ಗೌರವ ಪಡೆಯಲು ಭಾಗವತನಾದೆ: ಕಲ್ಮನೆ ನಂಜಪ್ಪ

Team Udayavani, Sep 22, 2019, 3:06 AM IST

gowrava

ಬೆಂಗಳೂರು: “ಹಿಂದೆ ರಂಗ ಕ್ಷೇತ್ರದಲ್ಲಿ ಭಾಗವತರಿಗೆ ಭಾರೀ ಗೌರವ, ಮನ್ನಣೆಯಿತ್ತು. ಆ ಗೌರವ ಪಡೆಯಲು ನಾನು ಮೂಡಲಪಾಯ ಯಕ್ಷಗಾನ ಕ್ಷೇತ್ರದ ಭಾಗವತನಾದೆ,’ ಎಂದು ಹಿರಿಯ ಕಲಾವಿದ, ತುಮಕೂರು ಜಿಲ್ಲೆ ತಿಪಟೂರು ಸಮೀಪದ ಅರಳಗುಪ್ಪೆಯ ಕಲ್ಮನೆ ನಂಜಪ್ಪ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ, ತಾವು ಸಾಗಿಬಂದ ಹಾದಿಯ ಬಗ್ಗೆ ಮೆಲಕು ಹಾಕಿದರು.

“ನಮ್ಮದು ಕಲಾವಿದರ ಮನೆತನ. ಮನೆ ವಾತಾವರಣದಿಂದ ಸಿಕ್ಕ ಪ್ರೋತ್ಸಾಹದಿಂದಾಗಿ ನಾನು 6ನೇ ವಯಸ್ಸಿನಲ್ಲೇ ಯಕ್ಷಗಾನ ಪಾತ್ರಕ್ಕೆ ಬಣ್ಣ ಹಚ್ಚಿದೆ. ಹಲವು ಪಾತ್ರ ನಿರ್ವಹಿಸಿ ಮೆಚ್ಚುಗೆ ಪಡೆದ ಬಳಿಕ, ಭಾಗವತ ಕ್ಷೇತ್ರದತ್ತ ಹೆಜ್ಜೆಯಿರಿಸಿ ಆ ಕ್ಷೇತ್ರದಲ್ಲೂ ಸೈ ಎನಿಸಿಕೊಂಡೆ,’ ಎಂದು ನಂಜಪ್ಪ ಮುಗುಳ್ನಗೆ ಬೀರಿದರು.

“ಈ ಕಲೆಯನ್ನು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಧಾರೆ ಎರೆದಿದ್ದೇನೆ. ಆದರೆ, ಈಗಿನ ಯುವಕರು ಮೂಡಲಪಾಯ ಯಕ್ಷಗಾನದತ್ತ ಒಲವು ತೋರುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತಿಗಳು, ವಿಚಾರವಂತರು ಕೈಜೋಡಿಸಿ ಈ ಕಲೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು,’ ಎಂದು ಮನವಿ ಮಾಡಿದರು.

“ತಿಪಟೂರಿನ ಸಮೀಪದ ಸ್ವಗ್ರಾಮ ಅರಳಗುಪ್ಪೆ ಮತ್ತು ತಿಪಟೂರಿನಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಆರಂಭಿಸಲಾಗಿದೆ. ಆದರೆ, ಅಲ್ಲಿಗೆ ಯುವಕರು ಬರುತ್ತಿಲ್ಲ. ಉಚಿತವಾಗಿ ಹೇಳಿಕೊಡುತ್ತೇನೆ ಎಂದರೂ ಆರಂಭದಲ್ಲಿ ಬಂದು ನಂತರ ಮಾಯವಾಗುತ್ತಾರೆ. ಹೀಗಾದರೆ ಕಲೆ ಉಳಿಸುವುದು ಹೇಗೆ,’ ಎಂದು ಬೇಸರ ವ್ಯಕ್ತಪಡಿಸಿದರು.

ಕಲ್ಲಿನ ಮನೆಯ ನಂಜಪ್ಪ: ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲೇ ನಡೆಯಿತು. ನಂತರ ಅಜ್ಜಿ ಊರಾದ ನೊಣವಿನಕೆರೆಗೆ ತೆರಳಿ ಮೆಟ್ರಿಕ್ಯೂಲೇಷನ್‌ ಓದಿದೆ. ಈ ವೇಳೆ ಮನೆ ಕಟ್ಟುವ ಸಲುವಾಗಿ ನಮ್ಮಪ್ಪ ಶಾಲೆ ಬಿಡಿಸಿದರು. ಹೀಗಾಗಿ ವ್ಯವಸಾಯದಲ್ಲಿ ತೊಡಗಿದೆ. ನಂತರ ನಾನೇ ಸ್ವತಃ ಕಲ್ಲಿನ ಮನೆ ಕಟ್ಟಿದೆ. ಅದಕ್ಕಾಗಿಯೇ “ಕಲ್ಮನೆ ನಂಜಪ್ಪ’ ಎಂದು ಹೆಸರು ಬಂತು ಎಂದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಉಪಸ್ಥಿತರಿದ್ದರು.

ಬಡಗಿ ಕೆಲಸದಲ್ಲೂ ಎತ್ತಿದ ಕೈ: “ಯಕ್ಷಗಾನದ ಭಾಗವತಿಕೆ ಮಾತ್ರವಲ್ಲ. ಬಡಗಿ ಕೆಲಸದಲ್ಲೂ ನಾನು ಹೆಸರು ಮಾಡಿದ್ದೇನೆ. ಆ ಕಾಲದಲ್ಲೇ ಮರ ಹಾಗೂ ಟಯರ್‌ ಎತ್ತಿನ ಗಾಡಿಗಳನ್ನು ತಯಾರಿಸುತ್ತಿದ್ದೆ. ಸುಮಾರು 250 ಮರದ ಗಾಡಿ ಹಾಗೂ 20 ಟಯರ್‌ ಗಾಡಿಗಳನ್ನು ತಯಾರಿಸಿದ್ದೇನೆ. ತುಮಕೂರು ಮಾತ್ರವಲ್ಲದೆ ಅನ್ಯ ಜಿಲ್ಲೆಗಳಿಂದ ಎತ್ತಿನ ಗಾಡಿಗಳನ್ನು ಮಾಡಿಸಿಕೊಳ್ಳಲು ನಮ್ಮ ಊರಿಗೆ ಬರುತ್ತಿದ್ದರು,’ ಎಂದು ಕಲ್ಮನೆ ನಂಜಪ್ಪ ಹೇಳಿದರು.

ಟಾಪ್ ನ್ಯೂಸ್

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

7

Bengaluru: ಸೈಕಲ್‌ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಬಂಧನ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.