ಕೊಡೆ ಮುರುಗನ ಮೇಕಿಂಗ್ ವಿಡಿಯೋ ಸಂಭ್ರಮ
Team Udayavani, Jan 7, 2020, 10:50 AM IST
“ಕೊಡೆಮುರುಗ’ ಎಂಬ ಸಿನಿಮಾ ಬಗ್ಗೆ ನೀವು ಕೇಳಿರಬಹುದು. ಈಗಾಗಲೇ ಟ್ರೇಲರ್ ಮೂಲಕ ಮೆಚ್ಚುಗೆ ಪಡೆದು ಗಾಂಧಿನಗರ ಒಂದು ಕಣ್ಣಿಟ್ಟಿರುವಂತೆ ಮಾಡಿರುವ ಸಿನಿಮಾ. ಈಗ ಈ ಚಿತ್ರ ಮತ್ತೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಚಿತ್ರದ ಮೇಕಿಂಗ್ ವಿಡಿಯೋ. ಹೌದು “ಕೊಡೆ ಮುರುಗ’ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಈ ಚಿತ್ರದ ಮೇಕಿಂಗ್ ವಿಡಿಯೋ ಇಂದು (ಮಂಗಳವಾರ)ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗುತ್ತಿದೆ.
ಗಾಂಧಿನಗರದ ರೆಗ್ಯುಲರ್ ಕಾನ್ಸೆಪ್ಟ್ ಅನ್ನು ಬಿಟ್ಟು ಈ ಸಿನಿಮಾ ಮಾಡಲಾಗಿದ್ದು, ಪಾತ್ರದಲ್ಲಿ ಮುನಿಕೃಷ್ಣ ಹಾಗೂ ಸುಬ್ರಮಣ್ಯ ಪ್ರಸಾದ್ ಇದ್ದಾರೆ. ನಾಯಕಿಯಾಗಿ ಪಲ್ಲವಿಗೌಡ ಬಣ್ಣ ಹಚ್ಚಿದ್ದಾರೆ. ಈ ಹಿಂದೆ “ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಟನಾಗಿ ಅಬ್ಬರಿಸಿದ್ದ ಮುನಿಕೃಷ್ಣ ಈ ಚಿತ್ರದಲ್ಲಿ ಕೊಡೆ ಮುರುಗನಾಗಿ ನಟಿಸಿದ್ದಾರೆ. ಸುಬ್ರಮಣ್ಯ ಪ್ರಸಾದ್ ಈ ಚಿತ್ರದ ನಿರ್ದೇಶಕರು.
ಮೊದಲ ಹಂತವಾಗಿ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಗಾಂಧಿನಗರದಲ್ಲಿನ ಕೆಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಮನರಂಜನೆಯ ಅಂಶವಾಗಿ ಪರಿವರ್ತಿಸಿ ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಮನರಂಜನೆಗೆ ಮೊದಲ ಆದ್ಯತೆ ನೀಡಿರುವುದರಿಂದ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು. ಈ ಚಿತ್ರವನ್ನು ಕೆ.ರವಿಕುಮಾರ್ ಅವರೊಟ್ಟಿಗೆ ಅಶೋಕ್ ಶಿರಾಲಿ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಅರವಿಂದ ರಾವ್, ರಾಕ್ಲೈನ್ ಸುಧಾಕರ್, ಕುರಿ ಪ್ರತಾಪ್, ಸ್ವಾತಿ ಗುರುದತ್, ಅಶೋಕ್, ಸ್ವಯಂವರ ಚಂದ್ರು, ತುಮಕೂರು ಮೋಹನ್, ಮೋಹನ್ ಜುನೇಜಾ ನಟಿಸಿದ್ದಾರೆ. ಇನ್ನು, ಚಿತ್ರದ ವಿಶೇಷ ಹಾಡೊಂದಕ್ಕೆ “ಲೂಸ್ ಮಾದ’ ಯೋಗಿ ಹೆಜ್ಜೆ ಹಾಕಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ