ಬ್ರೆಕ್ಸಿಟ್ ಒಪ್ಪಂದ ವಿಳಂಬಕ್ಕೆ ಬ್ರಿಟನ್ ಸಂಸತ್ತು ಅನುಮತಿ
Team Udayavani, Oct 20, 2019, 3:06 AM IST
ಲಂಡನ್: ಐರೋಪ್ಯ ಒಕ್ಕೂಟದಿಂದ ಬೇರ್ಪಡುವ ಬ್ರಿಟನ್ನ ನಿರ್ಧಾರ ಇನ್ನಷ್ಟು ವಿಳಂಬವಾಗಲಿದೆ. ಈ ಸಂಬಂಧ ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಿದ ಮಸೂದೆಗೆ ಅನುಮೋದನೆ ಲಭ್ಯವಾಗಿದ್ದು, ಅಕ್ಟೋ ಬರ್ 31ರ ಅಂತಿಮ ದಿನಾಂಕ ಈಗ 2020ರ ಜನವರಿ 31ಕ್ಕೆ ವಿಸ್ತರಣೆಯಾಗಿದೆ.
ಆದರೆ ಅಕ್ಟೋಬರ್ 31ರೊಳಗೇ ಒಪ್ಪಂದವನ್ನು ಅಂತಿಮಗೊಳಿಸುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪುನರುಚ್ಚರಿಸಿದ್ದಾರೆ. ಐರೋಪ್ಯ ಒಕ್ಕೂಟದೊಂದಿಗೆ ಅಂತಿಮ ಒಪ್ಪಂದ ಮಾಡಿಕೊಳ್ಳಲು ನಾನು ಕಾಲಾವಕಾಶ ಕೇಳುವುದಿಲ್ಲ. ನಿಗದಿತ ಕಾಲಾವಕಾಶದೊಳಗೇ ಒಪ್ಪಂದ ಮುಗಿಸುತ್ತೇನೆ ಎಂದು ಜಾನ್ಸನ್ ಹೇಳಿದ್ದಾರೆ. ಶನಿವಾರವೇ ಮಂಡನೆಯಾಗ ಬೇಕಿದ್ದ ಬ್ರೆಕ್ಸಿಟ್ ಒಪ್ಪಂದ ಮಸೂದೆಯನ್ನು ಮಂಗಳ ವಾರ ಅ.22 ರಂದು ಮಂಡಿಸಲು ನಿರ್ಧರಿಸಲಾಗಿದೆ. ಒಂದು ವೇಳೆ 22ರಂದೇ ಮಸೂದೆಗೆ ಅನುಮೋದನೆ ಲಭ್ಯವಾದರೂ, ಇತರ ಪ್ರಕ್ರಿಯೆ ನಡೆಸಲು ಕಾಲಾವಕಾಶ ಅಗತ್ಯವಿದೆ ಎಂದು ಇತರ ಸಂಸದರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ