ಇನ್ನು ಹಳ್ಳಿ ಮನೆಯಿಂದಲೂ ಕಸ ಸಂಗ್ರಹ

Team Udayavani, Nov 30, 2019, 1:13 PM IST

bk-tdy-1

ಬಾಗಲಕೋಟೆ: ನಗರ ಪ್ರದೇಶದಲ್ಲಿ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಿ, ಬಳಿಕ ಅದನ್ನು ಬೇರ್ಪಡಿಸಿ ಸಾವಯವ ಗೊಬ್ಬರ ತಯಾರಿಸುವ ಯೋಜನೆ, ಇನ್ನು ಗ್ರಾಮ ಮಟ್ಟದಲ್ಲೂ ನಡೆಯಲಿದೆ. ಇದಕ್ಕಾಗಿ ಬಹುಗ್ರಾಮ ಯೋಜನೆಯಡಿ ಈ ಕಾರ್ಯ ಕೈಗೊಳ್ಳಲು ಜಿಪಂ ಮುಂದಾಗಿದೆ.

ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಆ ಕಸವನ್ನು ಘನ ತ್ಯಾಜ್ಯ ನಿರ್ವಹಣೆ ಕೇಂದ್ರಕ್ಕೆ ತಂದು, ಹಸಿ ಮತ್ತು ಒಣ ಕಸ ಬೇರ್ಪಡಿಸಲಾಗುತ್ತದೆ. ಹಸಿ-ಒಣ ಕಸದಿಂದ ಸಾವಯವ ಗೊಬ್ಬರ ತಯಾರಿಸುವ ಕಾರ್ಯವೂ ನಡೆಯುತ್ತಿದೆ. ಈ ಕಾರ್ಯದಲ್ಲಿ ಬಾಗಲಕೋಟೆಯ ನಗರಸಭೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ಇತರೆ ನಗರಸಭೆಗಳಿಗೆ ಮಾದರಿಯಾಗಿದೆ. ಅಂತಹದ್ದೇ ಮಾದರಿ ಯೋಜನೆಯನ್ನು ಗ್ರಾಮೀಣ ಭಾಗದಲ್ಲೂ ಕೈಗೊಳ್ಳಲು ಈಗ ಜಿಪಂ ಮುಂದಾಗಿದೆ. ಇದಕ್ಕಾಗಿ ನಾಲ್ಕು ಗ್ರಾಪಂ ವ್ಯಾಪ್ತಿಯಲ್ಲಿ ಒಂದು ಘನತ್ಯಾಜ್ಯ ನಿರ್ವಹಣ ಘಟಕ ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ.

ಐದು ಗ್ರಾಪಂ ಆಯ್ಕೆ: ಕೇಂದ್ರ ಸರ್ಕಾರದ ಎಸ್‌ಡಬ್ಲ್ಯೂಎಂ (ಘನ ತ್ಯಾಜ್ಯ ನಿರ್ವಹಣೆ) ಯೋಜನೆಯಡಿ ಮುಧೋಳ ತಾಲೂಕಿನ ಲೋಕಾಪುರದಲ್ಲಿ ಈ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಲೋಕಾಪುರ, ದಾದನಹಟ್ಟಿ, ಹೆಬ್ಟಾಳ, ಬಂಟನೂರ ಮತ್ತು ಲಕ್ಷಾನಹಟ್ಟಿ ಗ್ರಾಪಂಗಳನ್ನು ಈ ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಗ್ರಾಪಂವೊಂದಕ್ಕೆ 20 ಲಕ್ಷ ರೂ. ಅನುದಾನ ಬರಲಿದ್ದು, ಅದನ್ನು ಗ್ರಾಪಂಗೆ ಒಂದು ಸ್ಥಾಪಿಸಲು ಅನುದಾನದ ಕೊರತೆ ಎದುರಾಗಲಿದೆ. ಹೀಗಾಗಿ ಬಹುಗ್ರಾಮ ಯೋಜನೆಯಡಿ ಅವುಗಳನ್ನು ನಿರ್ವಹಣೆ ಮಾಡಲು ಜಿಪಂ ಯೋಜನೆ ರೂಪಿಸಿದೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆದಿದ್ದು, ಹೊಸ ವರ್ಷದಿಂದ ಈ ಐದು ಗ್ರಾಮಗಳಲ್ಲಿ ಮನೆ-ಮನೆಯ ಕಸ ಸಂಗ್ರಹ ಆರಂಭಗೊಳ್ಳು ಸಾಧ್ಯತೆ ಇದೆ.

ಲೋಕಾಪುರ ಅತಿದೊಡ್ಡ ಗ್ರಾಪಂ: ಜಿಲ್ಲೆಯ 198 ಗ್ರಾಪಂಗಳಲ್ಲಿ ಲೋಕಾಪುರ ಅತಿ ಹೆಚ್ಚು ಆದಾಯ ಇರುವ ಹಾಗೂ ದೊಡ್ಡ ಪಂಚಾಯಿತಿ ಎಂಬ ಖ್ಯಾತಿ ಪಡೆದಿದೆ. ಪಟ್ಟಣ ಪಂಚಾಯಿತಿ ಆಗುವ ಎಲ್ಲ ಅರ್ಹತೆ ಇದ್ದರೂ, ಕೆಲವು ಒತ್ತಡ-ಸಮಸ್ಯೆಗಳಿಂದ ಇನ್ನೂ ಗ್ರಾಪಂ ಆಗಿಯೇ ಮುಂದುವರಿದಿದೆ. ಇಲ್ಲಿ 13ರಿಂದ 15 ಸಾವಿರ ಜನಸಂಖ್ಯೆ ಹೊಂದಿದ್ದು, ಎರಡು ರಾಜ್ಯ ಹೆದ್ದಾರಿ ಹಾದು ಹೋಗಿದೆ.  ಅಲ್ಲದೇ ಪಕ್ಕದ ಬಂಟನೂರ ಗ್ರಾಪಂ ವ್ಯಾಪ್ತಿಯಲ್ಲಿ ಚಿಕ್ಕೂರ, ಬದನೂರ, ಜುನ್ನೂರ ಸೇರಿ ನಾಲ್ಕು ಗ್ರಾಮಗಳಿದ್ದು, 7500 ಜನಸಂಖ್ಯೆ ಇದೆ. ದಾದನಕಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದ್ದು, ದಾದನಟ್ಟಿ, ಹೊಸಕೋಟಿ, ಮಲ್ಲಾಪುರ, ಕನಸಗೇರಿ ಗ್ರಾಮ ಒಳಗೊಂಡಿವೆ. ಲಕ್ಷಾನಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ವರ್ಚಗಲ್‌, ಚೌಡಾಪುರ, ಜಾಲಿಕಟ್ಟಿ ಬಿಕೆ, ಜಾಲಿಕಟ್ಟಿ ಕೆ.ಡಿ, ಪಾಲ್ಕಿಮಾನ್ಯ, ನಾಗನಾಪುರ, ಬ್ಯಾಡರ ಅರಳಿಕಟ್ಟಿ ಗ್ರಾಮ ಒಳಗೊಂಡಿದ್ದು, 9 ಸಾವಿರ ಜನಸಂಖ್ಯೆ ಹೊಂದಿದೆ. ಹೆಬ್ಟಾಳ ಗ್ರಾಪಂ ವ್ಯಾಪ್ತಿಯಲ್ಲಿ 6892 ಜನಸಂಖ್ಯೆ ಇದೆ.

ಏನು ಲಾಭ?: ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಯಿಂದ ಇಡೀ ಗ್ರಾಮವನ್ನು ಸ್ವಚ್ಛವಾಗಿಡಬಹುದು. ಎಸ್‌ಡಬ್ಲ್ಯೂಎಂ ಯೋಜನೆಯಡಿ ಪ್ರತಿ ಪಂಚಾಯಿತಿಗೆ 20 ಲಕ್ಷ ಅನುದಾನ ದೊರೆಯಲಿದ್ದು, ಆ ಅನುದಾನ ಬಳಕೆಗೆ ಸರ್ಕಾರನಿಯಮ ರೂಪಿಸಿದೆ. 5 ಲಕ್ಷ ವೆಚ್ಚದಲ್ಲಿ ಗ್ರಾಪಂಗೆ ಒಂದು ಕಸ ಸಂಗ್ರಹ ವಾಹನ, ಶೆಡ್‌ ನಿರ್ಮಾಣ, ಬ್ಯಾಟರಿ ಚಾಲಿತ ಟ್ರೈ ಸಕಲ್‌, ಕಸ ವಿಂಗಡಣೆಗೆ ಸಿಬ್ಬಂದಿ ನೇಮಕ ಒಳಗೊಂಡಿದೆ. ಲೋಕಾಪುರ ಸಹಿತ ಬಹುಗ್ರಾಮಘಟನ ತ್ಯಾಜ್ಯ ನಿರ್ವಹಣೆ ಯೋಜನೆಯಡಿ ಐದು ಗ್ರಾಪಂ ಆಯ್ಕೆ ಮಾಡಿಕೊಂಡಿದ್ದು, 1 ಕೋಟಿ ಅನುದಾನ ಲಭ್ಯವಾಗಲಿದೆ.

ಇದರಡಿ ಒಂದೇ ಕಡೆಶೆಡ್‌ ನಿರ್ಮಿಸಿ, ಎಲ್ಲ ಗ್ರಾಮಗಳ ಕಸವನ್ನು ಒಂದೆಡೆ ಸಂಗ್ರಹಿಸಿ, ಅದರಿಂದ ಗೊಬ್ಬರ ತಯಾರಿಸಲು ಅನುಕೂಲವಾಗಲಿದೆ. ಒಟ್ಟಾರೆ, ನಗರ ಪ್ರದೇಶದಂತೆ ಗ್ರಾಮೀಣ ಭಾಗದಲ್ಲೂ ಮನೆ-ಮನೆಯ ಕಸ ಸಂಗ್ರಹ ಯೋಜನೆಗೆ ಜಿಪಂ ಯೋಜನೆ ರೂಪಿಸಿದ್ದು, ಇದು ಲೋಕಾಪುರದಲ್ಲಿ ಮೊದಲು ಆರಂಭಗೊಳ್ಳಲಿದೆ.

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.