ಕುಡಿಯುವ ನೀರಿನ ತೊಟ್ಟಿಗೆ ಚರಂಡಿ ನೀರು!

ಚರಂಡಿ ನೀರು ಹೊರ ಹಾಕುವ ವೆಟ್‌ವೆಲ್‌ನಿಂದ ಸೋರಿಕೆ

Team Udayavani, Oct 13, 2019, 11:27 AM IST

13-October-6

ವಿಜಯಪುರ: ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಅವಾಂತರದಿಂದ ನಗರ ನಿವಾಸಿಗಳು ಕಂಗೆಟ್ಟಿದ್ದಾರೆ. ಇದರ ಮಧ್ಯೆ ನಗರದ ಪಡಗಾನೂರ ಕಾಲೋನಿಯ ಮನೆಗಳ ಕುಡಿಯುವ ನೀರಿನ ನೀರು ಸಂಗ್ರಹ ತೊಟ್ಟಿಗೆ ಪಾಲಿಕೆ ನಿರ್ಮಿಸಿರುವ ವೆಟ್‌ ವೆಲ್‌ನಿಂದ ಚರಂಡಿ ನೀರು ಸೋರಿಕೆಯಾಗಿ ಜನರು ಸಾಂಕ್ರಾಮಿಕ ರೋಗದಿಂದ ಬಳಲುವಂತಾಗಿದೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದರೂ ಜನರಿಗೆ ಮಾತ್ರ ಈ ನರಕದಿಂದ ಮುಕ್ತಿ ಸಿಕ್ಕಿಲ್ಲ.

ನಗರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮನೆಗಳ ಸುತ್ತಲೂ ಸ್ವತ್ಛತೆ ಪರಿಸರ ನಿರ್ಮಿಸಿಕೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಜಾಗ್ರತೆಯ ಪಾಠ ಮಾಡುತ್ತಾರೆ. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ತನ್ನದೇ ಕಚೇರಿಯಿಂದ ಆಗಬೇಕಿರುವ ಚರಂಡಿ ನೀರಿನ ಸೋರಿಕೆ ತಡೆಯುವಲ್ಲಿ ವಿಫ‌ಲವಾಗಿದ್ದಾರೆ ಎಂದು ಸ್ಥಳೀಯರು ಕಿಡಿ ಕಾರುತ್ತಿದ್ದಾರೆ. ನಗರದ ಅಥಣಿ ರಸ್ತೆಯಲ್ಲಿರುವ ಪಡಗಾನೂರ ಕಾಲೋನಿಯಲ್ಲಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಒಳಚರಂಡಿ ನೀರಿನ ಬಾಧೆ ಇದೆ.

ಇದನ್ನು ತಪ್ಪಿಸಲೆಂದೇ ಸರ್ಕಾರ ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯಿಂದ ವೆಟ್‌ವೆಲ್‌ ನಿರ್ಮಿಸಿ, ಪಾಲಿಕೆಗೆ ಹಸ್ತಾಂತರಿಸಿದೆ. ಈ ವೆಟ್‌ವೆಲ್‌ನಿಂದ ಪಂಪ್‌ ಅಳವಡಿಸಿ ಚರಂಡಿ ನೀರನ್ನು ಎತ್ತರದ ಪ್ರದೇಶದಲ್ಲಿನ ಚರಂಡಿಗೆ ಸಾಗ ಹಾಕಲಾಗುತ್ತದೆ.

ದಿನದ 24 ಗಂಟೆ ಈ ಕಾರ್ಯ ನಿರಂತರ ನಡೆಯಲಿದ್ದು, ಮೂರು ಪಾಳೆಯಂತೆ ಮೂವರು ಸಿಬ್ಬಂದಿ ಕೂಡ ಇಲ್ಲಿ ಕೆಲಸ ಮಾಡುತ್ತಾರೆ. ಆದರೆ, ಸದರಿ ಪ್ರದೇಶದಲ್ಲಿ ಪದೇ-ಪದೇ ವಿದ್ಯುತ್‌ ಸಮಸ್ಯೆ ಇರುವ ಕಾರಣ ವಿದ್ಯುತ್‌ ಇಲ್ಲದ ಸಂದರ್ಭದಲ್ಲಿ ವೆಟ್‌ವೆಲ್‌ನಲ್ಲಿ ಸಂಗ್ರಹವಾಗುವ ನೀರು ಪಕ್ಕದಲ್ಲಿ ತಗ್ಗು ಪ್ರದೇಶದಲ್ಲಿರುವ ಮನೆಗಳ ಸುತ್ತಲೂ ಸಂಗ್ರಹವಾಗಿ ಚರಂಡಿ ನೀರಿನಿಂದ ಸೊಳ್ಳೆ ಸೇರಿದಂತೆ ಕೀಟಗಳ ಹಾವಳಿ ಹೆಚ್ಚಿದೆ.

ಎಲ್ಲಕ್ಕಿಂತಹೆಚ್ಚಾಗಿ ಮನೆಗಳ ಸುತ್ತಲೂ ಸಂಗ್ರಹವಾಗುವ ಚರಂಡಿ ನೀರು ಭೂಮಿಯಲ್ಲಿ ಇಂಗುತ್ತಿದ್ದು, ಮನೆಗಳಲ್ಲಿ ನೀರು ಸಂಗ್ರಹಕ್ಕೆ ನಿರ್ಮಿಸಿರುವ ತೊಟ್ಟಿಗಳಿಗೆ ಹಾಗೂ ಕೊಳವೆ ಬಾವಿಗಳಿಗೆ ಸೇರತೊಡಗಿದೆ. ಇದರಿಂದ ಜನರು ಮಲೀನ ನೀರು ಸೇವನೆ ಅನಿವಾರ್ಯವಾಗಿದ್ದು, ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವಂತಾಗಿದೆ.

ಮತ್ತೂಂದೆಡೆ ಚರಂಡಿ ನೀರು ಸಂಗ್ರಹವಾಗುತ್ತಿರುವ ಮನೆಗಳ ಸುತ್ತಲೂ ಮುಳ್ಳುಕಂಟಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ವಿಷ ಜಂತುಗಳ ಹಾವಳಿಯೂ ಹೆಚ್ಚಾಗಿದೆ. ರಾತ್ರಿ ವೇಳೆ ಈ ಭಾಗದ ರಸ್ತೆಗಳಲ್ಲಿ ಸಂಚರಿಸಲು ಭಯವಾಗುತ್ತಿದೆ. ಬೀದಿ ದೀಪಗಳ ವ್ಯವಸ್ಥೆಯೂ ಸೂಕ್ತವಾಗಿ ನಿರ್ವಹಣೆ ಇಲ್ಲದೇ ಕತ್ತಲಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಇಷ್ಟಿದ್ದರೂ ಯಾರೋಬ್ಬರೂ ನಮ್ಮ ಕಾಲೋನಿ ಕಡೆ ತಲೆ ಹಾಕುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ವೆಟ್‌ವೆಲ್‌ ಚರಂಡಿ ನೀರಿನ ನಿರ್ವಹಣೆಯಲ್ಲಿನ ಲೋಪದಿಂದಾಗಿ ಆಗುತ್ತಿರುವ ಸಮಸ್ಯೆ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕಿದ್ದರೂ ತ್ವರಿತ ಕ್ರಮ ಕೈಗೊಂಡಿಲ್ಲ. ಹಲವು ಅಧಿಕಾರಿಗಳು
ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದು ಬಿಟ್ಟರೆ ಪಡಗಾನೂರ ಕಾಲೋನಿಗಳ ಮನೆಗಳ ಸುತ್ತಲೂ ಆವರಿಸಿರುವ ಚರಂಡಿ ನೀರು ಸ್ವತ್ಛಗೊಳಿಸುವಲ್ಲಿ ಗಂಭೀರ ಕ್ರಮ ಕೈಗೊಂಡಿಲ್ಲ. ವಿದ್ಯುತ್‌ ಇಲ್ಲದ ಸಂದರ್ಭದಲ್ಲಿ ವೆಟ್‌ವೆಲ್‌ನಲ್ಲಿ ಪಂಪ್‌ ಕೆಲಸ ಮಾಡದ ಕಾರಣ ಸಂಗ್ರಹವಾಗುವ ಚರಂಡಿ ನೀರು ನಿರಂತರ ಸೋರಿಕೆಯಾಗಿ ರಸ್ತೆಗಳಲ್ಲಿ ಹಾಗೂ ಪಕ್ಕದಲ್ಲಿನ ಮನೆಗಳನ್ನು ಸುತ್ತುವರಿದಿದೆ. ವೆಟ್‌ವೆಲ್‌ ಪಂಪ್‌ ನಿರಂತರ ಕೆಲಸ ನಿರ್ವಹಿಸಲು ವಿದ್ಯುತ್‌ ಸಂಪರ್ಕ ಕಡಿತವಾದ ಸಂದರ್ಭದಲ್ಲಿ ಜನರೇಟರ್‌ ಮೂಲಕ ಪಂಪ್‌ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಮಹಾನಗರ ಪಾಲಿಕೆ ಆಧಿಕಾರಿಗಳನ್ನು ಸಂಪರ್ಕಿಸಿದರೆ ವೆಟ್‌ವೆಲ್‌ ಸೋರಿಕೆ ಕುರಿತು ತಮ್ಮ ಗಮನಕ್ಕಿದೆ. ವಿದ್ಯುತ್‌ ಸಮಸ್ಯೆ ಇರುವ ಕಾರಣ ವೆಟ್‌ವೆಲ್‌ ಪಂಪ್‌ ಕೆಲಸ ಮಾಡಲಾಗದೇ ಸುತ್ತಲಿನ ಮನೆಗಳಿಗೆ ಹಾಗೂ ಜಲ ಮೂಲಗಳಿಗೆ ನುಗ್ಗುತ್ತಿರುವುದನ್ನು ಅವಲೋಕಿಸಿದೆ. ಹೀಗಾಗಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.