ಸುದರ್ಶನ್ಗೆ ಇಟಲಿಯ ಗೋಲ್ಡನ್ ಸ್ಯಾಂಡ್ ಪ್ರಶಸ್ತಿ
Team Udayavani, Nov 17, 2019, 5:48 AM IST
ಲಂಡನ್: ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಾಟ್ನಾಯಕ್ ಇಟಲಿಯ ರೋಮ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಇಟಾಲಿಯನ್ ಗೋಲ್ಡನ್ ಸ್ಯಾಂಡ್ ಪ್ರಶಸ್ತಿ-2019 ಅನ್ನು ಸ್ವೀಕರಿಸಿದ್ದಾರೆ. ಈ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಸಮಾರಂಭದಲ್ಲಿ ಭಾರ ತದ ರಾಯಭಾರಿ ಕಚೇರಿ ಪರ ವಾಗಿ, ಕಚೇರಿಯ ಉಪಾಧ್ಯಕ್ಷೆ ನಿಹಾರಿಕಾ ಸಿಂಗ್ ಹಾಜ ರಿದ್ದರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿ ಸುತ್ತಿರುವುದಕ್ಕೆ ನನಗೆ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ ಎಂದು ಪಾಟ್ನಾ ಯಕ್ ಹೇಳಿದರು. ಪ್ರಸಕ್ತ ವಾರದ ಆರಂಭದಲ್ಲಿ ಇಟಲಿಯ ಲೆಸ್ಸಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಮರಳು ಶಿಲ್ಪ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸುದರ್ಶನ್, 8 ಅಡಿ ಎತ್ತರದ ಮಹಾತ್ಮಾ ಗಾಂಧಿಯ ಪ್ರತಿಮೆ ರೂಪಿಸಿದ್ದರು.