ಬಾಬರ್‌ನಿಂದ ಮಸೀದಿ: ಸಾಕ್ಷ್ಯವೆಲ್ಲಿದೆ?

ಈ ಅಂಶ ಸಾಬೀತುಪಡಿಸುವಲ್ಲಿ ಸುನ್ನಿ ಮಂಡಳಿ ವಿಫ‌ಲ: ಸುಪ್ರೀಂನಲ್ಲಿ ಹಿಂದೂ ಸಂಘಟನೆಗಳ ವಾದ

Team Udayavani, Oct 17, 2019, 5:26 AM IST

f-21

ಹೊಸದಿಲ್ಲಿ: ಮೊಘಲ್‌ ಚಕ್ರವರ್ತಿ ಬಾಬರ್‌ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಿದ್ದ ಎಂಬ ವಾದವನ್ನು ಪುಷ್ಟೀಕರಿಸಲು ಸುನ್ನಿ ವಕ್ಫ್ ಮಂಡಳಿ ವಿಫ‌ಲವಾಗಿದೆ. ಜತೆಗೆ ಇನ್ನೂ ಹಲವು ಮುಸ್ಲಿಂ ಸಂಘಟನೆಗಳಿಗೆ ಈ ವಾದವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಹಿಂದೂ ಸಂಘಟನೆಗಳ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ ಖ್ಯಾತ ನ್ಯಾಯವಾದಿ ಸಿ.ಎಸ್‌.ವೈದ್ಯನಾಥನ್‌ ಹೇಳಿದ್ದಾರೆ.

ಅಯೋಧ್ಯೆಯಲ್ಲಿ 2.77 ಎಕರೆ ಜಮೀನಿನ ಒಡೆ ತನಕ್ಕೆ ಸಂಬಂಧಿಸಿದ ವಾದ ಮಂಡನೆಯ ಕೊನೆಯ ದಿನವಾದ ಬುಧವಾರ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠದ ಮುಂದೆ ವಿದ್ವತ್‌ಪೂರ್ಣವಾಗಿ ರುವ ವಾದ ಮಂಡನೆ ನಡೆಯಿತು.

ಚರಿತ್ರೆಯ ದಿನಗಳಲ್ಲಿ ಮೊಘಲ್‌ ದೊರೆ ಬಾಬರನೇ ರಾಜನ ವಶದಲ್ಲಿದ್ದ ಜಮೀನಿನಲ್ಲಿ ಮಸೀದಿ ನಿರ್ಮಿಸಿದ ಎನ್ನುವುದು ಮುಸ್ಲಿಂ ಸಂಘಟನೆಗಳ ವಾದ. ಆದರೆ, ಅದಕ್ಕೆ ಸೂಕ್ತ ಪುರಾವೆಗಳನ್ನು ನೀಡುವಲ್ಲಿ ಮತ್ತು ಅದನ್ನು ಪುಷ್ಟೀಕರಿಸುವಲ್ಲಿ ಅವರು ವಿಫ‌ಲರಾಗಿದ್ದಾರೆ ಎಂದರು ವೈದ್ಯನಾಥನ್‌. ಒಂದು ವೇಳೆ ಜಮೀನು ಸಮು ದಾಯಕ್ಕೇ ಸೇರಿದ್ದು ಎಂಬ ಅಂಶವನ್ನು ಮುಸ್ಲಿಂ ಸಮು ದಾಯದವರು ಹೇಳಿ ಕೊಂಡರೆ, ಮಸೀದಿ ನಿರ್ಮಾಣ ಕ್ಕಿಂತ ಮೊದಲು ಅಲ್ಲಿ ಮೂರ್ತಿ ಅಥವಾ ದೇಗುಲ ಇತ್ತು ಎಂಬ ಅಂಶವನ್ನು ಒಪ್ಪಿಕೊಂಡಂತಾ ಗುತ್ತದೆ ಎಂದು ವಾದಿಸಿದರು.

ಮುಸ್ಲಿಂ ಸಮುದಾಯಕ್ಕೆ ಅಯೋಧ್ಯೆಯಲ್ಲಿ ನಮಾಜು ಮಾಡಲು ಇತರ ಮಸೀದಿಗಳು ಇವೆ. ಹಿಂದೂಗಳಿಗೆ ಶ್ರೀರಾಮ ಹುಟ್ಟಿದ ಸ್ಥಳ ಎಂದು ಹೇಳುವುದಕ್ಕೆ ಇರುವುದು ಅಯೋಧ್ಯೆಯಲ್ಲಿನ ಈ ಸ್ಥಳ ಮಾತ್ರ. ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂದರು. ಗೋಪಾಲ್‌ ಸಿಂಗ್‌ ವಿಶಾರದ ಎಂಬ ಭಕ್ತರ ಪರ ವಾಗಿ ವಾದಿಸಿದ ನ್ಯಾಯವಾದಿ ರಂಜಿತ್‌ ಕುಮಾರ್‌ ಕೂಡ ಬಾಬರನೇ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಿದ ಎಂಬ ಅಂಶದ ಬಗ್ಗೆ ಮುಸ್ಲಿಂ ಸಂಘಟನೆಗಳು ಪುಷ್ಟೀಕರಿಸಲು ಯಾವುದೇ ಪ್ರಬಲ ಅಂಕಗಳನ್ನು ನೀಡಿಲ್ಲವೆಂದರು. ಈ ಬಗ್ಗೆ 1969 ರಲ್ಲಿ ಯೇ ಸುನ್ನಿ ವಕ್ಫ್ ಮಂಡಳಿ ಅರ್ಜಿ ಸಲ್ಲಿಸಿತ್ತು ಎಂದರು.

ಅಖೀಲ ಭಾರತ ಹಿಂದೂ ಮಹಾಸಭಾ ಪರ ವಾದಿ ಸಿದ ವಿಕಾಸ್‌ ಸಿಂಗ್‌ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ ತೀರ್ಪಿನ ಕೆಲವು ಅಂಶಗಳನ್ನು ನ್ಯಾಯಪೀಠದ ಮುಂದೆ ಉಲ್ಲೇಖೀಸಿದರು. ಅಯೋಧ್ಯೆ   ಯಲ್ಲಿಯೇ ರಾಮ ಹುಟ್ಟಿದ್ದ ಎಂಬುದು ಹಿಂದೂ ಸಮುದಾಯದ ನಂಬಿಕೆ ಎಂದರು.

ಹಿಂದೂ ಸಂಘಟನೆಗಳಿಂದ ವಾದ: ದಿನದ ಆರಂಭದಲ್ಲಿ ನಿರ್ಮೋಹಿ ಅಖಾಡಾ ಪರ ಜೈದೀಪ್‌ ಗುಪ್ತಾ ರಾಮ ಜನ್ಮಭೂಮಿಯಲ್ಲಿನ ದೇಗುಲದಲ್ಲಿನ ಮೂರ್ತಿ ಯ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದರು. ದಿ| ಮಹಾಂತ ಅಭಿರಾಮ ದಾಸ ಅವರು ಅಯೋಧ್ಯೆಯಲ್ಲಿನ ರಾಮ ದೇಗುಲದ ಅರ್ಚಕರಾಗಿದ್ದರು. ಅವರೇ ಮೂರ್ತಿಯ ರಕ್ಷಕರು ಎಂದು ಪ್ರತಿಪಾದಿಸಿದರು. ಅರ್ಚಕರಾಗಿ ಅವರು ಸ್ವತಂತ್ರ ವ್ಯಕ್ತಿತ್ವ ಹೊಂದಿದ್ದರು. ಈ ಅಂಶವನ್ನು ಇತರರೂ ಒಪ್ಪಿಕೊಂಡಿದ್ದರು ಎಂದರು.

ಇಸ್ಲಾಂ ಅನುಸರಣೆ: ಪುನರುದ್ಧಾರ ಸಮಿತಿ ಎಂಬ ಸಂಘಟನೆ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪಿ.ಎನ್‌. ಮಿಶ್ರಾ, ಮೊಘಲ್‌ ದೊರೆ ಬಾಬರ್‌ ಇಸ್ಲಾಂ ಧರ್ಮಾನುಯಾಯಿಯಾಗಿದ್ದ. ಅದಕ್ಕೆ ಬಾಬರ್‌ನಮಾ ಎಂಬುದರಲ್ಲಿ ಉಲ್ಲೇಖವಿದೆ ಎಂದು ಪ್ರತಿಪಾದಿಸಿದರು. ಮಿಶ್ರಾ ಅವರು ಚಾರಿತ್ರಿಕ ಅಂಶಗಳನ್ನು ಉಲ್ಲೇಖೀಸುತ್ತಾ ಹೋಗುತ್ತಿರುವಾಗ ನ್ಯಾ| ಡಿ.ವೈ. ಚಂದ್ರಚೂಡ್‌, ವಿಚಾರಕ್ಕೆ ಅನುಗುಣ ವಾಗಿ ವಾದ ಮಂಡಿಸಿ ಎಂದರು.

ಮುಸ್ಲಿಂ ಸಂಘಟನೆಗಳು 1856ಕ್ಕೆ ಮೊದಲು ಜಮೀನನ್ನು ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಇಲ್ಲವೆಂದು ವಾದಿಸಿದರು. ಅದಕ್ಕೆ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್‌ ಧವನ್‌ ಆಕ್ಷೇಪ ಮಾಡಿದರು. ಹಿರಿಯ ವಕೀಲ ಮಿಶ್ರಾರ ವಾದ ಮೂರ್ಖತನಕ್ಕೆ ಹತ್ತಿರವಾಗಿದೆ. ಅವರು ಆ ಜಮೀನಿನಿಂದ ಎಷ್ಟು ಆದಾಯ ಬರುತ್ತದೆ ಎಂದು ಹೇಳಲಿಲ್ಲ ಎಂದು ಲೇವಡಿ ಮಾಡಿದರು. ಅದಕ್ಕೆ ನ್ಯಾ| ಚಂದ್ರಚೂಡ್‌ ಕಟುವಾಗಿ ಆಕ್ಷೇಪ ಮಾಡಿ ಧವನ್‌ ಅವರು ಮಿಶ್ರಾ ವಿರುದ್ಧ ವೈಯಕ್ತಿಕವಾಗಿ ನಿಂದನೆ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು.

ವಾರಸುದಾರರಿಗೆ ಇಲ್ಲ: ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್‌ ಧವನ್‌ ವಾದವನ್ನು ಪುನಾರಂ ಭಿಸಿ, ದಿ.ಮಹಾಂತ ಅಭಿರಾಮದಾಸ ಕೇವಲ ಅರ್ಚಕ ರಾಗಿದ್ದರು. ಅವರ ಉಸ್ತುವಾರಿಗೆ ಪೂಜಿಸುವ ಹಕ್ಕು ಇಲ್ಲ ಎಂದು ಹೇಳಿದ್ದಾರೆ. ಹುದ್ದೆಗೆ, ಸ್ವತ್ತಿಗೆ ವಾರಸು ದಾರರು ಇದ್ದಾರೆ. ಆದರೆ ಪೂಜೆ ಮಾಡುವುದಕ್ಕೆ ಯಾವುದೇ ವಾರಸುದಾರತ್ವ ಇಲ್ಲವೆಂದು ವಾದಿಸಿದರು ಧವನ್‌.

ಯಥಾ ಸ್ಥಿತಿ ಬೇಕು: 1992 ಡಿ.5ಕ್ಕಿಂತ ಮೊದಲು ಅಯೋಧ್ಯೆಯಲ್ಲಿ ಮಸೀದಿ ಇತ್ತು. ನಮ್ಮ ಕಕ್ಷಿದಾರರು ಅಲ್ಲಿ ಮಸೀದಿಯನ್ನೇ ನಿರ್ಮಿಸಬೇಕು ಎಂಬ ವಾದ ಮಂಡಿಸುತ್ತಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡ ಬೇಕು ಎಂದು ವಾದಿಸಿದರು. ನಾಶಗೊಂಡ ಕಟ್ಟಡ ನಮ್ಮದು. ಅದನ್ನು ಪುನರ್‌ ನಿರ್ಮಿಸುವ ಹಕ್ಕು ನಮ್ಮದು ಎಂದು ಧವನ್‌ ಅರಿಕೆ ಮಾಡಿಕೊಂಡರು.

14ರಂದು ಕೊನೆಯ ಹಂತ: ದಸರೆಗಾಗಿ ವಾರ ಕಾಲ ರಜೆಯಲ್ಲಿದ್ದ ಸುಪ್ರೀಂಕೋರ್ಟ್‌ ಅ.14ರಂದು ವಾದ ಮಂಡನೆ ಶುರು ಮಾಡಿತ್ತು. ಅಯೋಧ್ಯೆಯ ಜಮೀನು ಮಾಲೀಕತ್ವ ವಿವಾದ ಪರಿಹರಿಸಲು ನಿವೃತ್ತ ನ್ಯಾಯ ಮೂರ್ತಿ ಎಫ್.ಎಂ.ಐ.ಖಲೀಫ‌ುಲ್ಲಾ ನೇತೃತ್ವ ದಲ್ಲಿ ಮಧ್ಯಸ್ಥಿಕೆ ಸಮಿತಿ ರಚಿಸಲಾಗಿತ್ತು. ಅಂತಿಮವಾಗಿ ಸಮಿತಿ ಮೂಲಕ ವಿವಾದ ಪರಿಹರಿಸಲು ಸಾಧ್ಯವಿಲ್ಲ ಎಂದು ಕಂಡುಕೊಂಡ ಸುಪ್ರೀಂಕೋರ್ಟ್‌ ಆ.6ರಿಂದ ದಿನವಹಿ ವಿಚಾರಣೆ ನಡೆಸುವುದಾಗಿ ಘೋಷಣೆ ಮಾಡಿತ್ತು.

ಅಯೋಧ್ಯೆ ಮಾದರಿ ಪ್ರಕರಣ ಇನ್ನು ಅಸಾಧ್ಯ
ರಾಮ ಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣ ವಿಚಾರದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಂತೆಯೇ ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ವದಂತಿಗಳು ಹರಿದಾಡುತ್ತಿದ್ದವು. ಕುತೂಹಲಕಾರಿ ಅಂಶವೆಂದರೆ ಮುಂದಿನ ದಿನಗಳಲ್ಲಿ ಅಯೋಧ್ಯೆ ಮಾದರಿ ಪ್ರಕರಣ ನಡೆಯದಂತೆ ಇರಲು 1991ರಲ್ಲಿ ದಿ.ಪಿ.ವಿ.ನರಸಿಂಹ ರಾವ್‌ ನೇತೃತ್ವದ ಸರಕಾರ ವಿಶೇಷ ಕಾಯ್ದೆ ಜಾರಿಗೊಳಿಸಿತ್ತು. 1991ರ ಸೆಪ್ಟಂಬರ್‌ಲ್ಲಿ ಜಾರಿಗೊಂಡಿರುವ ಪೂಜಾ ಸ್ಥಳ (ವಿಶೇಷ ಅವಕಾಶಗಳು) ಕಾಯ್ದೆ 1991ರ ಪ್ರಕಾರ 1947 ಆ.15ರ ಬಳಿಕ ನಿಗದಿತ ಧಾರ್ಮಿಕ ಸ್ಥಳ ಹೇಗಿರುತ್ತದೆಯೋ ಹಾಗೆ ಹಾಲಿ ದಿನಕ್ಕೂ ಅನ್ವಯವಾಗುತ್ತದೆ’ ಎಂದು ಉಲ್ಲೇಖೀಸಿದೆ. ಅಂದರೆ ನಿಗದಿತ ಸ್ಥಳದಲ್ಲಿ ಚರ್ಚ್‌, ಮಸೀದಿ ಅಥವಾ ಇನ್ನು ಯಾವುದೇ ಧಾರ್ಮಿಕ ಕೇಂದ್ರಗಳು ಇದ್ದರೂ, ಅದರ ಸ್ಥಿತಿ ಬದಲಾವಣೆ ಸಾಧ್ಯವಿಲ್ಲ. ಯಾರೊಬ್ಬರೇ ಆಗಲಿ ಯಾವುದೇ ಸ್ಥಳವನ್ನು ಧಾರ್ಮಿಕ ಸ್ಥಳ ಎಂದು ಎಂದು ತಮಗೆ ಇಷ್ಟ ಬಂದಂತೆ ಬದಲು ಮಾಡಿಕೊಳ್ಳದೇ ಇರಲು ಕಾಯ್ದೆಯಲ್ಲಿ ನಿಯಮ ರೂಪಿಸಲಾಗಿದೆ. ಒಂದು ವೇಳೆ ಇಂಥ ಯತ್ನಕ್ಕೆ ಕೈ ಹಾಕಿದರೆ ಮೂರು ವರ್ಷ ಕಾರಾಗೃಹ ವಾಸ ಖಚಿತ. ರಾಜಕೀಯ ನೇತಾರರು ಇಂಥ ಕೃತ್ಯಗಳಿಗೆ ಕುಮ್ಮಕ್ಕು ನೀಡಿದ್ದು ಸಾಬೀತಾದರೆ ಅಂಥವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ.

ಯಾರದ್ದು ಏನು ವಾದ?
ಹಿಂದೂ ಸಂಘಟನೆಗಳು
1. ಅಯೋಧ್ಯೆಯಲ್ಲಿ ವಿಕ್ರಮಾದಿತ್ಯ ದೇಗುಲ ನಿರ್ಮಿಸಿದ. 11ನೇ ಶತಮಾನದಲ್ಲಿ ಅದನ್ನು ಪುನರ್‌ ನಿರ್ಮಿಸಲಾಯಿತು. ಅದನ್ನು 1526ರಲ್ಲಿ ಬಾಬರ್‌ ಅಥವಾ 17ನೇ ಶತಮಾನದಲ್ಲಿ ಔರಂಗಜೇಬ್‌ ನಾಶ ಮಾಡಿದ.

2. ಸ್ಕಂದ ಪುರಾಣ ಮತ್ತು ಅನಂತರದ ವರ್ಷ ಗಳಲ್ಲಿನ ಪ್ರವಾಸಿಗರು ದಾಖಲಿಸಿದ ಅಂಶಗಳು, ಸರಕಾರಿ ರಾಜ್ಯಪತ್ರಗಳಲ್ಲಿ ಅಯೋಧ್ಯೆ ಯಲ್ಲಿಯೇ ರಾಮ ಜನಿಸಿದ್ದ. ಈ ಬಗ್ಗೆ ಹಿಂದೂಗಳು

ನಂಬಿಕೆ ಇರಿಸಿಕೊಂಡಿದ್ದಾರೆ ಎಂಬ ಅಂಶ ಉಲ್ಲೇಖವಾಗಿದೆ.

3. ಮಸೀದಿಯ ಮೇಲಿರುವ ಕೆತ್ತನೆಗಳು ಕುರಾನ್‌ ಮತ್ತು ಹದಿಸ್‌ಗಳಲ್ಲಿ ಹೇಳಿರುವಂತೆ ನಿಷೇಧ.

4. ಸಲ್ಲಿಕೆ ಮಾಡಲಾಗಿರುವ ಸಾಕ್ಷ್ಯಗಳ ಪ್ರಕಾರ ಶತಮಾನಗಳಿಂದ ಅಯೋಧ್ಯೆಯೇ ರಾಮನ ಜನ್ಮ ಸ್ಥಾನ ಎಂಬ ನಂಬಿಕೆ.

5. ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತVನನದ ಪ್ರಕಾರ ಸ್ಥಳದಲ್ಲಿ ದೇಗುಲ ಇದ್ದ ಬಗ್ಗೆ, ಅದು ನಾಶಗೊಂಡಿದ್ದ ಬಗ್ಗೆ ದಾಖಲೆಗಳು ಇವೆ.

ಮುಸ್ಲಿಂ ಸಂಘಟನೆಗಳು
1. 1528ರಿಂದಲೇ ವಿವಾದಿತ ಸ್ಥಳದಲ್ಲಿ ಮಸೀದಿ ಇತ್ತು. ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳೂ ಇವೆ. 1855, 1934ರಲ್ಲಿ ಅದನ್ನು ನಾಶಗೊಳಿಸುವ ಪ್ರಯತ್ನ ನಡೆಸಲಾಗಿದ್ದು. 1949ರಲ್ಲಿ ಈ ಬಗ್ಗೆ ಅತಿಕ್ರಮಣದ ಕೇಸು ದಾಖಲಿಸಲಾಗಿತ್ತು.

2. ಮಸೀದಿಗೆ ಬಾಬರ್‌ ಅನುದಾನ ನೀಡಿದ್ದ ಎಂಬ ಅಂಶವನ್ನು ಬ್ರಿಟಿಷ್‌ ಸರಕಾರ ಕೂಡ ಅನುಮೋದಿಸಿದೆ.

3. 1885ರ ಖಟ್ಲೆ ಸಹಿತ ಹಲವು ದಾಖಲೆಗಳು ಮಸೀದಿ ಅಯೋಧ್ಯೆಯಲ್ಲಿ ಇದ್ದ ಅಂಶವನ್ನು ಪುಷ್ಟೀಕರಿಸಿವೆ. 1949ರ ಡಿ. 22, 23ರ ವರೆಗೆ ಮುಸ್ಲಿಮರ ವಶದಲ್ಲಿಯೇ ಜಮೀನು ಇತ್ತು ಮತ್ತ ಅಲ್ಲಿಯೇ ಪ್ರಾರ್ಥನೆ ಸಲ್ಲಿಸಿದ್ದರು.

4. ಮಸೀದಿ ಇರುವಿಕೆ ಬಗ್ಗೆ ರಾಜ್ಯಪತ್ರ, ಇತಿಹಾಸ ಕಾರರು ಮಾಡಿರುವ ವಾದಗಳು ದುರ್ಬಲವಾಗಿ ವೆ.

5. ಭಾರತೀಯ ಪುರಾತತ್ವ ಇಲಾಖೆಯ ಪ್ರಕಾರ ವಿವಾದಿತ ಸ್ಥಳದಲ್ಲಿ ಮಸೀದಿಯ ಕೆಳಗೆ ದೇಗುಲ ವೆಂಬ ಕಟ್ಟಡ ಎನ್ನುವುದು ವಾದಕ್ಕಾಗಿ ಮಾಡುವ ಅಂಶವೇ ಹೊರತು ವೈಜ್ಞಾನಿಕ ಆಧಾರಗಳಿಂದ ಕೂಡಿದ ವಾದ ಅಲ್ಲ.

ಜಮೀನು ಮಾಲಕತ್ವ ವಿಚಾರಕ್ಕಾಗಿ ಸಮುದಾಯದ ಪರವಾಗಿ ಸಾಕಷ್ಟು ಸಾಕ್ಷ್ಯಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಮುಸ್ಲಿಮರ ಪರವಾಗಿಯೇ ತೀರ್ಪು ಬರಲಿದೆ ಎಂಬ ವಿಶ್ವಾಸ ಇದೆ.
ಮೌಲಾನಾ ಸಯ್ಯದ್‌ ಅಥರಾಣಿ, ಮುಸ್ಲಿಂ ವೈಯಕ್ತಿಕ ಕಾನೂನು
ಮಂಡಳಿ ಸದಸ್ಯ

ವಿಚಾರಣೆ ಮುಕ್ತಾಯವಾಗಿರುವುದಕ್ಕೆ ಸಂತೋಷವಿದೆ. ನ್ಯಾಯಾಲಯವು ಸಾಕ್ಷ್ಯಗಳ ಆಧಾರದ ಮೇಲೆ ತೀರ್ಮಾನಿಸ ಬೇಕೇ ಹೊರತು, ಧಾರ್ಮಿಕ ಭಾವನೆಗಳ ಮೇಲೆ ಅಲ್ಲ. ಯಾವುದೇ ರೀತಿಯಲ್ಲಿ ತೀರ್ಪು ಬಂದರೂ ಅದನ್ನು ಸ್ವಾಗತಿಸಬೇಕು.
ಮೌಲಾನಾ ಮೆಹಬೂಬ್‌ ದರ್ಯಾದಿ, ಅಖೀಲ ಭಾರತ ಉಲೇಮಾ ಮಂಡಳಿಯ ಪ್ರಧಾನ ಕಾರ್ಯದರ್ಶಿ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.