ಡಿಎಲ್‌ ಮೇಳಕ್ಕೆ ಅಭೂತಪೂರ್ವ ಜನಸ್ಪಂದನೆ


Team Udayavani, Sep 19, 2019, 3:00 AM IST

dl-mela

ನೆಲಮಂಗಲ: ತಾಲೂಕು ಸಂಚಾರಿ ಪೊಲೀಸ್‌ ಠಾಣೆಯಿಂದ ವಾಹನ ಸವಾರರಿಗಾಗಿ ಹಮ್ಮಿಕೊಂಡಿದ್ದ ಡಿಎಲ್‌, ಇನ್ಷೊರೆನ್ಸ್‌, ಮೇಳಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಪಟ್ಟಣದ ಬಿ.ಆರ್‌ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಮೇಳಕ್ಕೆ ಇನ್ಸ್‌ಪೆಕ್ಟರ್‌ ಗೋವಿಂದರಾಜು ಚಾಲನೆ ನೀಡಿದರು.

ಕೇಂದ್ರ ಸರ್ಕಾರ ಮೋಟಾರ್‌ ವಾಹನ ಕಾಯ್ದೆಗೆ ತಿದ್ದುಪಡಿ ತಂದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರು ದುಬಾರಿ ದಂಡ ಕಟ್ಟಲಾಗದೇ ಪರದಾಡುತ್ತಿದ್ದರು.ಇದನ್ನು ಮನಗಂಡ ಟೌನ್‌ ಪೊಲೀಸ್‌ ಠಾಣೆ ಹಾಗೂ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಅನುಕೂಲವಾಗಲು ಬೃಹತ್‌ ಮೇಳ ಆಯೋಜಿಸಿ, ಆರ್‌ಟಿಓ ಅಧಿಕಾರಿಗಳ ಸಮ್ಮುಖದಲ್ಲಿ ದಾಖಲೆ ಪಡೆದುಕೊಂಡರು.

ಹೆಲ್ಮೆಟ್‌ ಭರ್ಜರಿ ಮಾರಾಟ: ಮೇಳದಲ್ಲಿ ಐಎಸ್‌ಐ ಮಾರ್ಕ್‌ ಹೊಂದಿದ ಹೆಲ್ಮೆಟ್‌ಗಳನ್ನು ಮಾರಾಟ ಮ ಮಾಡಲಾಯಿತು.400 ರೂ.ಬೆಲೆಯ 700 ಹೆಲ್ಮೆಟ್‌ಗಳು ಮಾರಾಟವಾದವು.ಈ ಬಗ್ಗೆ ಪ್ರತಿಕ್ರಿಯಿಸಿದ ಹೆಲ್ಮೆಟ್‌ ಮಾರಾಟಗಾರೊಬ್ಬರು, ಮೇಳದಲ್ಲಿ ಹೆಲ್ಮೇಟ್‌ಗಳು ಭರ್ಜರಿ ಮಾರಾಟವಾಗಿದ್ದು, ಐಎಸ್‌ಐ ಮುದ್ರೆಯುಳ್ಳ ಹೆಲ್ಮೆಟ್‌ಗಳಿಗಾಗಿ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.

1ಕಿ.ಮೀ ವಾಹನ ಸವಾರರು: ಮೂರು ದಿನಗಳ ಕಾಲ ನಡೆಯಲಿರುವ ಮೇಳದ ಮೊದಲ ದಿನ ಸಾವಿರಾರು ಜನರು ಭಾಗವಹಿಸಿದ್ದರು.ಕಿಕ್ಕಿರಿದು ತುಂಬಿದ್ದ ಜನರಿಂದ ಮೇಳ ಜಾತ್ರೆಯಂತೆ ಕಂಡುಬಂತು.ಡಿಎಲ್‌,ಇನ್ಷೊರೆನ್ಸ ಮಾಡಿಸಲು ಬಿಸಿಲನ್ನು ವಾಹನ ಸವಾರರು 1 ಕಿ.ಮೀ ವರೆಗೂ ಸಾಲುಗಟ್ಟಿ ನಿಂತಿದ್ದರು. ಪಟ್ಟಣದಲ್ಲಿ ಒಟ್ಟಾರೆ 2 ಸಾವಿರಕ್ಕೂ ಹೆಚ್ಚು ಜನರು ಡಿಎಲ್‌ಗಾಗಿ ಅರ್ಜಿ ಹಾಗೂ ದಾಖಲಾತಿಗಳನ್ನು ನೀಡಲಾಗಿದ್ದರೆ ಎಂದು ತಿಳಿದು ಬಂದಿದೆ. ಆರ್‌ಟಿಓ ಯಾವಾಗಮುಂದಿನ ನಿಲುವೇನು ಎಂಬುದು ಯಕ್ಷಪ್ರಶ್ನೆಯಾಗಿದೆ.

ಡಿ.ಎಲ್‌ ಯಾವಾಗ?: ಡಿಎಲ್‌ ಮೇಳದಲ್ಲಿ ಸಾವಿರಾರು ಜನ ಡಿಎಲ್‌,ಇನ್ಷೊರೆನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.ಆದರೆ, ಇಷ್ಟೊಂದು ಜನರಿಗೆ ಡಿಎಲ್‌ ಹಾಗೂ ಇನ್ಷೊರೆನ್ಸ್‌ ಸೌಲಭ್ಯ ಸಿಗುವುದು ಯಾವಾಗ ಎಂಬ ಪ್ರಶ್ನೆ ಈಗ ಮೂಡಿದೆ.ಟೌನ್‌ ಪೊಲೀಸರು ವಾಹನ ಸವಾರರಿಂದ ಮುಖ್ಯ ದಾಖಲಾತಿ ಹಾಗೂ ನಕಲು ಪ್ರತಿಗಳನ್ನು ಪಡೆದುಕೊಂಡು ಆರ್‌ಟಿಓ ಕಚೇರಿಗೆ ನೀಡಲಿದ್ದಾರೆ.

ಆದರೆ, ಆರ್‌.ಟಿ.ಓ ಅಧಿಕಾರಿಗಳು ವಾಹನ ಸವಾರರ ದಾಖಲಾತಿಯನ್ನು ಆನ್‌ಲೈನ್‌ನಲ್ಲಿ ನೊಂದಣಿ ಮಾಡಿ ಎಲ್‌ಎಲ್‌ ಹಾಗೂ ಡಿಎಲ್‌ ಮಾಡಿಕೊಡಲು ಎಷ್ಟು ದಿನಗಳಾಗುತ್ತೆ ಎನ್ನುವು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಆರ್‌ಟಿಓ ಅಧಿಕಾರಿಗಳು ವೇಗದ ಕಾರ್ಯದ ಮೂಲಕ ಅರ್ಹ ಅರ್ಜಿದಾರರಿಗೆ ಡಿಎಲ್‌ ಹಾಗೂ ಇನ್ಷೊರೆನ್ಸ್‌ ವಿತರಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಸಂದರ್ಭದಲ್ಲಿ ಸಂಚಾರಿ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಮೋಹನ್‌ಕುಮಾರ್‌, ಪುಟ್ಟಸ್ವಾಮಿ, ಎಎಸ್‌ಐ ಪ್ರಭುದೇವ್‌ ಹಾಗೂ ಸಿಬ್ಬಂದಿ ಇದ್ದರು.

ವಾಹನ ಸವಾರರ ಬಳಿ ದಂಡವಸೂಲಿ ಮಾಡುವುದಕ್ಕಿಂತ ಮೊದಲು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು, ಆರ್‌ಟಿಓ ಅಧಿಕಾರಿಗಳ ಸಹಕಾರದಿಂದ ಡಿಎಲ್‌ ಮೇಳ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ವಾಹನ ಸವಾರರು ಡಿಎಲ್‌ ಹೊಂದುವಂತೆ ಮಾಡುವುದು ನಮ್ಮ ಉದ್ದೇಶ.
-ಗೋವಿಂದರಾಜು, ಸಂಚಾರಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ 

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.