ಗಣತಿ ಕಾರ್ಯದಲ್ಲಿ ಸಮರ್ಪಕ ಮಾಹಿತಿ ಸಂಗ್ರಹಿಸಿ

ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಜನಗಣತಿಗೆ ಅಗತ್ಯ ಸಿದ್ಧತೆಗೆ ಎಡಿಸಿ ಸೂಚನೆ

Team Udayavani, Feb 28, 2020, 5:48 PM IST

28-Febraury-28

ರಾಯಚೂರು: ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿ ಕಾರ್ಯವನ್ನು ಯಾವುದೇ ಸಮಸ್ಯೆ ಬಾರದಂತೆ ಸುಸೂತ್ರವಾಗಿ ನಿರ್ವಹಿಸಬೇಕು. ತರಬೇತಿಯಲ್ಲಿ ನೀಡುವ ಎಲ್ಲ ಅಂಶಗಳನ್ನು ಮನನ ಮಾಡಿಕೊಂಡು ಸಾರ್ವಜನಿಕರಿಂದ ಸಮರ್ಪಕ ಮಾಹಿತಿ ಸಂಗ್ರಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ದುರುಗೇಶ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ 2021ರ ಜನಗಣತಿಯ ಎಲ್ಲ ಚಾರ್ಜ್‌ ಅಧಿಕಾರಿಗಳು, ಸಹಾಯಕ ಚಾರ್ಜ್‌ ಅಧಿಕಾರಿಗಳು ಹಾಗೂ ತಾಂತ್ರಿಕ ಸಹಾಯಕರಿಗೆ ಗುರುವಾರ ಹಮ್ಮಿಕೊಂಡಿದ್ದ ಜನಗಣತಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜನಗಣತಿ ವೇಳೆ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಅವುಗಳನ್ನು ಮೆಟ್ಟಿ ನಿಲ್ಲಲು ಈ ತರಬೇತಿ ನೆರವಾಗುತ್ತದೆ. ಈ ನಿಟ್ಟಿನಲ್ಲಿ ತರಬೇತುದಾರರು ತಿಳಿಸುವ ಎಲ್ಲ ಅಂಶಗಳನ್ನು ಉತ್ತಮವಾಗಿ ಮನನ ಮಾಡಿಕೊಳ್ಳಬೇಕು ಎಂದರು.

ಜನಗಣತಿ ಕೈಗೊಳ್ಳುವ ಕುರಿತು ನೀಡಿದ ಮೂರು ಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಬೇಕು. ಚಾರ್ಜ್‌ ಅಧಿಕಾರಿಗಳು ಪುಸ್ತಕದ ಸಂಪೂರ್ಣ ವಿವರ ಅರಿಯಬೇಕು. ಮನೆ ಭೇಟಿ ವೇಳೆ ಹೇಗೆ ಮಾಹಿತಿ ಸಂಗ್ರಹಿಸಬೇಕು ಎಂಬುದನ್ನು ಮೊದಲ ಹಂತದಲ್ಲಿ ಹಾಗೂ 2ನೇ ಹಂತದಲ್ಲಿ ಮನೆ ಪಟ್ಟಿ ಹಾಗೂ ಮೊಬೈಲ್‌ ಆ್ಯಪ್‌ ಗಳ ಮೂಲಕ ಹೇಗೆ ಮಾಹಿತಿ ಸಂಗ್ರಹಿಸಬೇಕು ಎಂಬುದನ್ನು ತಿಳಿಸಲಾಗುವುದು ಎಂದರು.

ಜನಗಣತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ನಗರ ಪ್ರದೇಶಗಳಲ್ಲಿ ಅದರ ಸಭೆ ಪಟ್ಟಣ ಪಂಚಾಯಿತಿಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲಿ ತಹಶೀಲ್ದಾರರು ಜನಗಣತಿಗೆ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ತರಬೇತಿಯಲ್ಲಿ ತಿಳಿಸಲಾಗುವುದು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಜನಗಣತಿ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಯಾವುದೇ ಅನುಮಾನವಿಟ್ಟುಕೊಂಡು ಹಿಂದಿರುಗಬಾರದು. ಜನಗಣತಿ ಕಾರ್ಯ ಜಿಲ್ಲೆಯಲ್ಲಿ ಉತ್ತಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂಬಂ ಧಿಸಿದ ಇಲಾಖೆಗಳು ಅದಕ್ಕೆಂದೇ ತಮ್ಮ ಕಚೇರಿಯಲ್ಲಿ ಪ್ರತ್ಯೇಕ ಶಾಖೆ ತೆರೆಯಬೇಕು ಎಂದು ಸೂಚಿಸಿದರು. ಲಿಂಗಸುಗೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಜನಗಣತಿ ಕಾರ್ಯದ ಹೆಚ್ಚುವರಿ ಚಾರ್ಜ್‌ ಅಧಿಕಾರಿ ರಾಜಶೇಖರ ಡಂಬಳ, ಎನ್‌ಐಸಿ ಅಧಿಕಾರಿ ರವಿಶಂಕರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ, ಜನಗಣತಿ ತರಬೇತಿದಾರ ಹಾಗೂ ರಾಯಚೂರು ನೋಡಲ್‌ ಅಧಿಕಾರಿ ಮುರಾರಿ ಸತ್ಯಬಾಬು, ಡಿಡಿಪಿಐ ಬಿ.ಎಚ್‌.ಗೋನಾಳ, ಅಧಿಕಾರಿಗಳಾದ ಟಿ.ಕೆ. ಶ್ರೀಧರ ಇತರರಿದ್ದರು. ಶಿವಾನಂದ ಪ್ರಾರ್ಥಿಸಿದರು. ಜಿಲ್ಲಾ ಜನಸಂಖ್ಯೆ ತರಬೇತಿ ಅಧಿಕಾರಿ ಸದಾಶಿವಪ್ಪ ಸ್ವಾಗತಿಸಿದರು.

ಟಾಪ್ ನ್ಯೂಸ್

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

7-uv-fusion

Father: ಅಪ್ಪ – ಮರೆಯಲಾಗದ ಬಂಧ…

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.