ಅರ್ಮೇನಿಯಾಕ್ಕೆ ರಾಡಾರ್ ಪೂರೈಕೆ : 288 ಕೋಟಿ ರೂ. ಟೆಂಡರ್ ಗೆದ್ದ ಭಾರತ
Team Udayavani, Mar 2, 2020, 12:49 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಯೂರೋಪ್ನ ರಾಷ್ಟ್ರವಾದ ಅರ್ಮೇನಿಯಾಕ್ಕೆ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚುವ ರೇಡಾರ್ಗಳನ್ನು ತಯಾರಿಸಿ ಕೊಡುವ ಟೆಂಡರ್ ಅನ್ನು ಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ. ಅಂದಾಜು 288 ಕೋಟಿ ರೂ. ಮೌಲ್ಯದ ಈ ಟೆಂಡರನ್ನು ತಮ್ಮದಾಗಿಸಿಕೊಳ್ಳಲು ರಷ್ಯಾ ಹಾಗೂ ಪೋಲೆಂಡ್ ಭಾರೀ ಪೈಪೋಟಿ ನಡೆಸಿದ್ದವು.
ಅಂತಿಮವಾಗಿ, ಇದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದ್ದು, ‘ಮೇಕ್ ಇನ್ ಇಂಡಿಯಾ’ ಅಡಿ ರಕ್ಷಣಾ ಸಲಕರಣೆಗಳ ಉತ್ಪಾದನೆ ಸಂಬಂಧ ಇದೊಂದು ಮಹತ್ವದ ಅಂಶ ಎಂದು ತಜ್ಞರು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಉತ್ಪಾದನೆ
ಅರ್ಮೇನಿಯಾಕ್ಕಾಗಿ ತಯಾರಿಸಲಾಗುವ ರೇಡಾರ್ ವ್ಯವಸ್ಥೆಯುಳ್ಳ ಸಲಕರಣೆಗಳು ಬೆಂಗಳೂರಿನಲ್ಲೇ ಸಿದ್ಧಗೊಳ್ಳಲಿರುವುದು ಮತ್ತೂಂದು ವಿಶೇಷ.
ಉದ್ಯಾನ ನಗರಿಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಪ್ರಯೋಗಾಲಯ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ, ಕೇಂದ್ರ ಸರಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜಂಟಿಯಾಗಿ ಈ ಸಲಕರಣೆಗಳನ್ನು ಉತ್ಪಾದಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ