ಛೆ!… ನಿಮ್ಮದು ಒಡೆದ ಪ್ರೀತಿಯೆ, ಹಾಗೇನಿಲ್ಲ ಇಲ್ಲಿ ನೋಡಿ

"ಅಯ್ಯೋ ಮೋಸ; ನಾನಿನ್ನು ಪ್ರೀತಿಸಲಾರೆ' ಎಂದು ಶಪತ ಮಾಡಿದ್ದೀರಾ...? ಮಾಡ್ಬೇಡಿ

Team Udayavani, Sep 26, 2019, 10:00 AM IST

love-failure

ನಮ್ಮಲ್ಲಿ ಪ್ರೀತಿಸಿ ಅದರಲ್ಲಿ ಯಶಸ್ಸಾಗುವವರು 50:50 ಎಂಬ ಮಾತಿದೆ. ಕೆಲವರು ಪ್ರೀತಿಸಿ ಅದನ್ನು ಸಾಧಿಸಿಕೊಂಡರೆ, ಕೆಲವರು ಕೈಗೂಡದ ಪ್ರೀತಿಯನ್ನು ಮತ್ತೆ ನೆನೆದು ಕಂಗಾಲಾಗುವವರೇ ಹೆಚ್ಚು. ಪ್ರೀತಿ ಅಂದರೆ ಹುಚ್ಚು, ಪ್ರೀತಿ ಎಂದರೆ ವಂಚನೆ ಎಂಬಿತ್ಯಾದಿ ಮಾತುಗಳು ನೊಂದ ಪ್ರೇಮಿಯ ತುಟಿಯಿಂದ ಉದುರುವುದಿದೆ. ಇಂಗ್ಲಿಷ್‌ ಸಾಹಿತ್ಯದಲ್ಲಿ ಎರಡು ಕವಿಗಳ ಭಿನ್ನ ಮಾತುಗಳಿವೆ. “ಶಿ/ಹಿ ಫಾಲನ್‌ ಇನ್‌ ಲವ್‌’ ಎಂಬುದು. ಅದಕ್ಕೆ ಮತ್ತೋರ್ವ ಕವಿ ಪ್ರೀತಿಯನ್ನು ಉಲ್ಲೇಖೀಸುತ್ತಾ “ಶಿ/ಹಿ ರೈಸ್‌ ಇನ್‌ ಲವ್‌’ ಎನ್ನುತ್ತಾರೆ. 18ನೇ ಶತಮಾನದ ಕವಿಗಳೇ ಈ ಪ್ರೀತಿಯನ್ನು ಈ ಎರಡು ತರಹನಾಗಿ ಉಲ್ಲೇಖೀಸಿರುವಾಗ ಪ್ರೀತಿಸಿದವನು ಬೇರೇ ಬೇರೆ ರೂಪದಲ್ಲಿ ವ್ಯಾಖ್ಯಾನಿಸುವುದರಲ್ಲಿ ತಪ್ಪಿಲ್ಲ. ಆದರೆ…

ತಾನು ಪ್ರೀತಿಸಿದವಳು/ನು ನನ್ನನ್ನು ಮದುವೆಯಾದಗೇ, ಬೇರೆ ಯಾರನ್ನೋ ವಿವಾಹವಾದರೆ/ ತನ್ನನ್ನು ತೊರೆದು ಬೇರೆ ಯಾರನ್ನೂ ಬಯಸಿದರೆ ಅದರಿಂದ ಆಗುವ ಸಂಕಟ ನೊಂದ ಹೃದಯಕ್ಕೆ ಮಾತ್ರ ಗೊತ್ತು. ಆ ದು:ಖವನ್ನು ಇನ್ಯಾವುದೋ ರೂಪದಲ್ಲಿ ಹೊರ ಪ್ರಪಂಚಕ್ಕೆ ಹೇಳುವ ಅವರ ತುಡಿತ ನಾನಾ ವೇಗದಲ್ಲಿ, ಹಲವು ರೂಪದಲ್ಲಿರುತ್ತದೆ. ಅದು ಅರ್ಥವಾಗುತ್ತದೆ. ಒಮ್ಮೆ ಪ್ರೀತಿಸಿ ಸೋತವನು/ವಳು ಮತ್ತೆಂದೂ ಪ್ರೀತಿಸಲಾರೆ ಎಂಬುದು ಆ ಕ್ಷಣದ ಮಾತಾದರೆ, ಅದನ್ನು ದೀರ್ಘ‌ಕಾಲ ಉಳಿಸಿಕೊಂಡವರೂ ಇದ್ದಾರೆ. ಆದರೆ ಕೆಲವರು ಮತ್ತೆ ತನ್ನ ಪ್ರೀತಿಯ ಹುಡುಕಾಟದಲ್ಲಿರುತ್ತಾರೆ. ಇವೆಲ್ಲದರ ನಡುವೆ ಪ್ರೀತಿಯ ಹಾಡುಗಳು ಕೇಳುತ್ತಿದ್ದ ಕಿವಿಗಳು ಇದ್ದಕ್ಕಿಂದಂತೆ “ಪ್ಯಾಥೋಸ್‌’ ಗಳತ್ತ ಹೊರಲಿರುತ್ತದೆ.

ಆದರೆ “ನ್ಯಾಶನಲ್‌ ಅಕಾಡೆಮಿ ಆಫ್ ಸೈನ್ಸ್‌’ ಎಂಬ ನಿಯತಕಾಲಿಕೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯೊಂದು ಒಡೆದ ಹೃದಯಗಳನ್ನು ಒಂದು ಮಾಡುವ ಕುರಿತು ಆಸಕ್ತಿಕರ ಮಾಹಿಯನ್ನು ಒಟ್ಟುಗೂಡಿಸಿದೆ. ಬ್ರೇಕ್‌ಆಪ್‌ ಆದ ಪ್ರತಿಯೊಬ್ಬರು ತಮ್ಮ ಮಾಜಿ ಲವರ್‌ಗಳ ಚಹರೆ, ಗುಣಗಳನ್ನು ಹೋಲುವಂತಹ ವ್ಯಕಿಯನ್ನು ಬಯಸುತ್ತಾರೆ. ಒಡೆದು ಚದುರಿದ ಹೃದಯಗಳು ಮತ್ಯಾವುದೋ ನೊಂದ ಹೃದಯವನ್ನು ಕೂಡುತ್ತದೆ ಎಂದಿದೆ.

ಬೇಡ ಬೇಡ ಎಂದರೂ ಅಂತವರೇ ಸಿಕ್ಕುತ್ತಾರೆ

ಬ್ರೇಕ್‌ಆಪ್‌ ಆದ ಮೇಲೆ ಇತಿಹಾಸ ನೆನಪಿಸಿ, ಅಯ್ಯೋ ಬೇಡ ಎಂದರೂ ಮತ್ತೆ ಮತ್ತೆ ನೆನಪಾಗಿ ಬಿಡುತ್ತದೆ. ಪ್ರವಾಸಿ ತಾಣಗಳು, ಶಾಪಿಂಗ್‌ ಮಾಲ್‌ಗ‌ಳು, ಸಿನೆಮಾ ಥೀಯೇಟರ್‌ಗಳು, ಪಾರ್ಕ್‌ಗಳು, ಬಸ್‌ಗಳು, ರೈಲು ಪ್ರಯಾಣಗಳು, ಪಾರ್ಕಿಂಗ್‌ನಲ್ಲಿ ಸಿಲುಕಿಕೊಂಡಿರ ಬೇಕಾದರೆ ಎದುರಿನ ಬೈಕ್‌ನಲ್ಲಿ ಅಪ್ಪಿಕೊಂಡು ಕುಳಿತಿರುವ ಪ್ರೇಮಿಗಳು/ ನಗು ನಗುತಾ ಹಾಯಾಗಿ ನಡೆದಾಡುತ್ತಿರುವ ಲವರ್‌ಗಳನ್ನು ನೋಡಿದಾಗ ತನ್ನ ಮಾಜಿ ಪ್ರೇಮ ಕುರಿತಾದ ಹಳೆ ನೆನಪುಗಳು ತಟ್ಟೆಂದು ನೆನಪಾಗುತ್ತದೆ. ಅದು ತಪ್ಪಲ್ಲ.

ಪ್ರೀತಿ ಹಸಿರಾಗಿರುವ ವೇಳೆ ತಾವಿಬ್ಬರು ನಡೆದಾಡಿದ ಜಾಗಗಳಿಗೆ ಮತ್ತೆ ಒಂಟಿಯಾಗಿ/ಖಾಲಿ ಹೃದಯದೊಂದಿಗೆ ತೆರಳುವ “ದುಸ್ಥಿತಿ’ ಬಂದರೇ ನೆನೆದು ಯಾತನೆ ಪಡುವುದು ಮಾಮೂಲಿ. ಮತ್ತೆ ಎಂದೂ ಪ್ರೀತಿಯ ಸಹವಾಸ ಬೇಡಪೆ³ ಎಂದರೂ ಮನಸ್ಸು ಒಪ್ಪಬೇಕಲ್ವೆ. ಈ ಅಧ್ಯಯನವು ಅದನ್ನೇ ಹೇಳುತ್ತಿದೆ. ಇದರ ಪ್ರಕಾರ ಅವಳ/ನ ಗುಣವುಳ್ಳವರು ಮತ್ತೆ ನನಗೆ ಸಿಗದೇ ಇರಲಿ ಎಂದುಕೊಂಡಿರುತ್ತಾರಂತೆ. ಆದರೆ ವಿಚಿತ್ರ ಎಂದರೆ ಸ್ವಲ್ಪ ಸಮಯದ ಬಳಿಕ ಅವಳ/ನ ದೇ ಒಳ್ಳೆಯ ಗುಣ/ಕಾಳಜಿ ಇರುವ ಹುಡುಗಿ/ಗ ನನಗೆ ಪ್ರಾಪ್ತಿಸಲಿ ಎಂದು ಅಭಿಲಾಷೆ ಪಡುತ್ತಿರುತ್ತಾನೆ/ಳೆ ಎಂದು ವರದಿ ಉಲ್ಲೇಖೀಸಿದೆ. ನಾವು ಪೂರ್ಣ ಪ್ರಮಾಣದಲ್ಲಿ ಬಯಸದಿದ್ದರೂ, ಹೃದಯ ಮಾತ್ರ ಒಂಟಿಯಾಗಿರಲು ಇಚ್ಚಿಸದೇ ಮತ್ತೆ ಮಾಜಿ ಪ್ರೇಮಿಯದ್ದೇ ಗುಣವುಳ್ಳ ಪ್ರೀತಿಯನ್ನು ಸಂಪಾದಿಸುತ್ತದೆ ಎಂದಿದೆ.

ಈ ವರದಿಗೆ “ಯೆಸ್‌’ ಎಂದ ಪ್ರೇಮಿಗಳು

ಒಟ್ಟು 332 ಜೋಡಿಗಳನ್ನು ಸಮೀಕ್ಷೆಗೆ ಒಳಪಡಿಸಿದ್ದು, ಈಗ ಇರುವ ಪ್ರೇಮಿಯನ್ನು ನಿಮ್ಮ ಮಾಜಿ ಪ್ರೇಮಿಯ ಗುಣಲಕ್ಷಣಗಳೊಂದಿಗೆ ಹೋಲಿಕೆ ಮಾಡಿ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರಂತೆ. ಈ ವೇಳೆ ಹಳೆ ಪ್ರೇಮಿಯ ಗುಣಗಳು ಹೊಸ ಲವರ್‌ ಅಲ್ಲಿಯೂ ಇದ್ದು, ಪುನ: ಅಂತಹ ವ್ಯಕ್ತಿತ್ವದವರೊಂದಿಗೆ ಪ್ರೇಮಾಂಕುರವಾಗುತ್ತಿದೆ ಎಂಬುದನ್ನು ಅಷ್ಟೂ ಪ್ರೇಮಿಗಳು ಹಂಚಿಕೊಂಡಿದ್ದಾರೆ ಎಂಬ ವರದಿಯನ್ನು ಉಲ್ಲೇಖೀಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಅಂತೂ ಉಪಯೋಗಕ್ಕೆ ಬಂತು ಹಳೆ ಅನುಭವ

ಮಾಜಿ ಪ್ರೇಮಿಯಲ್ಲಿದ್ದ ಗುಣಗಳೇ ಹೊಸ ಲವರ್‌ ಅಲ್ಲಿ ಇದ್ದರೆ ಒಂದು ಉಪಯೋಗವಿದೆ ಎಂದು ಮಾಜಿ ಒಡೆದ ಹೃದಯ ಹೇಳುತ್ತವೆ. ಅದೇನಪ್ಪಾ ಎಂದರೆ ಪ್ರೀತಿಯಲ್ಲಿ ಕೋಪ-ಪಾಪ ಎಲ್ಲಾ ಸಹಜವೇ. ಅವರು ಎಂದಾದರೂ ಕೋಪಿಸಿಕೊಂಡಾಗ ಹೇಗೆ ಅವರನ್ನು ಒಲೈಸಬೇಕು, ಕೋಪವನ್ನು ತಣಿಸಬೇಕು ಎಂಬುದು ಇಬ್ಬರಿಗೂ ಇದ್ದ ಅನುಭವ ಇಲ್ಲಿ ಉಪಯೋಗಕ್ಕೆ ಬರುತ್ತದೆ ಎಂದಿದೆ ವರದಿ. ಮಾತ್ರವಲ್ಲದೇ ಹುಡುಗ/ಗಿಯ ಆಸೆಗಳು, ಬಯಕೆಗಳು, ಇಷ್ಟಾರ್ಥಗಳನ್ನು ಪೂರೈಸಲೂ ಹಳೆಯ ಅನುಭವ ನೆರವಿಗೆ ಬರುತ್ತವೆ ಎಂಬ ವಿಷಯವನ್ನು ಈ ವರದಿ ಗುಟ್ಟಾಗಿ ಇಟ್ಟಿಲ್ಲ.

ಟಾಪ್ ನ್ಯೂಸ್

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.