ಮಿತಿಯೊಳಗೇ ಇದೆ ನಗರದ ಮಾಲಿನ್ಯ!


Team Udayavani, Nov 3, 2019, 3:09 AM IST

mitiyolage

ಬೆಂಗಳೂರು: ವಾತಾವರಣದಲ್ಲಿನ ಉಸಿರಾಡುವ ಗಾಳಿಯ ಗುಣಮಟ್ಟ ಕುಸಿದ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದು, ಬೆಂಗಳೂರಿನ ಸ್ಥಿತಿ ಏನೋ ಎಂಬ ಆತಂಕ ಉಂಟಾಗಿತ್ತಾದರೂ ನಗರದ ನಾಗರಿಕರು ಸಮಾಧಾನಕರ ಪಟ್ಟುಕೊಳ್ಳುವಂತಹ ವಾಯು ಸೂಚ್ಯಂಕವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಸೂಚ್ಯಂಕದ ಪ್ರಕಾರ ನಗರದಲ್ಲಿ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಏರದೆ ಮಿತಿಯೊಳಗೇ ಇದೆ ಎಂಬುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಯಾವುದೇ ಒಂದು ಪ್ರದೇಶದಲ್ಲಿ ನಾವು ಉಸಿರಾಡುವ ಗಾಳಿಯ ಸೂಚ್ಯಂಕ 0ಯಿಂದ 50 ಇದ್ದರೆ ಅದು ಶುದ್ಧ ಗಾಳಿಯಾಗಿರುತ್ತದೆ. 51ರಿಂದ 100ರ ಒಳಗೆ ಇದ್ದರೆ ಅದು ಸಮಾಧಾನಕರವಾಗಿರುತ್ತದೆ. 101ರಿಂದ 200 ಇದ್ದರೆ ಪರವಾಗಿಲ್ಲ.

201 ರಿಂದ 300ರ ಒಳಗೆ ಇದ್ದರೆ ಅಶುದ್ಧಗಾಳಿ, 301ರಿಂದ 400 ಇದ್ದರೆ ಅಪಾಯಕಾರಿ, 400 ದಾಟಿದರೆ ಅತಿ ಗಂಭೀರವಾಗಿ ಗಾಳಿ ವಿಷಯುಕ್ತವಾಗಿರುತ್ತದೆ. ಪ್ರತಿ ಘನಮೀಟರ್‌ ಗಾಳಿಯಲ್ಲಿರುವ 2.5 ಮೈಕ್ರಾನ್‌ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆಯನ್ನು ಆಧರಿಸಿ ಗಾಳಿಯ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ನಗರದಲ್ಲಿ ಪ್ರಸ್ತುತ ಬಹುತೇಕ ಪ್ರದೇಶಗಳಲ್ಲಿ ವಾಯು ಸೂಚ್ಯಂಕ 100 ಕಣ ಮೀರಿಲ್ಲ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ವಾಯು ಮಾಲಿನ್ಯ ಮಾಪನ ಕೇಂದ್ರಗಳ ಸುತ್ತಲೂ ಯೋಗ್ಯ ಗಾಳಿ ಇದ್ದು, ಕಳೆದ ದೀಪಾವಳಿಗಿಂತ ಈ ಬಾರಿ ದೀಪಾವಳಿಯಲ್ಲಿ ಬಸವೇಶ್ವರ ನಗರ ಹೊರತು ಪಡಿಸಿ ಬೇರೆ ಎಲ್ಲಾ ಕಡೆ ಹೆಚ್ಚಾಗಿ ವಾಯು ಮಾಲಿನ್ಯವಾಗಿಲ್ಲ. ಬೆಂಗಳೂರಿನಲ್ಲಿ 20 ವಾಯು ಮಾಲಿನ್ಯ ಮಾಪನ ಕೇಂದ್ರಗಳಿದ್ದು, ಇವುಗಳಲ್ಲಿ ಬಹುತೇಕ ಕೇಂದ್ರಗಳಲ್ಲಿ ಶುದ್ಧಗಾಳಿ ಇದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ರೈಲು ನಿಲ್ದಾಣದಲ್ಲಿ 100ರ ಗಡಿ ದಾಟಿದ ಸೂಚ್ಯಂಕ: ನಗರದಲ್ಲಿ ಸಿಟಿ ರೈಲು ನಿಲ್ದಾಣದಲ್ಲಿ ಮಾತ್ರ ಉಸಿರಾಡುವ ಗಾಳಿಯ ಸೂಚ್ಯಂಕ 100ರ ಗಡಿ ದಾಟಿದ್ದು, ಈ ಭಾಗದಲ್ಲಿ ಉಸಿರಾಡುವಾಗ ತೇಲಡುವ ಧೂಳಿನ ಕಣಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈ ಧೂಳಿನ ಕಣಗಳು ದೇಹಕ್ಕೆ ನಮಗೆ ಅರಿವಿಲ್ಲದಂತೆಯೇ ಸೇರಲಿದ್ದು, ಅಪಾಯಕಾರಿ ರೋಗಗಳು ಬರುವ ಸಾಧ್ಯತೆಯಿದೆ. ಈ ರೀತಿಯ ಅಶುದ್ಧ ಗಾಳಿ ಸೇವನೆಯಿಂದ ಅಸ್ತಮಾ, ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿರುವವರ ಆರೋಗ್ಯ ಮತ್ತಷ್ಟು ಹಾಳಾಗುವ ಸಾಧ್ಯತೆಯಿದೆ.

233 ಶಬ್ದ ಮಾಪನ ಯಂತ್ರಕ್ಕೆ ಟೆಂಡರ್‌: ಬೆಂಗಳೂರಿನ ವಿವಿಧ ಕಡೆ 20 ಶಬ್ದ ಮಾಪನ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 233 ಯಂತ್ರಗಳಿಗೆ ಟೆಂಡರ್‌ ಕರೆಯಲಾಗಿದೆ. ಇದರಲ್ಲಿ 100 ಯಂತ್ರಗಳನ್ನು ಸಂಚಾರ ಪೊಲೀಸ್‌ ವಿಭಾಗಕ್ಕೆ ನೀಡಲಾಗುವುದು. ಉಳಿದ 133 ಯಂತ್ರಗಳನ್ನು ಎಲ್ಲೆಲ್ಲಿ ಅಳವಡಿಸಬೇಕೆಂದು ಗುರುತು ಮಾಡಲಾಗುತ್ತಿದೆ. ಒಂದು ಯಂತ್ರಕ್ಕೆ 3.5 ಲಕ್ಷ ರೂ. ವೆಚ್ಚವಾಗಲಿದ್ದು, ಯಂತ್ರ ಅಳವಡಿಸಿದರೆ ಬೆಂಗಳೂರಲ್ಲಿ ಎಷ್ಟು ಶಬ್ದ ಮಾಲಿನ್ಯವಾಗುತ್ತಿದೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಬಸವರಾಜ್‌ ವಿ. ಪಾಟೀಲ್‌ ಹೇಳಿದರು.

ಯಾವ ತಿಂಗಳು ಎಲ್ಲೆಲ್ಲಿ, ಎಷ್ಟೆಷ್ಟು ಗುಣಮಟ್ಟದ ಗಾಳಿ?
ಸ್ಥಳ ಜುಲೈ ಆಗಸ್ಟ್‌ ಸೆಪ್ಟಂಬರ್‌ ಅಕ್ಟೋಬರ್‌(21ರಂದು) ನವೆಂಬರ್‌ (2ರಂದು)
ಸಿಟಿ ರೈಲು ನಿಲ್ದಾಣ 109 90 100 110 123
ಎಸ್‌.ಜಿ.ಹಳ್ಳಿ 38 41 45 51 43
ಹೆಬ್ಬಾಳ 49 27 35 46 61
ಜಯನಗರ 5ನೇ ಬ್ಲಾಕ್‌ 42 35 45 75 72
ಮೈಸೂರು ರಸ್ತೆ 51 45 44 73 56
ನಿಮ್ಹಾನ್ಸ್‌ 36 30 34 35 61
ಸೆಂಟ್ರಲ್‌ ಸಿಲ್ಕ್ ಬೋರ್ಡ್‌ 75 76 70 90 40

ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ವಾಯು ಮಾಲಿನ್ಯ ಕಡಿಮೆಯಾಗುತ್ತಿದೆ. ಬಹುತೇಕ ವಾಯು ಮಾಲಿನ್ಯ ಮಾಪನ ಕೇಂದ್ರಗಳಲ್ಲಿ 30ರಿಂದ 70ರವರೆಗಿದೆ. ಈ ಬಾರಿ ಹೆಚ್ಚಿನ ಮಳೆಯಿಂದಲೂ ಮಾಲಿನ್ಯ ಕಡಿಮೆಯಾಗಿದೆ.
-ಬಸವರಾಜ್‌ ವಿ. ಪಾಟೀಲ್‌, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ

ವಾಯು ಮಾಲಿನ್ಯದಿಂದ ಉಸಿರಾಟದ ತೊಂದರೆ ಮಾತ್ರ ಆಗುವುದಿಲ್ಲ. ಹೃದಯ ಸಂಬಂಧ ರೋಗಗಳೂ ಬರುತ್ತವೆ. ಬೆಂಗಳೂರಿನಲ್ಲಿ ಮಾಲಿನ್ಯ ಕಡಿಮೆ ಇದ್ದರೂ, ವಾಹನ ದಟ್ಟಣೆಯಲ್ಲಿ ನಿಲ್ಲುವುದರಿಂದ ವಿಷಗಾಳಿ ಸೇವಿಸಬೇಕಾಗುತ್ತದೆ. ಜಯದೇವ ಹೃದ್ರೋಗ ಸಂಸ್ಥೆಯ ಸಂಶೋಧನೆ ಪ್ರಕಾರ ಹೃದಯಾಘಾತವಾದ ಜನರ ಪೈಕಿ ಶೇ.25ರಷ್ಟು ವಾಹನ ಚಾಲಕರು ಇದ್ದಾರೆ.
-ಡಾ.ಸಿ.ಎನ್‌.ಮಂಜುನಾಥ್‌, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ

* ಮಂಜುನಾಥ್‌ ಗಂಗಾವತಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.