ಸಿಂಡ್ಬ್ಯಾಂಕ್ ಕೋರ್ಬ್ಯಾಂಕಿಂಗ್ ಮೇಲ್ದರ್ಜೆಗೆ
2 ದಿನ ಎಟಿಎಂ, ಇಂಟರ್ನೆಟ್ ಸೇವೆ ವ್ಯತ್ಯಯ
Team Udayavani, Sep 13, 2019, 5:22 AM IST
ಉಡುಪಿ: ಸಿಂಡಿಕೇಟ್ ಬ್ಯಾಂಕ್ನ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಸೆ.13ರ ರಾತ್ರಿ 10ರಿಂದ ಸೆ.15ರ ರಾತ್ರಿ 10 ಗಂಟೆಯವರೆಗೆ ಬ್ಯಾಂಕ್ನ ಎಟಿಎಂ, ಪಿಒಎಸ್, ಇಂಟರ್ನೆಟ್,
ಮೊಬೈಲ್ ಬ್ಯಾಂಕಿಂಗ್, ಐಎಂಪಿಎಸ್ ಮತ್ತು ಯುಪಿಐ ಸೇವೆಗಳು ವ್ಯತ್ಯಯವಾಗಲಿವೆ. ಇದು ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ. ಗ್ರಾಹಕರು ಸಹಕರಿಸಬೇಕು ಎಂದು ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ವಲಯ ಕಚೇರಿಯ ಪ್ರಬಂಧಕರ ಪ್ರಕಟನೆ ತಿಳಿಸಿದೆ.