ಭಾರತಕ್ಕೆ ಸಂಪೂರ್ಣ ಬೆಂಬಲ : ಉಗ್ರರ ವಿರುದ್ಧದ ಹೋರಾಟಕ್ಕೆ ಸಾಥ್‌


Team Udayavani, Oct 31, 2019, 5:55 AM IST

europ

ಶ್ರೀನಗರ: “ಸಂವಿಧಾನದ 370ನೇ ವಿಧಿ ಭಾರತದ ಆಂತರಿಕ ವಿಚಾರವಾಗಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ.’

ಹೀಗೆಂದು ಹೇಳಿರುವುದು ಮಂಗಳವಾರವಷ್ಟೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಐರೋಪ್ಯ ಒಕ್ಕೂಟದ 23 ಸಂಸದರ ನಿಯೋಗ. ತಮ್ಮ ಭೇಟಿ ಮುಗಿಸಿ ಬುಧವಾರ ಯುರೋಪ್‌ಗೆ ವಾಪಸಾಗುವ ಮುನ್ನ ನಿಯೋಗದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ್ದಾರೆ. ಈ ಭೇಟಿಯು ನಮ್ಮ ಕಣ್ತೆರೆಸಿತು. ಇಲ್ಲಿ ನಮಗೆ ಕಾಣಿಸಿದ್ದನ್ನು ನಾವು ನಮ್ಮ ದೇಶಕ್ಕೆ ಹೋಗಿ ಹೇಳುತ್ತೇವೆ ಎಂದಿದ್ದಾರೆ. ಇದೇ ವೇಳೆ, ಪಶ್ಚಿಮ ಬಂಗಾಲದ 6 ಮಂದಿ ವಲಸೆ ಕಾರ್ಮಿಕರನ್ನು ಉಗ್ರರು ಹತ್ಯೆಗೈದ ಘಟನೆಯನ್ನೂ ಖಂಡಿಸಿದ್ದಾರೆ.

“370ನೇ ವಿಧಿ ಬಗ್ಗೆ ನಾವು ಮಾತನಾಡುವುದಿಲ್ಲ. ಏಕೆಂದರೆ ಅದು ಭಾರತದ ಆಂತರಿಕ ವಿಚಾರ. ಆದರೆ, ಜಾಗತಿಕ ಸವಾಲಾಗಿರುವ ಭಯೋತ್ಪಾದನೆ ಬಗ್ಗೆ ನಮಗೆ ಕಳವಳವಿದೆ. ಇದರ ವಿರುದ್ಧದ ಹೋರಾಟದಲ್ಲಿ ನಾವು ಭಾರತದ ಬೆನ್ನಿಗೆ ನಿಲ್ಲಬೇಕು. ಉಗ್ರರು ಒಂದಿಡೀ ದೇಶವನ್ನೇ ನಾಶ ಮಾಡಬಲ್ಲರು. ನಾವು ಅಫ್ಘಾನಿಸ್ಥಾನ, ಸಿರಿಯಾಗೆ ಭೇಟಿ ನೀಡಿದ್ದೇವೆ. ಅಲ್ಲಿ ಉಗ್ರರು ಏನೇನು ಮಾಡಿದ್ದಾರೆ ಎಂಬುದನ್ನೂ ನೋಡಿದ್ದೇವೆ’ ಎಂದು ಸಂಸದರು ಹೇಳಿದ್ದಾರೆ.

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ಪಕ್ಷಪಾತೀಯವಾಗಿ ಸುದ್ದಿ ಮಾಡುತ್ತಿವೆ. ನಾವು ನಮ್ಮ ದೇಶಕ್ಕೆ ವಾಪಸಾದ ಮೇಲೆ ಇಲ್ಲೇನು ನೋಡಿದೆವೋ ಅದನ್ನು ಹೇಳುತ್ತೇವೆ ಎಂದು ಸಂಸದ ರಿಝಾರ್ಡ್‌ ಝರ್ನೆಕಿ ತಿಳಿಸಿದ್ದಾರೆ.

ನಾಗರಿಕ ಸಾವು: ಬುಧವಾರ ರಜೌರಿ ಜಿಲ್ಲೆಯ ಎಲ್‌ಒಸಿಯಲ್ಲಿ ಸೇನೆಯ ಮುಂಚೂಣಿ ನೆಲೆಗಳು ಹಾಗೂ ಗಡಿಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ಥಾನ ಪಡೆ ಗುಂಡಿನ ದಾಳಿ ನಡೆಸಿದೆ. ಪರಿಣಾಮ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ.

ಕಾರ್ಮಿಕರ ಹತ್ಯೆಗೆ ಖಂಡನೆ
ಕುಲ್ಗಾಂನಲ್ಲಿ ಪ.ಬಂಗಾಲದ 6 ಮಂದಿ ವಲಸೆ ಕಾರ್ಮಿಕರನ್ನು ಉಗ್ರರು ಹತ್ಯೆಗೈದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭದ್ರತೆ ಬಿಗಿಗೊಳಿಸಲಾಗಿದೆ. ಜತೆಗೆ ಕಾರ್ಮಿಕರ ಹತ್ಯೆ ಘಟನೆಗೆ ಕಾಂಗ್ರೆಸ್‌, ಎನ್‌ಸಿ, ಪಿಡಿಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಖಂಡನೆ ವ್ಯಕ್ತಪಡಿಸಿವೆ. ಆಘಾತ ವ್ಯಕ್ತಪಡಿಸಿರುವ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಘಟನೆ ಬಗ್ಗೆ ತನಿಖೆಗೆ ಆಗ್ರಹಿಸಿ, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇನ್ನು, ಕಾಶ್ಮೀರೇತರರಾದ ಕಾರಣ ಕೂಡಲೇ ರಾಜ್ಯ ಬಿಟ್ಟು ತೆರಳಿ ಎಂದು ಕಾರ್ಮಿಕರಿಗೆ ಉಗ್ರರು ಪದೇ ಪದೆ ಬೆದರಿಕೆ ಹಾಕುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಭಾರತವನ್ನು ಬೆಂಬಲಿಸಿದರೆ ಕ್ಷಿಪಣಿ ದಾಳಿ: ಪಾಕ್‌
ಕಾಶ್ಮೀರ ವಿಚಾರದಲ್ಲಿ ಭಾರತವನ್ನು ಯಾವುದಾ ದರೂ ದೇಶವು ಬೆಂಬಲಿಸಿದ್ದೇ ಆದಲ್ಲಿ, ಆ ದೇಶದ ಮೇಲೆ ಪಾಕಿಸ್ಥಾನವು ಕ್ಷಿಪಣಿ ದಾಳಿ ನಡೆಸಲಿದೆ ಎಂದು ಹೇಳುವ ಮೂಲಕ ಪಾಕ್‌ ಸಚಿವರೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಭಾರತ ದೊಂದಿಗಿನ ಪ್ರಕ್ಷುಬ್ಧತೆ ತೀವ್ರಗೊಂಡು, ಯುದ್ಧದ ಸನ್ನಿವೇಶ ನಿರ್ಮಾಣವಾದರೆ, ಕಾಶ್ಮೀರ ವಿಚಾರ ದಲ್ಲಿ ಯಾವ ದೇಶ ಭಾರತಕ್ಕೆ ಬೆಂಬಲ ಸೂಚಿಸು ತ್ತದೋ ಆ ದೇಶವನ್ನು ನಮ್ಮ ಶತ್ರು ಎಂದು ಪರಿಗಣಿಸುತ್ತೇವೆ. ಅಲ್ಲದೆ, ಭಾರತ ಹಾಗೂ ಅಂಥ ದೇಶಗಳನ್ನು ಗುರಿಯಾ ಗಿಸಿ ಕೊಂಡು ಕ್ಷಿಪಣಿ ದಾಳಿ ನಡೆಸುತ್ತೇವೆ ಎಂದು ಕಾಶ್ಮೀರ ಮತ್ತು ಗಿಲಿYಟ್‌ ಬಾಲ್ಟಿಸ್ಥಾನದ ವ್ಯವಹಾರ ಗಳ ಸಚಿವ ಅಲಿ ಅಮಿನ್‌ ಗಂದಾಪುರ್‌ ಬೆದರಿಕೆ ಹಾಕಿದ್ದಾರೆ.

ಜಮ್ಮು-ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯ ಗಮನಕ್ಕೆ ತಂದಿದ್ದಕ್ಕೆ ಜವಾಹರಲಾಲ್‌ ನೆಹರೂರನ್ನು ಈಗಲೂ ಟೀಕಿಸುವ ಬಿಜೆಪಿ, ಈಗ ಐರೋಪ್ಯ ಒಕ್ಕೂಟದ ನಿಯೋಗದ ಕಾಶ್ಮೀರ ಭೇಟಿಗೆ ಅವಕಾಶ ಕೊಟ್ಟಿದ್ದೇಕೆ?
ಶಿವಸೇನೆ, ಮುಖವಾಣಿ ಸಾಮ್ನಾದಲ್ಲಿ

ಐರೋಪ್ಯ ಒಕ್ಕೂಟದ ನಿಯೋಗದ ಕಾಶ್ಮೀರ ಭೇಟಿಯು ಭಾರತದ ಇತಿಹಾಸದಲ್ಲೇ ಅತಿದೊಡ್ಡ ರಾಜತಾಂತ್ರಿಕ ಬ್ಲಿಂಡರ್‌. ಕಾಶ್ಮೀರ ನಮ್ಮ ಆಂತರಿಕ ವಿಷಯವಾಗಿದ್ದರೂ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಅದನ್ನು ಅಂತಾರಾಷ್ಟ್ರೀಕರಣಗೊಳಿಸಿತು.
– ರಣದೀಪ್‌ ಸುಜೇìವಾಲಾ, ಕಾಂಗ್ರೆಸ್‌ ವಕ್ತಾರ

ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ವಶಪಡಿಸಿಕೊಳ್ಳಬೇಕಾದ ಅಗತ್ಯವೇನಿದೆ? ಅದು ಎಂದಿದ್ದರೂ ನಮ್ಮದೇ. ಸದ್ಯದಲ್ಲೇ ಪಿಒಕೆ ಭಾರತ ಸರಕಾರದ ನಿಯಂತ್ರಣಕ್ಕೆ ಬರಲಿದೆ.
– ಜ| ವಿ.ಕೆ. ಸಿಂಗ್‌, ಕೇಂದ್ರ ಸಚಿವ

ಟಾಪ್ ನ್ಯೂಸ್

21-wqewewqe

IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

Priyanka Gandhi Slams PM Modi in Banaskantha Rally

ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

21-wqewewqe

IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.