ಡೇ-ನೈಟ್ ಟೆಸ್ಟ್ ಪಂದ್ಯಕ್ಕೆ ಭರ್ಜರಿ ಟಿಕೆಟ್ ಮಾರಾಟ
Team Udayavani, Nov 11, 2019, 1:25 AM IST
ಕೋಲ್ಕತಾ: ಈಡನ್ ಗಾರ್ಡನ್ಸ್ನಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ದೇಶದ ಪ್ರಪ್ರಥಮ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ 3 ದಿನ ತಲಾ 50 ಸಾವಿರದಷ್ಟು ವೀಕ್ಷಕರು ಸೇರುವ ಸಾಧ್ಯತೆ ಇದೆ ಎಂದು ಬಂಗಾಲ ಕ್ರಿಕೆಟ್ ಮಂಡಳಿ (ಕ್ಯಾಬ್) ತಿಳಿಸಿದೆ.
“ಈಗಾಗಲೇ ಆಲ್ಲೈನ್ ಟಿಕೆಟ್ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 17 ಸಾವಿರ ಟಿಕೆಟ್ಗಳು ವೀಕ್ಷಕರ ಕೈಸೇರಿವೆ. ಮೊದಲ 3 ದಿನಗಳ ಆಟದ ಟಿಕೆಟ್ಗಳಿಗೆ ವಿಶೇಷ ಬೇಡಿಕೆ ಇದೆ. ಈ 3 ದಿನ ತಲಾ 50 ಸಾವಿರ ವೀಕ್ಷಕರು ಸೇರುವ ಸಾಧ್ಯತೆ ಇದೆ. ನ. 14ರಿಂದ ಕೌಂಟರ್ ಸೇಲ್ ಆರಂಭವಾಗಲಿದ್ದು, ಇದೆಲ್ಲವೂ ಮಾರಾಟವಾದರೆ ಈಡನ್ ಗಾರ್ಡನ್ಸ್ ಫುಲ್ ಹೌಸ್ ಆಗಲಿದೆ’ ಎಂದು ಬಂಗಾಲ ಕ್ರಿಕೆಟ್ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.