ಮೊಸಳೆ ಬಾಯೊಳಗೆ ತಲೆ ಹಾಕಿದ ಮಹಿಳೆ
ಹೌದಾ ಮಾರಾಯ್ರೆ!
Team Udayavani, Mar 9, 2020, 1:41 PM IST
ಮಹಿಳೆಯರು ಮಾಡುವ ನಾನಾ ತರಹದ ಸಾಹಸ ಪ್ರದರ್ಶನಗಳು ಆಗಾಗ ಸುದ್ದಿಗೆ ಗ್ರಾಸವಾಗುತ್ತಿರುತ್ತವೆ. ಅಮೆರಿಕದ ಫ್ಲೋರಿಡಾದ ಮಹಿಳೆ ಆಶ್ಲೆ ಲಾರೆನ್ಸ್ (32) ಮೊಸಳೆಯೊಂದಿಗೆ ಕುಸ್ತಿ ಸ್ಪರ್ಧೆಯಲ್ಲಿ ಮೊಸಳೆಯ ಬಾಯಿಯೊಳಗೆ ತಲೆ ಇರಿಸಿ ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬ್ರಿಗ್ಟನ್ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಅವರು ಭಾಗವಹಿಸಿದ್ದರು. 8.5 ಅಡಿ ಉದ್ದದ ಮೊಸಳೆ ಮೇಲೆ 4.11 ಅಡಿ ಉದ್ದದ ಆಶ್ಲೆ ಕೂತು, ಮೊಸಳೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಅದರ ಬಾಯಿಯ ಒಳಗೆ ತಲೆ ಇಟ್ಟು ಅನಂತರ ಹೊರತೆಗೆದಿದ್ದಾರೆ. ಅವರ ಈ ಅಪಾಯಕಾರಿ ಸಾಹಸಕ್ಕೆ ಮೆಚ್ಚುಗೆ ಜತೆ ಟೀಕೆ ಕೂಡಾ ಕೇಳಿಬಂದಿದೆ.