ಆರ್ಥಿಕ ಸುಧಾರಣೆಗೆ ಕೇಂದ್ರದಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

"ಉದಯವಾಣಿ' ಕಚೇರಿಗೆ ಡಿ.ವಿ. ಸದಾನಂದ ಗೌಡ ಭೇಟಿ

Team Udayavani, Sep 22, 2019, 5:00 AM IST

x-33

ಡಿವಿಎಸ್‌ ಅವರನ್ನು ಗೌತಮ್‌ ಪೈ ಅವರು ಸ್ವಾಗತಿಸಿದರು.

ಉಡುಪಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡರು ಶನಿವಾರ ಉದಯವಾಣಿ ಕಚೇರಿಗೆ ಭೇಟಿ ನೀಡಿದರು.

ಮಣಿಪಾಲ್‌ ಗ್ರೂಪ್‌ ನ ಆಡಳಿತ ನಿರ್ದೇಶಕ ಟಿ. ಗೌತಮ್‌ ಪೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಿ ಕೇಂದ್ರ ಸರಕಾರ ಆರ್ಥಿಕ ವಲಯವನ್ನು ಸುಧಾರಿಸುವಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದರು.

ವಾಹನೋದ್ಯಮದ ಪ್ರಗತಿಗೂ ಪ್ರಯತ್ನಿಸುತ್ತಿದೆ ಎಂದ ಅವರು, ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಂದ ಸಾಲ ಮೇಳವನ್ನು ಸಂಘಟಿಸಲಾಗುತ್ತಿದೆ. ಜಿಎಸ್‌ಟಿ ಜಾರಿಗೆ ಬರುವಾಗ ಅನೇಕ ತೊಡಕುಗಳಾದವು. ರಾಜ್ಯಗಳನ್ನು ಒಪ್ಪಿಸಬೇಕಿತ್ತು. ಅದನ್ನು ಪಾರಾಗಿ ಬಂದೆವು. ನೋಟು ನಿಷೇಧ ಮಾಡಿದಾಗಲೂ ಶೇ. 7.2 ಜಿಡಿಪಿ ಬೆಳವಣಿಗೆ ಇತ್ತು. ಶೇ. 8.2 ಅಭಿವೃದ್ಧಿ ಕಂಡ ಜಿಡಿಪಿ ಶೇ. 5ಕ್ಕೆ ಕುಸಿದಾಗ ಅದನ್ನು ಸರಿಪಡಿಸಲು ಸುಧಾರಣ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ನಾವು ನಿಮ್ಮಂತಹ ಜನರಿಂದ ಮಾಹಿತಿ ಪಡೆದು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸುತ್ತೇವೆ. ಅಲ್ಲಿಂದ ಅದು ತಿಂಕ್‌ಟ್ಯಾಂಕ್‌ (ಚಿಂತನ ಚಿಲುಮೆ) ಸಮಿತಿಗೆ ರವಾನೆಯಾಗಿ ಪರಿಣಾಮಕಾರಿ ಅನುಷ್ಠಾನಗೊಳ್ಳಲಿದೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ
ಇತ್ತೀಚೆಗೆ ಶಾಸಕ ಕೆ. ರಘುಪತಿ ಭಟ್‌ ಅವರು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಕೇಳಿದ್ದರು. ಇಲ್ಲಿ ಸಿಆರ್‌ಝಡ್‌ ವ್ಯಾಪ್ತಿಯ ಸಮಸ್ಯೆ ಇತ್ತು. ಈಗ ಇದರ ಮಾನದಂಡವನ್ನು 50 ಮೀ.ಗೆ ಇಳಿಸಲಾಗಿದೆ. ಇನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ತೊಂದರೆಯಾಗದು ಎಂದರು.

ಕಾಶ್ಮೀರದಲ್ಲಿ ಸಹಜಸ್ಥಿತಿಗೆ
ಕಾಶ್ಮೀರದಲ್ಲಿ ಈಗ ಸಹಜ ಸ್ಥಿತಿ ಇದೆ. ಏಳು ದಶಕಗಳಿಂದ ಇದ್ದ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಅಹಿತಕರ ಘಟನೆ ನಡೆಯಬಾರದೆಂದು ಸೈನಿಕರ ನಿಯೋಜನೆ, ಪ್ರತಿಭಟನೆ ಇತ್ಯಾದಿಗಳು ನಡೆಯದಂತೆ ಕೆಲವು ನಾಯಕರ ಗೃಹಬಂಧನ ನಡೆಸಿದ್ದೆವು. ಅಲ್ಲಿನವರ ಹಿತಕ್ಕಾಗಿ ಸೇಬಿಗೆ ಮೊದಲ ಬಾರಿ ಕನಿಷ್ಠ ಉತ್ತೇಜನ ಬೆಲೆ ನಿಗದಿಪಡಿಸಿ ಖರೀದಿಸುತ್ತಿದ್ದೇವೆ. ಇಡೀ ಜಗತ್ತೇ ನಮ್ಮ ಪರವಾಗಿದೆ ಎಂದರು.

ಸಚಿವರೊಂದಿಗೆ ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ನಾಯಕರಾದ ಕೆ. ಉದಯ ಕುಮಾರ ಶೆಟ್ಟಿ, ಕುಯಿಲಾಡಿ ಸುರೇಶ ನಾಯಕ್‌, ಮಹೇಶ್‌ ಠಾಕೂರ್‌, ದ.ಕ. ಜಿಲ್ಲೆಯ ಅಶೋಕಕುಮಾರ್‌ ರೈ ಮೊದಲಾದವರು ಇದ್ದರು.

ತೆರಿಗೆ ಕಿರುಕುಳ ನಿಯಂತ್ರಣಕ್ಕೆ ಆನ್‌ಲೈನ್‌ ವ್ಯವಸ್ಥೆ
ತೆರಿಗೆ ಸಂಗ್ರಹ ಕುರಿತು ಅಧಿಕಾರಿಗಳು ಕೊಡುವ ಕಿರುಕುಳದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಮಾಲಕರಿಗೂ ಅಧಿಕಾರಿಗಳಿಗೂ ನೇರ ಸಂಪರ್ಕವಿಲ್ಲದೆ ಎಲ್ಲ ವ್ಯವಹಾರಗಳೂ ಆನ್‌ಲೈನ್‌ನಲ್ಲಿ ಆಗುವಂತೆ ನೋಡಿಕೊಳ್ಳುವ ವ್ಯವಸ್ಥೆ ಅ. 1ರಿಂದ ಜಾರಿಗೊಳ್ಳಲಿದೆ. ಬಳಿಕ ಯಾರ ಹಸ್ತಕ್ಷೇಪಕ್ಕೂ ಅವಕಾಶವಿರುವುದಿಲ್ಲ ಎಂದು ಹೇಳಿದರು. ತೆರಿಗೆ ದಾರರ ಕ್ಷೇಮವನ್ನು ಸರಕಾರ ಕಾಪಾಡಬೇಕು. ತೆರಿಗೆ ಕಿರುಕುಳದಿಂದ ಉದ್ಯಮ ನಿಲ್ಲಿಸುವ ಸ್ಥಿತಿ ಬರಬಾರದು. ಆದ್ದರಿಂದ ಅದನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈ ಗೊಳ್ಳಬೇಕು ಎಂದ ಗೌತಮ್‌ ಪೈ ಅವರು, ದೇಶದ ಆರ್ಥಿಕ ಹಿಂಜರಿತ ತಡೆಯಲು ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ಸ್ವಾಗತಿಸಿದರು.

ಕಾಶ್ಮೀರದ ವಿಷಯ ಸಂಬಂಧವೂ ಸದಾನಂದ ಗೌಡರು ಕೇಳಿದ ಪ್ರಶ್ನೆಗೆ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ನಮ್ಮ ಆಂತರಿಕ ವಿಷಯ ಎಂದರು.

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.