ಮಾ. 1ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ

ಸಮ್ಮೇಳನಾಧ್ಯಕ್ಷೆ ಡಾ| ವಿಜಯಾ ಶ್ರೀಧರ್‌ಗೆ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯಿಂದ ಅಧಿಕೃತ ಆಹ್ವಾನ

Team Udayavani, Jan 6, 2020, 4:20 PM IST

6-Jnauary-21

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮಾ.1, 2 ಮತ್ತು 3 ರಂದು ಸಾಹಿತ್ಯ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 14 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ನಗರದ ಖ್ಯಾತ ಮನೋವೈದ್ಯ ಡಾ| ಕೆ. ಆರ್‌. ಶ್ರೀಧರ್‌ ಅವರ ಪತ್ನಿ ಡಾ| ವಿಜಯಾ ಶ್ರೀಧರ್‌ ಅವರನ್ನು ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯವರು ಅವರ ಮನೆಗೆ ತೆರಳಿ ಅಧಿಕೃತವಾಗಿ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ನೀಡಿದರು.

ಜಿಲ್ಲಾ ಅಧ್ಯಕ್ಷ ಡಿ. ಬಿ. ಶಂಕರಪ್ಪ, ಜಿ.ಪಿ. ಸಂಪತ್‌ ಕುಮಾರ್‌, ರುದ್ರಮುನಿ ಎಸ್‌. ಸಜ್ಜನ, ಸುಮಿತ್ರಮ್ಮ, ಶ್ರೀರಂಜನಿ ದತ್ತಾತ್ರಿ, ಮ.ಸ. ನಂಜುಂಡಸ್ವಾಮಿ, ತಿರುಮಲ ಮಾವಿನಕುಳಿ, ಚೆನ್ನಬಸಪ್ಪ ನ್ಯಾಮತಿ, ಶಿವಕುಮಾರ್‌, ಎಚ್‌. ಎನ್‌. ಮಹಾರುದ್ರ, ಎಂ. ಬಸವನ ಗೌಡ, ಅಪೇûಾ ಮಂಜುನಾಥ್‌, ಹ. ರು. ಗಂಗಾಧರಯ್ಯ, ಶಿವಕುಮಾರ್‌ ಮಂಜುನಾಥ ಹಾಲ್ಕುಣಿ, ಸತೀಶ್‌ ಆಡಿನಸರ, ಇಲಿಯಾಸ್‌, ಅಂಗಡಿ ಜಗದೀಶ್‌, ಮಂಜಚಾರ್‌, ಹಸನ್‌, ಜಿ. ಎಸ್‌. ಅನಂತ, ಬೇಲಿಮಲ್ಲೂರು ನಾಗಪ್ಪ, ನಾಗರಾಜ್‌ ಶಿಕಾರಿಪುರ, ಶಿವಮೊಗ್ಗ ಜಗದೀಶ್‌ ಮುಂತಾದ ಸಮಿತಿಯ ಸದಸ್ಯರು ಇದ್ದರು.

ಇದೇ ಸಂದರ್ಭದಲ್ಲಿ ಡಾ| ವಿಜಯಾ ಶ್ರೀಧರ್‌ ಅವರ ಮಕ್ಕಳಾದ ಡಾ| ಪವಿತ್ರ ಡಾ| ಶುಭ್ರತಾ, ಡಾ| ಚೈತ್ರಾ ಅವರು ಇದ್ದರು. ಸಮ್ಮೇಳನಾಧ್ಯಕ್ಷರ ಪರಿಚಯ: 69 ವರ್ಷದ ಡಾ| ವಿಜಯಾ ಶ್ರೀಧರ್‌ 29.01.1949 ರಲ್ಲಿ ಉತ್ತರ ಕನ್ನಡದ ಶಿರಸಿಯಲ್ಲಿ ಜನಿಸಿದ್ದಾರೆ. ತಂದೆ ಸದಾಶಿವ ಶಿರೂರ, ತಾಯಿ ಸರೋಜಿನಿ ಶಿರೂರ. ಶಿಕ್ಷಣದಲ್ಲಿ ಎಂ.ಎ. ಗಣಿತ ಮತ್ತು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡಿ ಸಮಾಜ ಸೇವೆ ಮತ್ತು ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿದ್ದಾರೆ. ಇವರ ಪ್ರಕಟಿತ ಕೃತಿಗಳು: ಪುಟಾಣಿ ಕಥಾ ಕುಸುಮ-1986, ಅನುಪಮಾ ನಿರಂಜನ-2012, ಎಂ.ಕೆ. ಇಂದಿರಾ-2013, ಮಳೆದೇವರ ಬೆಟ್ಟದ ಮೇಲೆ-2017 ಕಳೆದುಕೊಂಡದ್ದು-1991. ಕಥಾ ಸಂಕಲನಗಳು: ಕಳೆದುಕೊಂಡದ್ದು-1991 ಕನ್ನಡಿಯಲ್ಲಿ ಕಂಡಾಗ-1998 ನವನೀತ-2012 ಆತಂತಾತನ ಹೊಸ್ತಾರಿಂಭ-2012 ವಿಜಯಾ ಶ್ರೀಧರ್‌ ಸಮಗ್ರ ಕಥೆಗಳು-2018. ಲಲಿತ ಪ್ರಬಂಧಗಳು: ಅಜ್ಜನ ಮನೆ ಅಂಗಳದಲ್ಲಿ-2007, ಅನುಭವದಡಿಗೆಯ ಮಾಡಿ-2010, ಚೌತಿಚಂದ್ರ ಬಿದಿಗೆ ಇಂದ್ರ-2016. ಪ್ರವಾಸ ಕಥನ: ಪಯಣ-2004,

ಕವನ ಸಂಕಲನ: ಹನಿ-ಧ್ವನಿ-2008. ನಗೆಲೇಖನಗಳ ಸಂಗ್ರಹ: ಸುಹಾಸ-2010 ವ್ಯಕ್ತಿ ಚಿತ್ರ: ದಶರೂಪ (ಕ)ದ ಸುಬ್ಬಣ್ಣ-2007, ಪರಿಪೂರ್ಣ ವ್ಯಕ್ತಿತ್ವ-2007. ಆಕಾಶವಾಣಿ ಭದ್ರಾವತಿಯ 100ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು: ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಧಾರವಾಡ ವಿದ್ಯಾವರ್ಧಕ ಸಂಘದ
ಬಹುಮಾನ, ಗೊರೂರು ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ, ಲಕ್ಷ್ಮೀ ದೇವಮ್ಮ ಶಾಂತರಸ ಪ್ರಶಸ್ತಿ, ಶಾರದಾ ರಾಮಲಿಂಗಪ್ಪ ದತ್ತಿನಿಧಿ ಗೌರವ ಹುದ್ದೆಗಳು:-ಶಿವಮೊಗ್ಗ ಕರ್ನಾಟಕ ಸಂಘದ ಪ್ರಥಮ ಮಹಿಳಾ ಅಧ್ಯಕ್ಷರು (2006-2009)
2ನೇ ಬಾರಿಗೆ ಕರ್ನಾಟಕ ಸಂಘದ ಅಧ್ಯಕ್ಷತೆ-2014 -2015, ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷರು (1999-2000), ಅಂಧರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯೆ, ಕನ್ನಡ ಅಭಿವೃದ್ಧಿ ಪ್ರಾ ಧಿಕಾರದ ಸದಸ್ಯೆ. ಕ್ಷೇಮ ಸಂಸ್ಥೆಯ ಸದಸ್ಯೆ, “ಶ್ರೀವಿಜಯದ’ ಟ್ರಸ್ಟಿ ಮಂದಾರ ಮಹಿಳಾ ಸಂಘದ ಅಧ್ಯಕ್ಷರು (1998-2000) ಕಮಲಾ ನೆಹರೂ ಮಹಿಳಾ ಕಾಲೇಜಿನ ಗೌರ್ನಿಂಗ್‌ ಕೌನ್ಸಿಲ್‌ ಸದಸ್ಯೆ, ವೈದ್ಯ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿವಮೊಗ್ಗ ಜಿಲ್ಲಾ ಅಧಿ ಕಾರೇತರ ಸದಸ್ಯೆ, ಪ್ರತಿಭಾ ರಂಗದ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾಗಿದ್ದು ಹಲವಾರು ಪರಿಷತ್ತಿನ ಕಾರ್ಯಕ್ರಮಗಳ ಗೋಷ್ಟಿಗಳಲ್ಲಿ ಇಂದಿಗೂ ಉಪನ್ಯಾಸ ನೀಡುತ್ತಿದ್ದಾರೆ.
ಇವರ ಪತಿ ಮನೋವೈದ್ಯ ಡಾ| ಕೆ.ಆರ್‌. ಶ್ರೀಧರ್‌.

ಮಕ್ಕಳು ಡಾ| ಚೈತ್ರಾ (ಪತಿ ಸಂತೋಷ ಸಿದ್ದೇಶ್ವರ) ದಂತವೈದ್ಯೆ, ಲೇಖಕಿ, ಕಲಾವಿದೆ. ಡಾ| ಪವಿತ್ರ (ಪತಿ ಡಾ| ನಾಗರಾಜ ಎ.ವಿ.) ಮನೋವೈದ್ಯೆ, ಲೇಖಕಿ, ಕಲಾವಿದೆ. ಡಾ| ಶುಭ್ರತಾ (ಪತಿ ಡಾ| ವಿಕ್ರಮ ಸಕಲೇಶಪುರ) ಮನೋವೈದ್ಯೆ, ಲೇಖಕಿ, ಕಲಾವಿದೆ. ಮೊಮ್ಮಕ್ಕಳು ಮಹತಿ, ಭೂಮಿ, ಮಧುಮಿತಾ, ಭರತವರ್ಷ, ಸುಮೇರು, ಸುಧನ್ವ. ವಿಜಯಾ ಶ್ರೀಧರ್‌, 1ನೇ ಮುಖ್ಯರಸ್ತೆ, ರಾಜೇಂದ್ರನಗರ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ. ಇಂದಿಗೂ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.