ಮುಂದಿನ ತಿಂಗಳಲ್ಲಿ ನಡೆಯಲಿದೆ “ಕುದ್ಕನ ಮದ್ಮೆ’


Team Udayavani, Oct 24, 2019, 4:00 AM IST

q-19

ಜಿಆರ್‌ಕೆ ನಿರ್ಮಾಣದ ಎ.ವಿ. ಜಯರಾಜ್‌ ನಿರ್ದೇಶನದ “ಕುದ್ಕನ ಮದ್ಮೆ’ ಸಿನೆಮಾ ಸದ್ಯ ಸೆನ್ಸಾರ್‌ ಹಂತದಲ್ಲಿದ್ದು, ಮುಂದಿನ ತಿಂಗಳಿನಲ್ಲಿಯೇ ರಿಲೀಸ್‌ನ ನಿರೀಕ್ಷೆಯಲ್ಲಿದೆ.

ತುಳುನಾಡಿನಲ್ಲಿ ಅನಾದಿಕಾಲದಿಂದಲೂ ಬಹಳ ಹೆಸರುವಾಸಿಯಾದ ಮನೆತನ “ಅರ್ಕಾಡಿ ಬರ್ಕೆ’. ಹಿರಿಯರ ಬಳುವಳಿಯಾಗಿ ಅಪಾರ ಆಸ್ತಿ-ಪಾಸ್ತಿ ಹೊಂದಿರುವ ಈ ಮನೆತನದ ಈಗಿನ ಸದಸ್ಯರಲ್ಲಿ ಪರಸ್ಪರ ವೈಮನಸ್ಸು. ಆದರೆ ಹಿರಿಯರ ವಿಲ್‌ ಪ್ರಕಾರ ಇವರೆಲ್ಲರೂ ಒಂದಾಗದೆ ಇದ್ದರೆ ಈ ಆಸ್ತಿ-ಪಾಸ್ತಿಗಳು ಇವರಿಗೆ ದಕ್ಕದು. ಈ ಆಸ್ತಿಯ ಆಸೆಗಾಗಿ ಇವರ ಮಧ್ಯೆ ಬಂದು ಸೇರುವ ಕೆಲವು ನಕಲಿ ಸಂಬಂಧಿಕರು, ಬ್ರೋಕರ್‌ಗಳು-ಸಮಯ ಸಾಧಕರು. ಇವರೆಲ್ಲಾ ಸೇರಿ ಸೃಷ್ಟಿಸುವ ಅವಾಂತರಗಳು. ಹೀಗೆ ಸಿನೆಮಾ ಸಂಪೂರ್ಣ ಹಾಸ್ಯಮಯವಾಗಿ ಸಾಗುತ್ತದೆ. ಈ ಮಧ್ಯೆ “ಅಪರಿಚಿತನೊಬ್ಬ’ ಈ ಮನೆಗೆ ಸೇರಿಕೊಳ್ಳುತ್ತಾನೆ. ನಾಯಕಿಯ ಅಪಹರಣವಾಗುತ್ತದೆ. ಜೋತಿಷಿಯೊಬ್ಬರ ಸಲಹೆಯಂತೆ “ಮಳೆ ಮತ್ತು ಬಿಸಿಲು ಒಟ್ಟಾಗಿ ಬರುತ್ತಿರುವಾಗ’ ಈ ಮನೆಯಲ್ಲಿ ಮಳೆ ಮತ್ತು ಬಿಸಿಲು ಒಟ್ಟಾಗಿ ಬರುತ್ತಿರುವಾಗ ಈ ಮನೆಯಲ್ಲಿ ಒಂದು ಮದುವೆ ನಡೆದರೆ ಸಮಸ್ಯೆ ಬಗೆಹರಿಯುವುದೆಂದು ತಿಳಿದು ಮದುವೆಗೆ ಸಿದ್ಧರಾಗುತ್ತಾರೆ. ಇದೇ “ಕುದ್ಕನ ಮದ್ಮೆ’.

ಚಿತ್ರದಲ್ಲಿ ನಾಯಕನಾಗಿ ಪೃಥ್ವೀ ಅಂಬರ್‌ ಹಾಗೂ ನಾಯಕಿಯಾಗಿ ಶೀತಲ್‌ ನಾಯಕ್‌ ಅಭಿನಯಿಸಿದ್ದಾರೆ. ದೇವಿಪ್ರಕಾಶ್‌ ಉರ್ವ, ಶ್ರೀಷಾ ಭಂಡಾರಿ, ಕಾರ್ತಿಕ್‌ ರಾವ್‌ ಮತ್ತು ಮುಂಬಯಿ ರಂಗ ಕಲಾವಿದೆ ಚಂದ್ರಾವತಿ ವಸಂತ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅರವಿಂದ ಬೋಳಾರ್‌, ನವೀನ್‌ ಡಿ. ಪಡೀಲ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ಪಿಂಕಿರಾಣಿ, ಶೋಭಾ ಶೆಟ್ಟಿ, ಜೀವನ್‌ ಉಳ್ಳಾಲ್‌, ಸೂರಜ್‌ ಸಾಲ್ಯಾನ್‌, ಮೋಹನ್‌ ಕೊಪ್ಪಳ, ಚೇತನ್‌ ಕದ್ರಿ ಸುಮತಿ ಹಂದೆ, ಉದಯ್‌ ಆಳ್ವ ಸುರತ್ಕಲ್‌, ಯಶವಂತ್‌ ಶೆಟ್ಟಿ ಕೃಷ್ಣಾಪುರ, ಸುನಿಲ್‌ ಪಡುಬಿದ್ರೆ, ಕೃಷ್ಣ ಸುರತ್ಕಲ್‌, ರವೀಶ್‌ ಜೋಗಿ, ಯೋಗೀಶ್‌, ಅರುಣ್‌ ಶೆಟ್ಟಿ, ಸುಮಿತ್ರಾ ರೈ, ಕಿಶೋರ್‌ ಡಿ. ಶೆಟ್ಟಿ ತಾರಾಗಣದಲ್ಲಿದ್ದಾರೆ. ಚಿತ್ರದ ಕಥೆ -ಚಿತ್ರಕಥೆ: ಸುಧನ್‌ ಶ್ರೀಧರ್‌, ಛಾಯಾಚಿತ್ರಗ್ರಹಣ: ಮಹಾಬಲೇಶ್ವರ ಹೊಳ್ಳ, ಸಂಕಲನ: ಸುಬ್ರಹ್ಮಣ್ಯ ಹೊಳ್ಳ, ಸಂಗೀತ: ರಾಹುಲ್‌ ವಸಿಷ್ಠ, ಮೆಲ್‌ರಾಯ್‌, ಪ್ರವೀಣ್‌, ಕಲೆ ಡಿ.ಕೆ. ಆಚಾರ್ಯ ಕುಂಬ್ಳೆ, ನೃತ್ಯ : ಅಕುಲ್‌ ಮಾಸ್ಟರ್‌, ಸಾಹಸ ಕೌರವ ವೆಂಕಟೇಶ್‌, ಸಹಾಯಕ ನಿರ್ದೇಶಕರು: ರಾಕೇಶ್‌, ನವೀನ್‌ ಶೆಟ್ಟಿ, ಅನಿರುದ್ಧ ಉಳ್ಳಾಲ್‌, ಕರುಣ್‌ ಶೆಟ್ಟಿ, ರೋಶನಿ, ಕಾವ್ಯಾ ಶರತ್‌, ಸಾಹಿತ್ಯ ಸಂಭಾಷಣೆ, ಸಹ ನಿರ್ದೇಶನ : ಜೀವನ್‌ ಉಳ್ಳಾಲ್‌, ನಿರ್ದೇಶನ ಎ.ವಿ, ಜಯರಾಜ್‌, ನಿರ್ಮಾಪಕರು: ಗೌರಿ ಆರ್‌. ಹೊಳ್ಳ ಮತ್ತು ಸುಹಾಸ್‌ ಹೊಳ್ಳ.

ಟಾಪ್ ನ್ಯೂಸ್

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.