ಅಂಗಳದಲ್ಲಿ ಹಾಕಿ ಸ್ಟಿಕ್ನಲ್ಲೇ ಬಡಿದಾಟ!
Team Udayavani, Nov 26, 2019, 5:04 AM IST
ಹೊಸದಿಲ್ಲಿ: ಭಾರತೀಯ ಹಾಕಿಯನ್ನೇ ಅವಮಾನಿಸುವಂಥ ಘಟನೆಯೊಂದು ಸೋಮವಾರ “ಜವಾಹರಲಾಲ್ ನೆಹರೂ ಹಾಕಿ ಟೂರ್ನಿ’ಯ ಫೈನಲ್ ವೇಳೆ ನಡೆದಿದೆ. ಪಂಜಾಬ್ ಪೊಲೀಸ್-ಪಂಜಾಬ್ ನ್ಯಾಶನಲ್ ಹಾಕಿ ತಂಡದ ಆಟಗಾರರು ಮೈದಾನದಲ್ಲೇ ಗುದ್ದಾಡಿಕೊಂಡು, ಹಾಕಿ ಸ್ಟಿಕ್ನಿಂದ ಬಡಿದಾಡಿಕೊಂಡಿದ್ದಾರೆ.
3ನೇ ಕ್ವಾರ್ಟರ್ ವೇಳೆ, ಪಂದ್ಯ 3-3 ಸಮಬಲದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಸ್ವಲ್ಪ ಹೊತ್ತು ಸ್ಥಗಿತಗೊಂಡ ಪಂದ್ಯ, ಬಳಿಕ ಕೆಲವು ಆಟಗಾರರ ಗೈರಲ್ಲಿ ಮುಂದುವರಿಯಿತು. 6-3ರಿಂದ ಗೆದ್ದ ಪಿಎನ್ಬಿ ಚಾಂಪಿಯನ್ ಆಯಿತು.
ಘಟನೆಗೆ ಸಂಬಂಧಿಸಿದಂತೆ “ಹಾಕಿ ಇಂಡಿಯಾ’ ಸಂಘಟಕರಿಂದ ವರದಿ ಕೋರಿದ್ದು, ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದೆ.