ಈ ತಿಂಗಳು 11 ದಿನ ಬ್ಯಾಂಕ್ಗಳಿಗೆ ರಜೆ
Team Udayavani, Oct 1, 2019, 6:01 AM IST
ಹೊಸದಿಲ್ಲಿ: ಅಕ್ಟೋಬರ್ನಲ್ಲಿ ಹಬ್ಬಗಳ ಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿಯೇ ರಜೆಗಳ ಸಂಖ್ಯೆಯೂ ಹೆಚ್ಚಿದೆ. ಗಾಂಧಿ ಜಯಂತಿಯಿಂದ ಆರಂಭವಾಗಿ ದೀಪಾವಳಿಯವರೆಗೆ ಸಾಲು ಸಾಲು ರಜೆಗಳಿಂದಾಗಿ ಬ್ಯಾಂಕ್ಗಳು ಈ ಇಡೀ ತಿಂಗಳಲ್ಲಿ ಒಟ್ಟು 11 ದಿನ ಬಾಗಿಲು ಮುಚ್ಚಿರಲಿವೆ. ಹೀಗಾಗಿ ಅಕ್ಟೋಬರ್ನಲ್ಲಿ ಬ್ಯಾಂಕ್ಗಳು ಕೇವಲ 20 ದಿನ ಕೆಲಸ ಮಾಡಲಿವೆ.
ಅ. 2ರಂದು ಗಾಂಧಿ ಜಯಂತಿ ರಜೆ. ಅ. 6ರಂದು ರವಿವಾರ, 7ರಂದು ಮಹಾನವಮಿ ಮತ್ತು 8ರಂದು ದಸರಾ ಇದ್ದು, ಮೂರು ದಿನ ಸತತವಾಗಿ ಬ್ಯಾಂಕ್ ರಜೆ ಇರಲಿದೆ. ಅ. 12 ಮತ್ತು 13ರಂದು ಎರಡನೇ ಶನಿವಾರ ಹಾಗೂ ರವಿವಾರ ವಾದ್ದರಿಂದ ರಜೆ ಇರಲಿದೆ. ಮೂರನೇ ವಾರದಲ್ಲಿ ಅ. 20ರಂದು ರವಿವಾರವಾದ್ದರಿಂದ ರಜೆ ಇರಲಿದೆ. ಅ. 26 ಮತ್ತು 27ರಂದು ನಾಲ್ಕನೇ ಶನಿವಾರ ಹಾಗೂ ರವಿವಾರವಾಗಿದ್ದು, ಅನಂತರ ಅ. 28 ಮತ್ತು 29ರಂದು ದೀಪಾವಳಿ ನಿಮಿತ್ತ ರಜೆ ಇರಲಿದೆ. ಆದರೆ ಇದರಲ್ಲಿ ರಾಜ್ಯದಿಂದ ರಾಜ್ಯಕ್ಕೆ ರಜೆಯ ದಿನಾಂಕ ವ್ಯತ್ಯಾಸವಾಗಲಿದ್ದು, ಆರ್ಬಿಐ ಈ ರಜೆಗಳನ್ನು ಪಟ್ಟಿ ಮಾಡಿದೆ.