ಮಂಗಳೂರಿಗೆ ಬಂದಿಳಿದ ಕಾಂಗ್ರೆಸ್ ನಿಯೋಗ ಪೊಲೀಸ್ ವಶಕ್ಕೆ
Team Udayavani, Dec 20, 2019, 1:08 PM IST
ಮಂಗಳೂರು: ಮಂಗಳೂರಿನ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರತಿಭಟನೆಯ ಪರಿಸ್ಥಿತಿಯ ಅವಲೋಕನಕ್ಕಾಗಿ ಆಗಮಿಸಿದ್ದ ಕಾಂಗ್ರೆಸ್ ನಿಯೋಗವನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.
ಕಾಂಗ್ರೆಸ್ ನಾಯಕರಾದ ಎಂ ಬಿ ಪಾಟೀಲ್, ಎಸ್ ಆರ್ ಪಾಟೀಲ್, ವಿ ಎಸ್ ಉಗ್ರಪ್ಪ, ರಮೇಶ್ ಕುಮಾರ್, ಬಸವರಾಜರಾಯ ರೆಡ್ಡಿ ಸೇರಿದಂತೆ ಆರು ಮಂದಿಯ ಕಾಂಗ್ರೆಸ್ ನಿಯೋಗವನ್ನು ಬಜಪೆ ವಿಮಾನನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಿಯೋಗವನ್ನು ಪೊಲೀಸರು ವಿಮಾನ ನಿಲ್ದಾಣದಲ್ಲಿಯೇ ತಡೆದಿದ್ದಾರೆ ಎನ್ನಲಾಗಿದೆ.