಡಿದ್ದ ಎಸ್ ಪಿಜಿ(ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ವಾಪಸ್ ಪಡೆದಿದ್ದು,ಇನ್ಮುಂದೆ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಪ್ರಧಾನಿ ಸಿಂಗ್ ಗೆ ಝಡ್ ಪ್ಲಸ್ ಭದ್ರತೆ ನೀಡಲಾಗುವುದು ಎಂದು ವರದಿ ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ಪ್ರಕಾರ, ಹಾಲಿ ಮತ್ತು ಮಾಜಿ ಪ್ರಧಾನಿ, ವಿಐಪಿಗಳಿಗೆ ನೀಡಿರುವ ಭದ್ರತೆ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುತ್ತದೆ. ವ್ಯಕ್ತಿಗಳಿಗೆ ಇರುವ ಬೆದರಿಕೆ ಆಧಾರದ ಮೇಲೆ ಭದ್ರತಾ ಏಜೆನ್ಸಿ ಯಾರಿಗೆ ಯಾವ ವಿಧದ ಭದ್ರತೆ ನೀಡಬೇಕು ಎಂಬುದನ್ನು ನಿರ್ಧರಿಸಿರುತ್ತದೆ ಎಂದು ವಿವರಿಸಿದೆ.
ಆ ನಿಟ್ಟಿನಲ್ಲಿ ಪ್ರಸ್ತುತ ಭದ್ರತೆಯ ಕುರಿತು ಪ್ರೊಪೆಶನಲ್ ಆಧಾರದ ಮೇಲೆ ಪುನರ್ ಪರಿಶೀಲನೆ ನಡೆಸಲಾಗಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಿರುವ ಎಸ್ ಪಿಜಿ ಭದ್ರತೆ ವಾಪಸ್ ಪಡೆದು, ಝಡ್ ಪ್ಲಸ್ ಭದ್ರತೆಯನ್ನು ಮುಂದುವರಿಸಲಾಗುತ್ತಿದೆ ಎಂದು ಹೇಳಿದೆ.