ಅಮಾನತಾದ ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಗೆ ಮತ್ತೆ ಆಘಾತ
Team Udayavani, Mar 1, 2020, 12:30 PM IST
ಕರಾಚಿ: ಮೊನ್ನೆಯಷ್ಟೇ ಎಲ್ಲ ಮಾದರಿ ಕ್ರಿಕೆಟ್ ಆಡುವುದರಿಂದ ಅಮಾನತುಗೊಂಡಿದ್ದ ಪಾಕಿಸ್ತಾನಿ ಕ್ರಿಕೆಟಿಗ ಉಮರ್ ಅಕ್ಮಲ್, ಈಗ ಮತ್ತೂಂದು ಆಘಾತಕ್ಕೆ ಒಳಗಾಗಿದ್ದಾರೆ. ಪಾಕಿಸ್ತಾನ್ ಸೂಪರ್ ಲೀಗ್ ಆರಂಭಕ್ಕೂ ಮುನ್ನ ಅವರಿಗೆ ನೀಡಿದ್ದ ಹಣವನ್ನು ವಾಪಸ್ ಮಾಡುವಂತೆ ಪಿಸಿಬಿ ಸೂಚಿಸಿದೆ.
ಅವರು ಖೆಟ್ಟಾ ಗ್ಲಾಡಿಯೇಟರ್ಸ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದರ ಪೈಕಿ, ಈಗಾಗಲೇ ಶೇ. 70ರಷ್ಟು ಹಣ ಪಡೆದುಕೊಂಡಿದ್ದಾರೆ. ಅದನ್ನು ಮರಳಿ ನೀಡುವಂತೆ ಸೂಚಿಸಲಾಗಿದೆ. ಇತ್ತೀಚೆಗೆ ಬುಕಿಯೊಬ್ಬರಿಂದ ಆಮಿಷ ಬಂದರೂ, ಅದನ್ನು ಪಾಕ್ ಕ್ರಿಕೆಟ್ ಮಂಡಳಿಗೆ ತಿಳಿಸದೇ ಉಮರ್ ನಿರ್ಲಕ್ಷ್ಯ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಕೂಡಲೇ ಅವರನ್ನು ಆರಂಭಿಕ ಹಂತದ ವಿಚಾರಣೆ ನಡೆಸಿ, ಪಿಸಿಬಿ ಅಮಾನತು ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.