ಅಂಡರ್-19 ವಿಶ್ವಕಪ್: ಭಾರತ-ಪಾಕಿಸ್ಥಾನ ಸೆಮಿ ಸೆಣಸಾಟ
Team Udayavani, Jan 31, 2020, 11:41 PM IST
ಬೆನೋನಿ: ಭಾರತ ಮತ್ತು ಪಾಕಿಸ್ಥಾನ ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ಪರಸ್ಪರ ಎದುರಾಗಲಿವೆ. ಈ ಪಂದ್ಯ ಫೆ. 4ರಂದು ಪೊಚೆಫ್ಸೂóಮ್ನಲ್ಲಿ ನಡೆಯಲಿದೆ.
ಶುಕ್ರವಾರ ನಡೆದ ಅಂತಿಮ ಕ್ವಾರ್ಟರ್ ಫೈನಲ್ನಲ್ಲಿ ಪಾಕಿಸ್ಥಾನ 6 ವಿಕೆಟ್ಗಳಿಂದ ಅಫ್ಘಾನಿಸ್ಥಾನವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನ್ 49.1 ಓವರ್ಗಳಲ್ಲಿ 189ಕ್ಕೆ ಆಲೌಟ್ ಆಯಿತು. ಪಾಕಿಸ್ಥಾನ 41.1 ಓವರ್ಗಳಲ್ಲಿ 4 ವಿಕೆಟಿಗೆ 190 ರನ್ ಬಾರಿಸಿತು.
ಪಾಕ್ ಪರ ಮೊದಲ ಪಂದ್ಯವಾಡಿದ ಆರಂಭಕಾರ ಮೊಹಮ್ಮದ್ ಹುರೈರ 64 ರನ್ ಬಾರಿಸಿದರು. ಬೌಲಿಂಗ್ನಲ್ಲಿ ಮೊಹಮ್ಮದ್ ಆಮಿರ್ ಖಾನ್ 3 ವಿಕೆಟ್ ಕಿತ್ತು ಮಿಂಚಿದರು. ಅಫ್ಘಾನ್ ಸರದಿಯಲ್ಲಿ 40 ರನ್ ಮಾಡಿದ ನಾಯಕ ಫರಾನ್ ಝಖೀಲ್ ಅವರದೇ ಹೆಚ್ಚಿನ ಗಳಿಕೆ.
ಇನ್ನೊಂದು ಸೆಮಿಫೈನಲ್ ಗುರುವಾರ ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ನಡುವೆ ಸಾಗಲಿದೆ. ಇದರೊಂದಿಗೆ ಈ ಕೂಟದ ಸೆಮಿಫೈನಲ್ನಲ್ಲಿ ಏಶ್ಯದ 3 ತಂಡಗಳು ಕಾಣಿಸಿಕೊಂಡಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು