ರಾಜಧಾನಿಯಲ್ಲಿ ದಾರಿ ತಪ್ಪಿದ ಸೈಕಲ್‌ ಪಥ

ಸುದ್ದಿ ಸುತ್ತಾಟ

Team Udayavani, Sep 9, 2019, 3:10 AM IST

rajadhani

ಚಿತ್ರ: ಫ‌ಕ್ರುದ್ದೀನ್‌ ಎಚ್‌.

ವೀಕೆಂಡ್‌ ಬಂದರೆ ರಾಜಧಾನಿ ಜನರಿಗೆ ಸೈಕಲ್‌ ನೆನಪಾಗುತ್ತದೆ. ಆದರೆ ನಗರದ ಬ್ಯುಸಿ ರಸ್ತೆಗಳಲ್ಲಿ ಸೈಕಲ್‌ ಸಾಗಲು ಸ್ಥಳವೆಲ್ಲಿದೆ? ಹೀಗಾಗಿ ಸಾಕಷ್ಟು ಮಂದಿ ವಾರಾಂತ್ಯದಲ್ಲಿ ನಗರದ ಹೊರವಲಯದಾಚೆಗೆ ಹತ್ತಾರು ಕಿ.ಮೀ ದೂರದವರೆಗೆ ಸೈಕ್ಲಿಂಗ್‌ ಮಾಡುತ್ತಾರೆ. ಆದರೆ ಸಂಚಾರ ದಟ್ಟಣೆ ನಿವಾರಣೆ ಹಾಗೂ ವಾಯು ಮಾಲಿನ್ಯ ನಿಯಂತ್ರಿಸಲು ನಗರದಲ್ಲಿ ಪ್ರತ್ಯೇಕ ಸೈಕಲ್‌ ಪಥಗಳನ್ನು ನಿರ್ಮಿಸುವ ಅಗತ್ಯವಿದೆ. ದುರಂತವೆಂದರೆ ಪ್ರಸ್ತುತ ನಗರದಲ್ಲಿ ನಿರ್ಮಿಸಿರುವ ಸೈಕಲ್‌ ಪಥಗಳು ಕಾರುಗಳ ಪಾರ್ಕಿಂಗ್‌ ತಾಣಗಳಾಗಿವೆ. ಹೀಗಾಗಿ ಸೈಕಲ್‌ ರೈಡ್‌ ಅಭಿಯಾನಕ್ಕಷ್ಟೇ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿನ ಸೈಕಲ್‌ ಪಥಗಳ ಸ್ಥಿತಿಗತಿ ಕುರಿತ ವಿವರ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

ಬೆಂಗಳೂರು: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸೈಕಲ್‌ ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ವಾರಾಂತ್ಯದಲ್ಲಿ ಸೈಕ್ಲಿಂಗ್‌ ಹೊರಡುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದಕ್ಕೆಂದೇ ಸೈಕಲ್‌ ಕ್ಲಬ್‌ಗಳು ಪ್ರಾರಂಭವಾಗಿವೆ. ಆದರೆ, ಇದಕ್ಕೆ ಬೇಕಾದ ವಾತಾವರಣ ಮಾತ್ರ ಸೃಷ್ಟಿಯಾಗುತ್ತಿಲ್ಲ. ವಾರಾಂತ್ಯದಲ್ಲಿ ಕಾರ್‌ಗಳ ಮೇಲೆ ಸೈಕಲ್‌ ಜೋತು ಬಿಟ್ಟು ಟ್ರಿಪ್‌ ಹೋಗುವ ಹೊಸ ಟ್ರೆಂಡ್‌ ಅನ್ನು ಯುವಜನತೆ ಶುರು ಮಾಡಿದ್ದಾರೆ. ನಗರದ ಹೊರವಲಯದಲ್ಲಿನ ಐಟಿ-ಬಿಟಿ ಕಂಪನಿಗಳಲ್ಲಿನ ಉದ್ಯೋಗಿಗಳು ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಗೇರ್‌ ಬದಲಾಯಿಸುವ ಬೈಕ್‌ಗಳಿಗಿಂತ ಸೈಕಲ್‌ ಪೆಡಲ್‌ ತುಳಿಯಲು ಮುಂದಾಗಿದ್ದಾರೆ. ಇದಕ್ಕಾಗಿ ಅಭಿಯಾನವೇ ಪ್ರಾರಂಭವಾಗಿದೆ.

ಸೈಕಲ್‌ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ 2012ರಲ್ಲೇ ಮೆಟ್ರೋ ರೈಲು ನಿಗಮದೊಂದಿಗೆ ಡಲ್ಟ್ ಅಟ್‌ಕ್ಯಾಗ್‌ (ಆಟೋಮೇಟೆಡ್‌ ಬೈಸಿಕಲ್‌ ಶೇರಿಂಗ್‌ ಸಿಸ್ಟಮ್‌) ಪ್ರಾರಂಭಿಸಿತ್ತು. ಅದೇ ರೀತಿ ಸೈಕಲ್‌ ಸವಾರರಿಗೆ ನೆರವಾಗುವ ಉದ್ದೇಶದಿಂದ ಜಯನಗರ ಮತ್ತು ಎಂ.ಜಿ. ರಸ್ತೆಗಳಲ್ಲಿ ಪ್ರತ್ಯೇಕ ಸೈಕಲ್‌ ಪಥ ನಿರ್ಮಾಣ ಮಾಡಲಾಗಿದೆ. ಆದರೆ, ಜಯನಗರದಲ್ಲಿ ಸೈಕಲ್‌ ಪಥ ಕಾರುಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿದೆ. ಎಂ.ಜಿ ರಸ್ತೆಯ ಸೈಕಲ್‌ ಪಥದಲ್ಲೂ ಸೈಕಲ್‌ ಚಕ್ರಗಳು ತಿರುಗಿದ್ದು ವಿರಳ.

ನಗರದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಒಂದೇ ವೇಗದಲ್ಲಿ ಸ್ಫೋಟವಾಗುತ್ತಿದೆ. ಸಾರ್ವಜನಿಕರಲ್ಲಿ ಸೈಕಲ್‌ ಬಳಕೆ ಉತ್ಸಾಹ ಹೆಚ್ಚಾಗುತ್ತಿದೆಯಾದರೂ, ಅವರಿಗೆ ಸುರ ಕ್ಷತೆ ಭಾವನೆ ಮೂಡಿಸಲು ಬೇಕಾದ ಪ್ರತ್ಯೇಕ ಪಥ ನಿರ್ಮಾಣವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರದ ಸೈಕಲ್‌ ಸವಾರರು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ. ಇದೇ ಬೆಳವಣಿಗೆ ಮುಂದುವರಿದರೆ ದೆಹಲಿಯಲ್ಲಿ ಉಂಟಾಗಿರುವ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯದ ವಿಷಮ ಸ್ಥಿತಿಗೆ ಬೆಂಗಳೂರು ಕೂಡ ತಲುಪುವ ಸಮಯ ದೂರವಿಲ್ಲ.

ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಅಂದಾಜು ಏಳೂವರೆ ಕೋಟಿ ವೆಚ್ಚದಲ್ಲಿ 280 ತಾಣಗಳನ್ನು ನಿರ್ಮಾಣ ಮಾಡಲು ಮುಂದಾಗಿತ್ತು. ಇದರಲ್ಲಿ ಶೇ.50ರಷ್ಟು ತಾಣಗಳು ಇಂದಿರಾನಗರ, ಕೋರಮಂಗಲದಲ್ಲೇ ಬರುತ್ತವೆ. ಈ ಭಾಗದಲ್ಲಿ ಬೈಸಿಕಲ್‌ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಆದ್ಯತೆ ನೀಡಲಾಗಿತ್ತು. ಆದರೆ, ಇಲ್ಲಿ ಪಥ ನಿರ್ಮಾಣ ಅಭಿವೃದ್ಧಿಪಡಿಸಲು ಬೇಕಾದ ಸಹಕಾರ ಸಿಗಲಿಲ್ಲ ಎಂದು ಯೋಜನೆ ರೂಪಿಸಿರುವ ಡಿಯುಎಲ್‌ಟಿನ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

270 ನಿಲುಗಡೆ ತಾಣಗಳು: ನಗರ ಕೇಂದ್ರ ಭಾಗದಲ್ಲಿ 384 ಹಾಗೂ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಬೈಸಿಕಲ್‌ ನಿಲುಗಡೆ ತಾಣಗಳು ಹಾಗೂ 125 ಕಿ.ಮೀ. ಬೈಸಿಕಲ್‌ ಪಥ ನಿರ್ಮಿಸಲು ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ )ಯೋಜನೆ ರೂಪಿಸಿಕೊಂಡಿತ್ತು. ಈ ಪೈಕಿ ಮೊದಲ ಹಂತದಲ್ಲಿ 270 ತಾಣಗಳ ನಿರ್ಮಾಣಕ್ಕೆ ಬಿಬಿಎಂಪಿ ಗುತ್ತಿಗೆ ನೀಡಿದ್ದು, 49 ಕಿ.ಮೀ. ಪ್ರತ್ಯೇಕ ಪಥ ನಿರ್ಮಿಸಲು ಈ ಹಿಂದೆಯೇ ಯೋಜನೆ ರೂಪಿಸಲಾಗಿದೆ. ಒಟ್ಟಾರೆ ಗುರುತಿಸಿರುವ 270 ತಾಣಗಳಲ್ಲಿ 60ರಿಂದ 70 ಕಡೆ ಈಗಾಗಲೇ ಜಾಗ ಅಂತಿಮಗೊಂಡಿದ್ದು, 22 ಕಡೆಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಶೇ.60ರಷ್ಟು ತಾಣಗಳು 9×2, ಶೇ.30ರಷ್ಟು 18 x2 ಮೀ. ಹಾಗೂ ಶೇ.10ರಷ್ಟು ತಾಣಗಳು 36×2 ಮೀ. ಜಾಗದಲ್ಲಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ಮುಂದಾಗಿತ್ತು. ಆದರೆ, ಜಾಗದ ಸಮಸ್ಯೆ ಸೇರಿದಂತೆ ಯೋಜನೆ ಅಂತಿಮ ರೂಪ ಪಡೆದುಕೊಳ್ಳದೇ ಇರುವುದರಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ಬಜೆಟ್‌ನಲ್ಲಿ 4 ಕೋಟಿ ರೂಪಾಯಿ ಮೀಸಲು: 2019-20ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಪ್ರತಿ ವಾರ್ಡ್‌ಗೆ 50 ಬೈಸಿಕಲ್‌ ವಿತರಿಸುವ ಸಲುವಾಗಿ 4 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಆದರೆ, ಬಿಬಿಎಂಪಿ ಯೋಜನೆ ರೂಪಿಸಿಕೊಂಡಂತೆ ಇದನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ. “ಬಜೆಟ್‌ನಲ್ಲಿ ಉದ್ದೇಶಿಸಿದಂತೆ ಪ್ರತಿ ವಾರ್ಡ್‌ಗೂ 50 ಬೈಸಿಕಲ್‌ ನೀಡುವ ಯೋಜನೆಯನ್ನುಅನುಷ್ಠಾನಕ್ಕೆ ತರುವುದಕ್ಕೆ ಸಾಧ್ಯವಾಗಿಲ್ಲ. ಈ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಬಜೆಟ್‌ ತಡೆಹಿಡಿಯಲಾಗಿತ್ತು. ಹೀಗಾಗಿ, ಇದನ್ನು ನಿಲ್ಲಿಸಲಾಗಿತ್ತು. ಈಗ ಬಜೆಟ್‌ಗೆ ಅನುಮೋದನೆ ನೀಡಲಾಗಿದೆಯಾದರೂ, ಮತ್ತೆ ಪ್ರಾರಂಭಿಸಬೇಕಾದರೆ ಸಮಯ ಬೇಕಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಂಪನಿಗಳಿಗೆ ರ್‍ಯಾಂಕಿಂಗ್‌: ಸೈಕಲ್‌ ಸವಾರರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಸತ್ಯಶಂಕರ್‌ ಸೈಕಲ್‌ ಟು. ವರ್ಕ್‌ ಆ್ಯಪ್‌ನ ಮೂಲಕ ಹೆಚ್ಚು ಸೈಕ್ಲಿಂಗ್‌ ಮಾಡುವ ಸೈಕಲ್‌ ಸವಾರರಿಗೆ ರ್‍ಯಾಂಕ್‌ ನೀಡುತ್ತಿದ್ದಾರೆ. ಅದೇ ರೀತಿಯಲ್ಲಿ ಸೈಕಲ್‌ನ ಮೂಲಕ ಕಂಪನಿಗೆ ಬರುವ ಉದ್ಯೋಗಿಗಳಿಗೆ ನಗರದ ಹಲವು ಕಂಪನಿಗಳು ವಿಶೇಷ ಸೌಲಭ್ಯಗಳನ್ನು ನೀಡುತ್ತಿವೆ. ಈ ಮೂಲಕ ಸೈಕಲ್‌ ಬಳಕೆದಾರರಿಗೆ ಉತ್ತೇಜನ ನೀಡಲಾಗುತ್ತಿದೆ.

ಪಾರ್ಕಿಂಗ್‌ ಹಬ್‌ಗೂ ತೊಡಕು: ನಗರದಲ್ಲಿ ಬೈಸಿಕಲ್‌ ಪಥ ನಿರ್ಮಾಣದಷ್ಟೇ ಸವಾಲಿನ ಕೆಲಸ ಬೈಸಿಕಲ್‌ ಪಾರ್ಕಿಂಗ್‌ ಅವಕಾಶ ಕಲ್ಪಿಸುವುದು ಸವಾಲಿನ ಕೆಲಸ. ಇದಕ್ಕೆ ನಗರದ ವಿವಿಧ ಪ್ರದೇಶಗಳಲ್ಲಿ 250ಮೀಟರ್‌ ಅಂತರದಲ್ಲಿ ಪಾರ್ಕಿಂಗ್‌ ಹಬ್‌ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಸೈಕಲ್‌ ಪಾರ್ಕಿಂಗ್‌ನಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ. ಸೈಕಲ್‌ ಸವಾರರು ಯಾವುದಾದರೂ ಪಾರ್ಕಿಂಗ್‌ ಸೆಂಟರ್‌ನಲ್ಲಿ ಕಡ್ಡಾಯವಾಗಿ ಸೈಕಲ್‌ ಪಾರ್ಕಿಂಗ್‌ ಮಾಡಬೇಕಾಗುತ್ತದೆ. ಇದರ ಹೊರತಾಗಿ ಸೈಕ್ಲಿಂಗ್‌ ಟ್ರಿಪ್‌ ಕೊನೆಯಾಗುವುದಿಲ್ಲ.

ಪಾಲಿಕೆ ಸದಸ್ಯರ ವಿರೋಧ: ಸೈಕಲ್‌ ಪಥ ನಿರ್ಮಾಣ ಮಾಡುವುದಕ್ಕೆ ಪಾಲಿಕೆಯ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಯೋಜನೆ ಜಾರಿ ಮತ್ತಷ್ಟು ವಿಳಂಬವಾಗುವುದಕ್ಕೆ ಕಾರಣವಾಗಿದೆ. ನಗರದ ಬಹುತೇಕ ರಸ್ತೆಗಳು ಈಗಾಗಲೇ ಕಿರಿದಾಗಿದ್ದು, ಈಗ ಸೈಕಲ್‌ ಪಥಕ್ಕೂ ಜಾಗ ನೀಡುವುದರಿಂದ ಪಾದಚಾರಿ ಮಾರ್ಗ ಮತ್ತಷ್ಟು ಕಿರಿದಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಸೈಕಲ್‌ ಸ್ಟಾಂಡ್‌ಗಳ (ಪಾರ್ಕಿಂಗ್‌) ನಿರ್ಮಾಣಕ್ಕೂ ಆಕ್ಷೇಪಣೆಗಳು ಕೇಳಿಬಂದಿವೆ. ಸುಮಾರು 15ರಿಂದ 20 ತಾಣಗಳಲ್ಲಿ ಜನಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಡಿಯುಎಲ್‌ಟಿನ ಅಧಿಕಾರಿಗಳು.

ಹೊರವಲಯದಲ್ಲಿ ಪಥ ಸೂಕ್ತ: ಬಿಬಿಎಂಪಿ ಮತ್ತು ಭೂಸಾರಿಗೆ ಅಭಿವೃದ್ಧಿ ನಗರದ ಹೃದಯ ಭಾಗದಲ್ಲಿ ಸೈಕಲ್‌ ಪಥ ನಿರ್ಮಾಣಕ್ಕೆ ಮುಂದಾಗಿದೆ. ಇದರ ಬದಲಿಗೆ, ನಗರದ ಹೊರವಲಯ ಮತ್ತು ಸಿಲ್ಕ್ಬೋರ್ಡ್‌, ಮಹದೇವಪುರ ಹಾಗೂ ಬೆಳ್ಳಂದೂರು ಸೇರಿದಂತೆ ವಿಶಾಲ ರಸ್ತೆಗಳಲ್ಲಿ ಹೆಚ್ಚು ಕಂಪನಿಗಳು ಇರುವ ಕಡೆ ಸೈಕಲ್‌ ಪಥಗಳನ್ನು ನಿರ್ಮಾಣ ಮಾಡಬೇಕು. ಇದರಿಂದ ವಾಹನಗಳ ಬಳಕೆ, ಸಂಚಾರದಟ್ಟಣೆ ಹಾಗೂ ನಗರದ ವಾಯು ಮಾಲಿನ್ಯವೂ ಕಡಿಮೆಯಾಗಲಿದೆ ಎಂದು ಶಂಕರ್‌ ಅಭಿಪ್ರಾಯ ಪಡುತ್ತಾರೆ. ಸೈಕಲ್‌ ಪಥ ಹಾಗೂ ಸೈಕಲ್‌ ಪಾರ್ಕಿಂಗ್‌ಗೆ ಮೊದಲ ಹಂತದಲ್ಲಿ ಆಯ್ಕೆಯಾದ ರಸ್ತೆಗಳು ಕಬ್ಬನ್‌ ಪಾರ್ಕ್‌, ವಿಧಾನಸೌಧ, ಎಂ.ಜಿ ರಸ್ತೆ, ಕೋರಮಂಗಲ, ಇಂದಿರಾನಗರ, ಶಾಂತಿ ನಗರ ವಸಂತನಗರ ಹಾಗೂ ಎಚ್‌ಆರ್‌ಬಿಆರ್‌ ವ್ಯಾಪ್ತಿಯಲ್ಲಿ ಕೆಲವು ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಸೈಕಲ್‌ ಪಥಕ್ಕಿಂತ ಜಾಗೃತಿಯೇ ಲೇಸು: ಈಗ ನಗರದಲ್ಲಿ ನಿರ್ಮಾಣವಾಗುತ್ತಿರುವ ಸೈಕಲ್‌ ಪಥದ ಪ್ರಮಾಣ ತೀರ ಕಡಿಮೆಯಾಗಿದ್ದು, ಪ್ರತಿ ವರ್ಷ ಶೇ .200 ಮೀಟರ್‌ ನಷ್ಟು ಮಾತ್ರ ಕಾಮಗಾರಿ ಮಾಡಬಹುದು. ಇದರ ಪ್ರಕಾರ 2 ಸಾವಿರ ಕಿ.ಮೀ ರಸ್ತೆ ಪಥ ನಿರ್ಮಾಣವಾಗಬೇಕಾದರೆ ಅಂದಾಜು 20 ವರ್ಷವಾದರೂ ಬೇಕು. ಒಂದು ದಶಕ ಕಳೆದರೂ ಬೆಂಗಳೂರಿನ ವಿಸ್ತೀರ್ಣಕ್ಕೆ ಹೋಲಿಸಿದರೆ ಶೇ.20ರಷ್ಟು ಸೈಕಲ್‌ ಪಥ ಮಾತ್ರ ನಿರ್ಮಾಣವಾಗಲಿದೆ. ಇದಕ್ಕಿಂತ ಇರುವ ರಸ್ತೆಗಳಲ್ಲೇ ಸೈಕಲ್‌ ಸವಾರರಿಗೂ ಅವಕಾಶ ನೀಡುವುದು ಉತ್ತಮ. ಇದರಿಂದ ಕೋಟ್ಯಂತರ ರೂ. ಉಳಿತಾಯವಾಗಲಿದೆ. ನಗರದಲ್ಲಿ ಎಷ್ಟೇ ಪ್ರತ್ಯೇಕ ಮಾರ್ಗಗಳನ್ನು ನಿರ್ಮಾಣ ಮಾಡಿದರೂ, ಅದು ಬೀದಿ ವ್ಯಾಪಾರಿಗಳಿಗೆ, ಪಾದಚಾರಿ ಮಾರ್ಗದ ಬಳಕೆಗೆ ಹಾಗೂ ಬೈಕ್‌ ಸವಾರರು ಬಳಸಿಕೊಳ್ಳುವ ಸಾಧ್ಯತೆ ಇದೆ. ಇದರ ಬದಲು ಈಗ ಇರುವ ರಸ್ತೆಗಳಲ್ಲೇ ಸೈಕಲ್‌ ಸವಾರರಿಗೆ ಅವಕಾಶ ನೀಡಬೇಕು ಎಂದು ಸಾರಿಗೆ ತಜ್ಞರು ಸಲಹೆ ನೀಡುತ್ತಾರೆ.

ಸೈಕ್ಲಿಂಗ್‌ ಅಭಿಯಾನ ಹೆಚ್ಚಿಸಲು ಆ್ಯಪ್‌: ಸೈಕ್ಲಿಂಗ್‌ ಮೇಯರ್‌ ಎಂದೇ ಖ್ಯಾತಿ ಗಳಿಸಿರುವ ಸತ್ಯ ಶಂಕರ್‌ ಅವರು ಸೈಕಲ್‌ ಬಳಸುವವರಿಗೆ ಉತ್ತೇಜನ ನೀಡುತ್ತಿದ್ದಾರೆ. ಇದರ ಜತೆಗೆ ಸೈಕಲ್‌ ತುಳಿಯುವವರನ್ನು ಗುರುತಿಸುವ ಉದ್ದೇಶದಿಂದ “ಸೈಕಲ್‌ ಟು ವರ್ಕ್‌’ಎನ್ನುವ ಆ್ಯಪ್‌ ಪ್ರಾರಂಭಿಸಿದ್ದು, ಅದಕ್ಕೆ 192 ಕಂಪನಿಗಳ ಉದ್ಯೋಗಿಗಳು ರಿಜಿಸ್ಟರ್‌ ಮಾಡಿಕೊಂಡಿದ್ದಾರೆ. ಅದು ಈಗ ವಿವಿಧ ರಾಜ್ಯಗಳಲ್ಲೂ ಸಕ್ರಿಯವಾಗಿದೆ. ಬೆಂಗಳೂರಿನ 180 ಕಂಪನಿಗಳ ಶೇ.3ರಷ್ಟು ಉದ್ಯೋಗಿಗಳು ಸೈಕಲ್‌ ಬಳಸುತ್ತಿದ್ದಾರೆ. ಈ ಆ್ಯಪ್‌ ಡೋನ್‌ಲೋಡ್‌ ಮಾಡಿಕೊಂಡ ರಿಜಿಸ್ಟರ್‌ ಮಾಡಿಕೊಂಡರೆ ಕಂಪನಿಯ ಮಾರ್ಗ ತೋರಿಸುತ್ತದೆ ಎನ್ನುತ್ತಾರೆ ಸತ್ಯ ಶಂಕರ್‌. ಪ್ರತಿದಿನ ಒಂದು ಸಾವಿರ ಜನ ಸೈಕ್ಲಿಂಗ್‌ ಮಾಡುತ್ತಿದ್ದಾರೆ. ವಿವಿಧ ಕಂಪನಿಗಳು ಸೈಕ್ಲಿಂಗ್‌ ಮಾಡುವವರಿಗೆ ವಿಶೇಷ ಸೌಲಭ್ಯಗಳನ್ನು ನೀಡುವ ಮೂಲಕವೂ ಸೈಕ್ಲಿಂಗ್‌ ಉತ್ತೇಜ ನೀಡುತ್ತಿವೆ. ಈ ಆ್ಯಪ್‌ನಿಂದ ಯಾವ ಮಾರ್ಗದಲ್ಲಿ ಸೈಕಲ್‌ ಬಳಕೆ ಹೆಚ್ಚಾಗುತ್ತಿದೆ ಎನ್ನುವುದು ತಿಳಿಯುತ್ತದೆ. ಎಷ್ಟು ಕಿ.ಮೀ ಜನ ಸೈಕ್ಲಿಂಗ್‌ ಮಾಡುತ್ತಾರೆ ಎನ್ನುವುದೂ ತಿಳಿಯುತ್ತದೆ ಎಂದು ಅವರು ವಿವರಿಸುತ್ತಾರೆ.

ನಗರದಲ್ಲಿ ಸೈಕಲ್‌ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಸಮಸ್ಯೆಗಳು ಉಂಟಾಗಿದ್ದು, ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಈಗಾಗಲೇ ಇರುವ ಯೋಜನೆ ಪೂರ್ಣಗೊಳ್ಳದೆ ಇರುವುದರಿಂದ ಯಾವುದೇ ಹೊಸ ಯೋಜನೆಗಳನ್ನು ರೂಪಿಸಿಕೊಂಡಿಲ್ಲ.
-ವಿ.ಪೂನ್ನುರಾಜ್‌, ಡಿಯುಎಲ್‌ಟಿ ಆಯುಕ್ತ

ನಗರದ ಬಹುತೇಕ ಭಾಗಗಳಲ್ಲಿ ಸೈಕಲ್‌ ಪಥ ನಿರ್ಮಾಣಕ್ಕೆ ಜಾಗವಿಲ್ಲ. ನಗರದ ರಸ್ತೆಗಳು ವೃತ್ತಾಕಾರದಲ್ಲಿವೆ. ಸಾರ್ವಜನಿಕರೇ ಸೈಕಲ್‌ ಸವಾರರಿಗೆ ಸ್ಥಳಾವಕಾಶ ನೀಡಿದರೆ ಪ್ರತ್ಯೇಕ ಬೈಸಿಕಲ್‌ ಪಥದ ಅವಶ್ಯಕತೆ ಇರುವುದಿಲ್ಲ. ಸಾರ್ವಜನಿಕರಿಗೆ ಇರುವಂತೆಯೇ ಟ್ರಾಫಿಕ್‌ ಸಿಗ್ನಲ್‌ಗ‌ಳನ್ನು ಸೈಕಲ್‌ ಸವಾರರಿಗೂ ನೀಡಬೇಕು ಹಾಗೂ ಸೈಕಲ್‌ ಸವಾರರಿಗೆ ಅನುಕೂಲವಾಗುವ ರೀತಿಯಲ್ಲಿ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಿದರೆ ಸೈಕಲ್‌ ಸವಾರರ ಸಂಖ್ಯೆ ಹೆಚ್ಚಲಿದೆ.
-ಸೋನಲ್‌, ನಗರ ಸಾರಿಗೆ ತಜ್ಞೆ

* ಹಿತೇಶ್‌ ವೈ

ಟಾಪ್ ನ್ಯೂಸ್

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Crime: ರೌಡಿಶೀಟರ್‌ನಿಂದ ಆಟೋ ಚಾಲಕನ ಹತ್ಯೆ

Crime: ರೌಡಿಶೀಟರ್‌ನಿಂದ ಆಟೋ ಚಾಲಕನ ಹತ್ಯೆ

Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ

Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.