ಯುರೋಪಿಯನ್‌ ಕತೆ: ಯುವರಾಜ ಮತ್ತು ಸೇವಕ


Team Udayavani, Nov 17, 2019, 4:52 AM IST

nn-3

ಒಂದು ದೇಶದ ರಾಜನಿಗೆ ಒಬ್ಬನೇ ಮಗನಿದ್ದ. ಅವನು ಯುಕ್ತ ವಯಸ್ಸಿಗೆ ಬಂದಾಗ ರಾಜನು ಅವನಿಗೆ ಯುವರಾಜನಾಗಿ ಪಟ್ಟಾಭಿಷೇಕ ಮಾಡಿದ. “”ಮುಂದೆ ನೀನು ಈ ದೇಶದ ರಾಜನಾಗಿ ಪ್ರಜೆಗಳನ್ನು ಪರಿಪಾಲಿಸಬೇಕು. ಆದರೆ ಅದು ಸುಲಭವಾದ ಕೆಲಸವಲ್ಲ. ಅಪಾರ ಲೋಕಜ್ಞಾನವನ್ನು ಪಡೆಯಬೇಕಾಗುತ್ತದೆ. ನೀನು ಬೇರೆ ಬೇರೆ ದೇಶಗಳಿಗೆ ಹೋಗಿ ಅಲ್ಲಿರುವ ಜನಗಳ ಬದುಕಿನ ವಿಧಾನವನ್ನು ನೋಡಿ ಬರಬೇಕು. ಅದರಿಂದ ನಮ್ಮ ರಾಜ್ಯದ ಪ್ರಜೆಗಳಿಗೆ ಏನು ಕೊರತೆಯಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಆಗ ಕಾಲ್ನಡಿಗೆಯಲ್ಲಿಯೇ ಹೋಗಬೇಕು. ಕುದುರೆಯ ನ್ನೇರಿ ದೇಶ ಸಂಚಾರಕ್ಕೆ ಹೋದರೆ ಜನರ ಕಷ್ಟದ ಅನುಭವ ಗಳು ಸಿಗುವುದಿಲ್ಲ. ರಾಜನು ಸುಖದ ಸಮಪಾಲು ಕಷ್ಟಗಳನ್ನೂ ಅನುಭವಿಸಬೇಕು” ಎಂದು ಹೇಳಿದ.

ಯುವರಾಜನು, “”ಅಪ್ಪಾ, ನೀವು ನನ್ನ ಮನಸ್ಸಿನೊಳಗೆ ಏನಿದೆ ಎಂದು ತಿಳಿದುಕೊಂಡು ಹೇಳಿದ ಹಾಗಿದೆ. ನಾನು ಈ ದಿನವೇ ದೇಶಸಂಚಾರಕ್ಕೆ ಹೊರಡುತ್ತೇನೆ. ಕಾಲ್ನಡಿಗೆಯಲ್ಲಿ ಹೋಗಿ, ಜನಗಳನ್ನು ಕಂಡು ಮಾತನಾಡಿಸಿ ಅವರ ಕಷ್ಟಸುಖ ತಿಳಿದುಕೊಂಡು ಎರಡು ವರ್ಷಗಳ ಬಳಿಕ ಹಿಂತಿರುಗಿ ಬರುತ್ತೇನೆ” ಎಂದು ಹೊರಟುನಿಂತನು. ರಾಜನು, “”ದೂರ ಪ್ರಯಾಣಕ್ಕೆ ಒಬ್ಬನೇ ಹೋಗುವುದು ಬೇಡ. ನಿನ್ನ ನೆಚ್ಚಿನ ಸೇವಕನನ್ನು ಜೊತೆಗೆ ಕರೆದುಕೊಂಡು ಹೋಗು. ಪರದೇಶದಲ್ಲಿ ಏನಾದರೂ ಸಮಸ್ಯೆಗಳು ಎದುರಾಗಬಹುದು. ಮರದ ಕೆಳಗೆ ಮಲಗಬೇಕಾದ ಸಂದರ್ಭ ಒದಗಬಹುದು. ಇಂತಹ ಸನ್ನಿವೇಶದಲ್ಲಿ ಜತೆಗೊಬ್ಬರು ಇದ್ದರೆ ಧೈರ್ಯವಾಗುತ್ತದೆ” ಎಂದು ಹೇಳಿ ಮಗನೊಂದಿಗೆ ಜತೆಗೂಡಿ ಹೋಗಲು ಒಬ್ಬ ಸೇವಕನನ್ನೂ ಕಳುಹಿಸಿಕೊಟ್ಟ.

ಯುವರಾಜನು ಸೇವಕನೊಂದಿಗೆ ಹಲವು ದಿನಗಳ ಕಾಲ ನಡೆಯುತ್ತ ಅನೇಕ ಊರುಗಳನ್ನು ಸಂದರ್ಶಿಸಿದ. ಜನರ ಕಷ್ಟಸುಖಗಳನ್ನು ತಿಳಿದುಕೊಂಡು ಮುಂದೆ ಸಾಗಿದ. ಒಂದೆಡೆ ನದಿಯ ಪಕ್ಕದಲ್ಲಿ ಹೆಣ್ಣುಹಂಸವೊಂದು ವಿಹರಿಸುತ್ತ ಇತ್ತು. ಆಗ ದೈತ್ಯ ಗಾತ್ರದ ಒಂದು ಹದ್ದು ಬಂದು ಅದರ ಮೇಲೆರಗಿತು. ಹದ್ದಿನಿಂದ ತಪ್ಪಿಸಿಕೊಳ್ಳಲಾಗದೆ ಹಂಸವು ಆರ್ತನಾದ ಮಾಡತೊಡಗಿತು. ಆಗ ರಾಜಕುಮಾರನು ಇದನ್ನು ಕಂಡು ಹದ್ದಿನ ಕಡೆಗೆ ಒಂದು ಬೆಣಚು ಕಲ್ಲನ್ನು ಗುರಿಯಿಟ್ಟು ಹಾರಿಸಿದ. ಅದರ ಏಟಿನಿಂದ ಭಯಗೊಂಡ ಹದ್ದು ಹಂಸವನ್ನು ಬಿಟ್ಟು ದೂರ ಓಡಿಹೋಯಿತು. ಸಾವಿನಿಂದ ಪಾರಾದ ಹಂಸವು ಸಂತೋಷದಿಂದ ಕುಣಿದಾಡಿತು.

ಬಳಿಕ ಹಂಸವು ರಾಜಕುಮಾರನ ಬಳಿಗೆ ಬಂದಿತು. ಮನುಷ್ಯ ಭಾಷೆಯಲ್ಲಿ, “”ಅಯ್ನಾ, ನನ್ನ ಜೀವ ಉಳಿಸಿ ದೊಡ್ಡ ಉಪಕಾರ ಮಾಡಿದೆ. ಇದಕ್ಕೆ ಪ್ರತಿಫ‌ಲವಾಗಿ ಏನನ್ನಾದರೂ ಕೊಡುಗೆಯನ್ನು ಸ್ವೀಕರಿಸಬೇಕು” ಎಂದು ಪ್ರಾರ್ಥಿಸಿತು. ರಾಜಕುಮಾರನು ನಸುನಗುತ್ತ, “”ನಿನ್ನ ಒಳ್ಳೆಯ ಗುಣಕ್ಕೆ ವಂದನೆಗಳು. ಆದರೆ ಕರುಣೆ ಎಂಬುದು ರಾಜವಂಶದವನಾದ ನನ್ನಲ್ಲಿ ಇರಲೇಬೇಕಾದ ಗುಣ. ಕಷ್ಟದಲ್ಲಿರುವವರಿಗೆ ನೆರವಾಗಬೇಕು, ಅದಕ್ಕಾಗಿ ಅವರಿಂದ ಪ್ರತಿಫ‌ಲ ಸ್ವೀಕರಿಸುವುದು ಸಣ್ಣತನವಾಗುತ್ತದೆ. ನನಗೆ ಏನೂ ಬೇಕಾಗಿಲ್ಲ” ಎಂದು ಹೇಳಿದ. ಆದರೆ ಹಂಸವು ಹಲವು ಬಗೆಯಿಂದ ಒತ್ತಾಯಿಸಿತು. ಆದರೂ ರಾಜಕುಮಾರನು ಪ್ರತಿಫ‌ಲ ಪಡೆಯಲು ಒಪ್ಪಲಿಲ್ಲ. ಕಡೆಗೆ ಅದು, “”ನಿನಗೆ ಅಗತ್ಯವೆನಿಸಿದರೆ ಇರುಳಿನ ರಾಣಿಯೇ ಬಾ ಎಂದು ನನ್ನನ್ನು ಮೂರು ಸಲ ಕೂಗು. ಯಾವ ನೆರವು ಬೇಕಿದ್ದರೂ ನನ್ನ ತಂದೆ ಕೂಡಲೇ ಬಂದು ಕೊಡುತ್ತಾರೆ. ಅವರು ಎಲ್ಲ ಹಕ್ಕಿಗಳಿಗೂ ಚಕ್ರವರ್ತಿಯಾಗಿದ್ದಾರೆ” ಎಂದು ಹೇಳಿ ಹಾರಿಹೋಯಿತು.

ರಾಜಕುಮಾರನು ಸೇವಕನೊಂದಿಗೆ ಯಾತ್ರೆ ಮುಂದುವರೆಸಿದ. ಅವರು ಒಂದು ಮರುಭೂಮಿಯನ್ನು ತಲುಪಿದರು. ಪ್ರಖರವಾದ ಬಿಸಿಲು ಮೈಯನ್ನು ಸುಡುತ್ತಿತ್ತು. ಬಾಯಾರಿದ ರಾಜಕುಮಾರನು ಸೇವಕನೊಂದಿಗೆ ಎಲ್ಲಿಯಾದರೂ ನೀರು ಇದ್ದರೆ ಹುಡುಕಿ ತರುವಂತೆ ಹೇಳಿದ. ಸೇವಕನು ಎಲ್ಲ ಕಡೆ ಹುಡುಕಿದ. ಒಂದು ದೊಡ್ಡ ಪ್ರಪಾತದ ಆಳದಲ್ಲಿ ಸ್ವಲ್ಪ ಮಾತ್ರ ನೀರು ಕಾಣಿಸಿತು. ರಾಜಕುಮಾರನನ್ನು ಬಳಿಗೆ ಕರೆದ. ರಾಜಕುಮಾರನು ಬಾಗಿ ನೋಡಿ, “”ಈ ನೀರನ್ನು ಬಿಟ್ಟರೆ ಬೇರೆ ಎಲ್ಲಿಯೂ ಹನಿ ನೀರಿಲ್ಲವಲ್ಲ. ಅದನ್ನು ತರಬೇಕಿದ್ದರೆ ನಿನ್ನ ಸೊಂಟಕ್ಕೆ ಹಗ್ಗ ಕಟ್ಟಿ ಹಗ್ಗವನ್ನು ನಾನು ಹಿಡಿದುಕೊಂಡು ನಿನ್ನನ್ನು ಸ್ವಲ್ಪ ಸ್ವಲ್ಪವೇ ಕೆಳಗಿಳಿಸುತ್ತೇನೆ. ಒಂದು ಸೋರೆಬುರುಡೆಗೆ ನೀನು ನೀರು ತುಂಬಿಸಿದ ಬಳಿಕ ಮತ್ತೆ ಮೇಲೆಳೆದುಕೊಳ್ಳುತ್ತೇನೆ” ಎಂದು ಹೇಳಿದ.

ಸೇವಕನು, “”ಉಪಾಯವೇನೋ ಚೆನ್ನಾಗಿದೆ. ಆದರೆ ನಾನು ತುಂಬ ಭಾರವಾಗಿದ್ದೇನೆ. ನನ್ನನ್ನು ಹಗ್ಗದಲ್ಲಿ ಕೆಳಗಿಳಿಸಿ ಮತ್ತೆ ಮೇಲೆಳೆಯಲು ನಿನಗೆ ಶಕ್ತಿ ಸಾಕಾಗದು. ನಿನಗೆ ಮನಸ್ಸಿದ್ದರೆ ಹಗ್ಗದ ಮೂಲಕ ನೀನು ಕೆಳಗಿಳಿದು ನೀರು ತರಬಹುದು. ಅದಲ್ಲವಾದರೆ ದಾಹದಿಂದ ಸಾಯುವುದು ಬಿಟ್ಟರೆ ಬೇರೆ ದಾರಿಯಿಲ್ಲ” ಎಂದು ಹೇಳಿದ. ಬಾಯಾರಿದ ರಾಜಕುಮಾರನು, “”ಹಾಗೆಯೇ ಆಗಲಿ” ಎಂದು ಒಪ್ಪಿಕೊಂಡ. ಸೇವಕನು ಅವನ ಸೊಂಟಕ್ಕೆ ಹಗ್ಗ ಕಟ್ಟಿ ಪ್ರಪಾತಕ್ಕೆ ಇಳಿಸಿದ. ರಾಜಕುಮಾರನು ಸೋರೆ ಬುರುಡೆಯಲ್ಲಿ ನೀರು ತುಂಬಿಕೊಂಡು ಮೇಲೆಳೆಯಲು ಹೇಳಿದಾಗ ಸೇವಕನು, “”ರಾಜಕುಮಾರ, ನೀನು ಮೇಲೆ ಬರುವುದು ಬೇಡ. ಅಲ್ಲಿಯೇ ಸತ್ತುಹೋಗು. ಇಷ್ಟು ವರ್ಷ ನೀನು ಒಡೆಯನಾಗಿ ನನ್ನಲ್ಲಿ ದುಡಿಸಿಕೊಂಡದ್ದು ಸಾಕು. ನಿನಗೆ ಜೀವದ ಮೇಲೆ ಆಶೆಯಿದ್ದರೆ ನಿನ್ನ ಉಡುಪುಗಳನ್ನು, ಆಭರಣಗಳನ್ನು ನನಗೆ ಕೊಡಬೇಕು. ನನ್ನನ್ನು ರಾಜಕುಮಾರನೆಂದು ಒಪ್ಪಿಕೊಂಡು ಜೀವಮಾನವಿಡೀ ನನ್ನ ಸೇವಕನಾಗಿರಬೇಕು. ನಾನು ಧರಿಸಿದ ಉಡುಪುಗಳನ್ನು ನೀನು ತೊಡಬೇಕು. ಇದಕ್ಕೆ ಒಪ್ಪಿಗೆಯಿದ್ದರೆ ದೇವರ ಹೆಸರಿನಲ್ಲಿ ಮಾತು ಕೊಡು” ಎಂದು ಕೂಗಿ ಹೇಳಿದ. ಬದುಕಲು ಬೇರೆ ಮಾರ್ಗವೇ ಇಲ್ಲದ ಕಾರಣ ರಾಜಕುಮಾರ ಹಾಗೆಯೇ ಮಾತುಕೊಟ್ಟ.

ಸೇವಕ ರಾಜಕುಮಾರನನ್ನು ಮೇಲಕ್ಕೆಳೆದುಕೊಂಡ. ಇಬ್ಬರೂ ಅವರವರ ಉಡುಗೆ-ತೊಡುಗೆ ಗಳನ್ನು ಬದಲಾಯಿಸಿ ಕೊಂಡರು. ಅವರ ದೇಶಸಂಚಾರ ಮುಂದು ವರೆಯಿತು. ಅವರು ಒಂದು ರಾಜ್ಯವನ್ನು ತಲುಪಿದರು. ಪ್ರವೇಶದ್ವಾರದಲ್ಲಿ ಸುಂದರಿಯಾದ ರಾಜಕುಮಾರಿಯ ಭಾವಚಿತ್ರವನ್ನಿರಿಸಿದ್ದರು. ಅಲ್ಲಿ ನಿಂತ ಸೇವಕರು, “”ನಿಮ್ಮನ್ನು ನೋಡಿದರೆ ಯುವರಾಜ ಮತ್ತು ಸೇವಕನ ಹಾಗೆ ಕಾಣಿಸುತ್ತದೆ. ಈ ರಾಜ್ಯವನ್ನು ಶತ್ರು ಪಡೆಯವರು ಮುತ್ತಿಗೆ ಹಾಕಿದ್ದಾರೆ. ಅವರನ್ನು ಸೋಲಿಸಿ ದೂರ ಅಟ್ಟಿದವರಿಗೆ ಈ ರಾಜಕುಮಾರಿಯ ಜೊತೆಗೆ ವಿವಾಹ ನೆರವೇರುತ್ತದೆ” ಎಂದು ಹೇಳಿದರು. ಆಗ ನಕಲಿ ರಾಜಕುಮಾರನಾದ ಸೇವಕನು, “”ಇಂತಹ ಕ್ಷುಲ್ಲಕ ಕೆಲಸಕ್ಕೆ ನಾನೇ ಹೋಗಬೇಕಾಗಿಲ್ಲ. ನನ್ನೊಂದಿಗೆ ಇರುವ ಈ ಸೇವಕ ಅದನ್ನು ಮಾಡುತ್ತಾನೆ” ಎಂದು ಹೇಳಿ ರಾಜಕುಮಾರನೊಂದಿಗೆ, “”ಸೇವಕನೇ, ರಾತ್ರೆ ಬೆಳಕು ಹರಿಯುವ ಹೊತ್ತಿಗೆ ಎಲ್ಲ ಶತ್ರುಗಳೂ ನಾಶವಾಗಿರಬೇಕು. ಇಲ್ಲದಿದ್ದರೆ ನಿನ್ನ ರುಂಡ ಮುಂಡದಿಂದ ಬೇರ್ಪಡುತ್ತದೆ” ಎಂದು ಆಜ್ಞಾಪಿಸಿದ.

ರಾಜಕುಮಾರನು ಒಂಟಿಯಾಗಿ ನಿಂತು ಚಿಂತಿಸುತ್ತಿದ್ದಾಗ ಅವನಿಗೆ ಹಂಸಪಕ್ಷಿಯು ಕಷ್ಟ ಬಂದಾಗ ನೆನೆದುಕೊಳ್ಳಲು ಹೇಳಿದ ಮಾತು ನೆನಪಿಗೆ ಬಂದಿತು. “”ಇರುಳಿನ ರಾಣಿಯೇ ಬಾ. ನನ್ನ ಕಷ್ಟವನ್ನು ಪರಿಹರಿಸು” ಎಂದು ನೆನೆದುಕೊಂಡ. ಮರುಕ್ಷಣವೇ ಒಂದು ದೊಡ್ಡ ಕುದುರೆ ಕೆನೆಯುತ್ತ ಅವನ ಬಳಿಗೆ ಓಡಿಬಂದಿತು. ಅದರ ಬೆನ್ನಿನ ಮೇಲೆ ದಿವ್ಯವಾದ ಒಂದು ಖಡ್ಗ ಇತ್ತು. ರಾಜಕುಮಾರ ಕುದುರೆಯನ್ನೇರಿದ. ಕತ್ತಿಯನ್ನು ಝಳಪಿಸುತ್ತ ಶತ್ರು ಪಾಳಯದೊಳಗೆ ನುಗ್ಗಿದ. ಅವನನ್ನು ಎದುರಿಸಲು ಸಾಧ್ಯವಾಗದೆ ದೊಡ್ಡ ಸೇನೆ ಪರಾಜಿತಗೊಂಡು ಓಡಿಹೋಯಿತು. ಬೆಳಗಾಗುವಾಗ ಕುದುರೆ ರಾಜಕುಮಾರನನ್ನು ಹೊತ್ತುಕೊಂಡು ಅರಮನೆಯ ಬಳಿಗೆ ಬಂದಿತು. ಕಾದು ನಿಂತಿದ್ದ ಸೇವಕ ಕುದುರೆಯೆಡೆಗೆ ಧಾವಿಸಿದ. “”ಸೇವಕನೇ, ಇಳಿ ಕೆಳಗೆ. ಶತ್ರುಗಳನ್ನು ನಾನು ಸಂಹರಿಸಿದೆನೆಂದು ಎಲ್ಲರೂ ನಂಬಬೇಕಿದ್ದರೆ ಕುದುರೆಯ ಮೇಲೆ ನಾನೇ ಕುಳಿತಿರಬೇಕು” ಎಂದು ಆಜ್ಞಾಪಿಸಿದ.

ರಾಜಕುಮಾರ ಕೆಳಗಿಳಿದ. ಸೇವಕನು ಕುದುರೆಯ ಬಳಿಗೆ ಹೋದಾಗ ಅದು ಅವನನ್ನು ಕೆಡವಿ ಹಾಕಿತು. ಮೇಲೇಳದ ಹಾಗೆ ಮುಂಗಾಲನ್ನು ಅವನ ಎದೆಯ ಮೇಲಿಟ್ಟಿತು. ಅಷ್ಟರಲ್ಲಿ ಆ ರಾಜ್ಯದ ರಾಜನು ಪರಿವಾರದವರ ಜೊತೆಗೆ ಅಲ್ಲಿಗೆ ಬಂದ. ಕುದುರೆಯ ಕಾಲುಗಳ ಕೆಳಗೆ ಸಿಲುಕಿ ಒದ್ದಾಡುತ್ತಿರುವ ರಾಜಕುಮಾರನನ್ನು ಪಾರು ಮಾಡಲು ಸೇವಕರಿಗೆ ಆಜ್ಞಾಪಿಸಿದ. ಆದರೆ ಯಾರಿಗೂ ಅದು ಸಾಧ್ಯವಾಗಲಿಲ್ಲ. ಆಗ ದೈವಜ್ಞರು ಬಂದರು. “”ದೊರೆಯೇ, ಕುದುರೆಯು ಸವಾರನನ್ನು ಹೀಗೆ ಕೆಡವಬೇಕಿದ್ದರೆ ಕೆಳಗೆ ಬಿದ್ದಿರುವ ವ್ಯಕ್ತಿಯಲ್ಲಿ ಏನೋ ಕಪಟವಿದೆ ಎಂದು ಭಾವಿಸಬೇಕಾಗುತ್ತದೆ. ಅದೇನು ಎಂಬುದನ್ನು ಅವನೊಂದಿಗೆ ಕೇಳಬೇಕು” ಎಂದು ಹೇಳಿದರು.

ವಿಧಿಯಲ್ಲದೆ ಸೇವಕನು ನಡೆದ ವಿಷಯವನ್ನು ಹೇಳಿದ. ತಾನು ಅಸಲು ರಾಜಕುಮಾರನಲ್ಲವೆಂಬುದನ್ನು ಒಪ್ಪಿಕೊಂಡ. ರಾಜನು ಅವನಿಗೆ ಕಠಿನವಾಗಿ ಶಿಕ್ಷೆ ನೀಡಿದ. ರಾಜಕುಮಾರನಿಗೆ ಮಗಳನ್ನು ಕೊಟ್ಟು ವಿವಾಹ ನೆರವೇರಿಸಿದ. ರಾಜಕುಮಾರನು ರಾಜಕುಮಾರಿಯ ಜೊತೆಗೂಡಿ ಮತ್ತೆ ತನ್ನ ರಾಜ್ಯಕ್ಕೆ ಮರಳಿದ. “”ಅಪ್ಪಾ, ನೀವು ಸಕಲ ಜೀವಿಗಳಲ್ಲೂ ಕರುಣೆ ತೋರಿಸಬೇಕೆಂಬ ಪಾಠ ಕಲಿಸಿದಿರಿ. ಹಂಸದ ಮೇಲೆ ದಯೆ ತೋರಿಸಿದ ಕಾರಣದಿಂದ ನಾನು ಮೋಸದ ಬಲೆಯಿಂದ ಹೊರಬರಲು ಸಾಧ್ಯವಾಯಿತು” ಎಂದು ನಡೆದ ಕತೆಯನ್ನು ಹೇಳಿದ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.