ಪ್ರಯಾಣಿಕರ ಗೋಳಿಗೆ ಕೊನೆ ಎಂದು!

ಸಿರುಗುಪ್ಪದಿಂದ ಬಳ್ಳಾರಿ ಕಡೆಗೆ ತೆರಳುವುದಕ್ಕೆ ಬಸ್‌ ಕೊರತೆನಿತ್ಯ ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ

Team Udayavani, Feb 20, 2020, 12:42 PM IST

20-February-09

ಸಿರುಗುಪ್ಪ: ನಗರದಿಂದ ಬಳ್ಳಾರಿ ಕಡೆಗೆ ತೆರಳುವ ಸಾರ್ವಜನಿಕರಿಗೆ ಸಂಜೆ 5ಗಂಟೆಯಿಂದ 7ಗಂಟೆವರೆಗೆ ಬಸ್‌ಗಳ ಕೊರತೆ ಇರುವುದರಿಂದ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಿವಿಧ ಇಲಾಖೆಗಳ ನೌಕರರು ಕಳೆದ ಒಂದು ವರ್ಷದಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

ನಗರದಿಂದ ಬಳ್ಳಾರಿ ಕಡೆಗೆ ಸಂಚರಿಸುವ ಬಹುತೇಕ ಬಸ್‌ಗಳು ಸಂಜೆ 5ಗಂಟೆ ಒಳಗೆ ತೆರಳುತ್ತಿರುವುದರಿಂದ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಸರ್ಕಾರಿ ನೌಕರರಿಗೆ ಬಳ್ಳಾರಿ ಕಡೆಗೆ ತೆರಳಲು ಯಾವುದೇ ಬಸ್‌ ಸೌಲಭ್ಯವಿಲ್ಲದೆ ದೂರದ ಗುಲ್ಬರ್ಗಾ-ಬಳ್ಳಾರಿ, ರಾಯಚೂರು-ಬಳ್ಳಾರಿ, ಹುಮ್ನಾಬಾದ್‌-ಬಳ್ಳಾರಿ, ಬೀದರ್‌-ಬಳ್ಳಾರಿ, ಸಿಂಧನೂರು-ಬೆಂಗಳೂರಿನಿಂದ ಬರುವ ಬಸ್‌ಗಳೇ ಸಂಚಾರಕ್ಕೆ ಆಧಾರವಾಗಿವೆ.

ಈ ಬಸ್‌ಗಳು ಕೂಡ ಯಾವ ಸಮಯಕ್ಕೆ ಬರುತ್ತವೋ ಯಾರಿಗೂ ಗೊತ್ತಿರುವುದಿಲ್ಲ, ಆದರೆ ದೂರದ ಊರುಗಳಿಂದ ಬರುವ ಈ ಬಸ್‌ಗಳು ಯಾವಾಗಲೂ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಒಮ್ಮೊಮ್ಮೆ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ತುಂಬಿರುತ್ತಾರೆ.

ಹುಮ್ನಾಬಾದ್‌-ಬಳ್ಳಾರಿ, ಸಿಂಧನೂರು- ಬೆಂಗಳೂರು ಬಸ್‌ಗಳು ತೆಕ್ಕಲಕೋಟೆಯಲ್ಲಿ ಮಾತ್ರ ನಿಲ್ಲಿಸುವುದರಿಂದ ತೆಕ್ಕಲಕೋಟೆಗೆ ತೆರಳುವ ಪ್ರಯಾಣಿಕರು ಬಸ್‌ ತುಂಬಿದ್ದರೂ ಅದರಲ್ಲಿ ಪ್ರಯಾಣಿಸುತ್ತಾರೆ. ಆದರೆ ಸಿರಿಗೇರಿ ಕ್ರಾಸ್‌, ಕೊಳೂರು ಕ್ರಾಸ್‌, ಸಿಂದಿಗೇರಿ, ಬೈಲೂರು, ಭೈರಾಪುರ ಕ್ರಾಸ್‌, ಕೋಳೂರು, ಸೋಮಸಮುದ್ರ, ಲಕ್ಷ್ಮೀನಗರ ಕ್ಯಾಂಪ್‌ ಮುಂತಾದ ಕಡೆಗಳಲ್ಲಿ ಈ
ಬಸ್‌ ನಿಲ್ಲಿಸದೆ ಇರುವುದರಿಂದ ಗುಲ್ಬರ್ಗಾ-ಬಳ್ಳಾರಿ, ರಾಯಚೂರು-ಬಳ್ಳಾರಿ, ಬೀದರ್‌-ಬಳ್ಳಾರಿ ಬಸ್‌ಗಳು ಕೇವಲ ತೆಕ್ಕಲಕೋಟೆ, ಸಿರಿಗೇರಿ ಕ್ರಾಸ್‌, ಭೆ„ರಾಪುರ ಕ್ರಾಸ್‌, ಕೋಳೂರು ಕ್ರಾಸ್‌, ಸಿಂದಿಗೇರಿ, ಬೈಲೂರಿನಲ್ಲಿ ನಿಲುಗಡೆ ಮಾಡಲಾಗುತ್ತದೆ. ಇನ್ನುಳಿದ ಗ್ರಾಮಗಳಿಗೆ ತೆರಳಬೇಕಾದ ಪ್ರಯಾಣಿಕರಿಗೆ ಇದರಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು, ಸಿರುಗುಪ್ಪದಿಂದ ಬಳ್ಳಾರಿವರೆಗೆ ಎಲ್ಲ ಗ್ರಾಮಗಳಲ್ಲಿ ನಿಲುಗಡೆ ಮಾಡುವ ಒಂದು ಬಸ್‌ ಮತ್ತು ಆಯ್ದ ಕೆಲವು ಗ್ರಾಮಗಳ ಕಡೆ ಮಾತ್ರ ನಿಲ್ಲಿಸುವ ಒಂದು ಬಸ್‌ನ್ನು ಸಂಜೆ 5-30ರ ನಂತರ ಓಡಿಸಿದರೆ ಸಿರುಗುಪ್ಪ ಕಡೆಯಿಂದ ಬಳ್ಳಾರಿ ಕಡೆಗೆ ಸಂಚರಿಸುವ ಎಲ್ಲ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ ಸಿರುಗುಪ್ಪ ಸಾರಿಗೆ ಇಲಾಖೆ ಅಧಿ ಕಾರಿಗಳು ಮಾತ್ರ ಸಂಜೆ 5 ಗಂಟೆಯಿಂದ 7ಗಂಟೆವರೆಗೆ ಸಿರುಗುಪ್ಪದಿಂದ ಬಳ್ಳಾರಿ ಕಡೆಗೆ ಬಸ್‌
ಓಡಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ನಿತ್ಯವೂ 150ರಿಂದ 200ಕ್ಕೂ ಹೆಚ್ಚು ಪ್ರಯಾಣಿಕರು ಸಿರುಗುಪ್ಪ ಬಸ್‌ನಿಲ್ದಾಣದ ಮುಂದೆ ಬಸ್ಸಿಗಾಗಿ ಚಾತಕ ಪಕ್ಷಿಯಂತೆ ಕಾಯುವುದು ಸಾಮಾನ್ಯವಾಗಿದೆ.

ಸಂಜೆ 5ಗಂಟೆ ನಂತರ ಸಿರುಗುಪ್ಪದಿಂದ ಬಳ್ಳಾರಿ ಕಡೆಗೆ ತೆರಳುವ ಪ್ರಯಾಣಿಕರಿಗೆ ಬಸ್‌ ಸೌಕರ್ಯವಿಲ್ಲ, ಹೊರ ಜಿಲ್ಲೆಗಳಿಂದ ಬರುವ ನಾಲ್ಕು ಬಸ್‌ಗಳು ಯಾವಾಗಲು ಭರ್ತಿಯಾಗಿರುತ್ತವೆ. ಇದರಲ್ಲಿ 2
ಬಸ್‌ಗಳು ತೆಕ್ಕಲಕೋಟೆಯಲ್ಲಿ ಮಾತ್ರ ನಿಲುಗಡೆ ಮಾಡುತ್ತವೆ. ಇನ್ನೆರಡು ಬಸ್‌ ಗಳು ಐದು ಕಡೆ ಮಾತ್ರ ನಿಲುಗಡೆ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯವೂ ನರಕಯಾತನೆ ಅನುಭವಿಸಬೇಕಾಗಿದೆ.
ಭಾಗ್ಯಲಕ್ಷ್ಮೀ , ಗೃಹಿಣಿ

ಸಂಜೆ ನಂತರ ಬಳ್ಳಾರಿ ಕಡೆಗೆ ಹೊರಡುವ ಬಸ್‌ಗಳ ಕೊರತೆ ಇರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಈ ಬಗ್ಗೆ ಸಿರುಗುಪ್ಪ ಸಾರಿಗೆ ಡಿಪೋ ವ್ಯವಸ್ಥಾಪಕ ತಿರುಮಲೇಶರೊಂದಿಗೆ ಚರ್ಚಿಸಿದ್ದೇನೆ. ಪ್ರಯಾಣಿಕರ ಅನುಕೂಲಕ್ಕೆ ಶೀಘ್ರವಾಗಿ ಬಸ್‌ಬಿಡುವ ಭರವಸೆ ನೀಡಿದ್ದಾರೆ.
ಎಸ್‌.ಬಿ. ಕೂಡಲಗಿ,
ತಹಶೀಲ್ದಾರ್‌

ಸಂಜೆ 5ರ ನಂತರ ಬಳ್ಳಾರಿ ಕಡೆಗೆ ಹೆಚ್ಚುವರಿ ಬಸ್‌ ಬಿಡುವ ಬಗ್ಗೆ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
ಕೆ.ಎಂ. ತಿರುಮಲೇಶ,
ಸಿರುಗುಪ್ಪ ಸಾರಿಗೆ ಘಟಕದ ವ್ಯವಸ್ಥಾಪಕ

ಆರ್‌.ಬಸವರೆಡ್ಡಿ ಕರೂರು

ಟಾಪ್ ನ್ಯೂಸ್

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.