ಗುಣಾತ್ಮಕ ಶಿಕ್ಷಣದಿಂದ ದೇಶದ ಅಭಿವೃದ್ಧಿ: ಶಶೀಲ್‌

Team Udayavani, Feb 27, 2020, 5:00 PM IST

27-Feburary-21

ಬೀದರ: ಶಾಲಾ ಕೊಠಡಿಯಲ್ಲಿ ದೇಶದ ಭವಿಷ್ಯ ನಿರ್ಮಾಣವಾಗುವುದು. ಯಾವ ದೇಶದಲ್ಲಿ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆಯಾಗುತ್ತದೆಯೋ ಆ ದೇಶವು ಆರ್ಥಿಕ, ಸಾಮಾಜಿಕ, ನೈತಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತಗೊಳ್ಳುತ್ತದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ್‌ ನಮೋಶಿ ತಿಳಿಸಿದರು.

ಔರಾದ ತಾಲೂಕಿನ ಧರಿ ಹನುಮಾನ ಹತ್ತಿರದ ಜ್ಞಾನ ಭಾರತಿ ಗುರುಕುಲ ಆವರಣದಲ್ಲಿ ನೈಟಿಂಗೇಲ್‌ ಪಬ್ಲಿಕ್‌ ಶಾಲೆಗಳ ಶಿಕ್ಷಕರಿಗಾಗಿ ಹಮ್ಮಿಕೊಂಡಿರುವ ಶಿಕ್ಷಕರ ಕಲಿಕಾ ಪ್ರೇರಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನ ಕಾರಂಜಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಬಸವರಾಜ ಭರಶೆಟ್ಟಿ ಮಾತನಾಡಿ, ಜಿಲ್ಲೆಯ ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದಾಗಿ ನಮ್ಮ ಸಂಸ್ಥೆಯ ನೈಟಿಂಗೇಲ್‌ ಪಬ್ಲಿಕ್‌ ಶಾಲೆ ನಡೆಸಲಾಗುತ್ತಿದೆ. ನಮ್ಮ ಸಂಸ್ಥೆ ಶಿಕ್ಷಕರು ಕಳೆದ 17 ವರ್ಷದಿಂದ ಗ್ರಾಮೀಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ಸಂತಸ ತಂದಿದೆ. ಪತ್ರಿ ವರ್ಷ ಶಿಕ್ಷಕರನ್ನು ಪುನಃಶ್ಚೇತನಗೊಳಿಸಲು ನುರಿತ ಅನುಭವಿ ಸಂಪನ್ಮೂಲ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದೆ. ತರಬೇತಿ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಹುಮ್ಮಸ್ಸು ತರತ್ತದೆ ಎಂದರು.

ಸೈನಿಕ ಶಾಲೆಯ ಮಾಜಿ ಅಧ್ಯಕ್ಷ ಬಾಪುರಾವ್‌ ಪಾಟೀಲ ಮಾತನಾಡಿ, ಜೀವನದಲ್ಲಿ ಆಸ್ತಿ, ಅಂತಸ್ತು, ಐಶ್ವರ್ಯವೆಲ್ಲ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದಿಂದ ಸಾಮಾನ್ಯ ವ್ಯಕ್ತಿಯೂ ಅಸಮಾನ್ಯವಾದ ಸಾಧನೇ ಮಾಡಲು ಸಾಧ್ಯವಿದೆ. ಶಿಕ್ಷಕರು ತಮ್ಮ ಶಾಲೆಗೆ ಬರುವ ಮಕ್ಕಳ ಪಾಲಿಗೆ ಹೊಸ ಬದುಕು ನೀಡುವ ಶಕ್ತಿ ಸಾಮರ್ಥ್ಯ ಹೊಂದಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ಜೀವನದ ಸಾಧನೆಗೆ ಸ್ಫೂರ್ತಿ, ಪ್ರೇರಣೆ ಶಿಕ್ಷಕರಿಂದಲೇ ಪ್ರಾರಂಭವಾಗುತ್ತದೆ. ಮಕ್ಕಳ ಮನಸ್ಸಲ್ಲಿ ಕನಸು ಬಿತ್ತುವ ಕನಸುಗಾರರೇ ಶಿಕ್ಷಕರು. ಎಂತಹದೇ ಸಮಯ ಸಂದರ್ಭದಲ್ಲಿಯೂ ಶಿಕ್ಷಕರು ನಿರುತ್ಸಾಹಿಗಳಾಗದೇ ಸದಾ ಉತ್ಸಾಹದ ಚಿಲುಮೆಯಾಗಿ ಮಕ್ಕಳಿಗೆ ಆದರ್ಶವಾಗಿರಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಗುರು ಶಾಲಿವಾನ ಗಂದಗೆ, ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ದೀಲಿಪರಾವ್‌ ಬಿರಾದರ, ಸಂಪನ್ಮೂಲ ಶಿಕ್ಷಕರಾದ ಗುರುನಾಥ ದೇಶಮುಖ, ಶಿವಲಿಂಗ ಹೆಡೆ, ಸಂಜುಕುಮಾರ ಮಾನೂರೆ ಮಲ್ಲಿಕಾರ್ಜುನ ಟಂಕಸಾಲೆ ಇದ್ದರು. ಶಿಕ್ಷಕರಾದ ಅಲ್ಕಾವತಿ ಸ್ವಾಗತಿಸಿದರು. ದೇವಿಂದ್ರಪ್ಪ ನಿರೂಪಿಸಿದರು, ರವೀಂದ್ರ ಚವ್ಹಾಣ ವಂದಿಸಿದರು.

ಟಾಪ್ ನ್ಯೂಸ್

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.