ಕೋವಿಡ್ 19: ಲಾಕ್ ಡೌನ್ ಗೆ ಸಡ್ಡು ಹೊಡೆದು ಪೊಲೀಸರಿಗೆ ಖಡ್ಗ ಝಳಪಿಳಿಸಿದ ದೇವಮಹಿಳೆ!
ಕೆಂಪು ಸೀರೆಯನ್ನು ಉಟ್ಟಿದ್ದ ಸ್ವಯಂ ಘೋಷಿತ ದೇವ ಮಹಿಳೆ ಖಡ್ಗವನ್ನು ಪೊಲೀಸರ ಎದುರು ತಿರುಗಿಸುತ್ತಿರುವ ವೀಡಿಯೋ ಕ್ಲಿಪ್ಪಿಂಗ್ ವೈರಲ್
Team Udayavani, Mar 26, 2020, 9:58 AM IST
ಲಕ್ನೋ: ಕೋವಿಡ್ 19 ವೈರಸ್ ತಡೆಗಟ್ಟಲು ಇಡೀ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದ ನಡುವೆಯೂ ಸ್ವಯಂ ಘೋಷಿತ “ಮಾ ಆದಿ ಶಕ್ತಿ” ದೇವ ಮಹಿಳೆಗೆ ಧಾರ್ಮಿಕ ಪ್ರಾರ್ಥನಾ ಸಭೆಯನ್ನು ಬಂದ್ ಮಾಡುವಂತೆ ಸೂಚಿಸಿದ್ದಕ್ಕೆ ಖಡ್ಗವನ್ನು ಹಿಡಿದು ಪೊಲೀಸರಿಗೆ ಧಮ್ಕಿ ಹಾಕಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಕೆಂಪು ಸೀರೆಯನ್ನು ಉಟ್ಟಿದ್ದ ಸ್ವಯಂ ಘೋಷಿತ ದೇವ ಮಹಿಳೆ ಖಡ್ಗವನ್ನು ಪೊಲೀಸರ ಎದುರು ತಿರುಗಿಸುತ್ತಿರುವ ವೀಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿದೆ. ಹೇಳಿದ ಮಾತನ್ನು ಕೇಳದ ಸ್ವಯಂಘೋಷಿತ ಮಹಿಳೆಯನ್ನು 15ಕ್ಕೂ ಅಧಿಕ ಪೊಲೀಸರು ಸುತ್ತುವರಿದು ಸೆರೆಹಿಡಿದು ವಾಹನದೊಳಕ್ಕೆ ಹಾಕಿಕೊಂಡು ಹೋಗಿರುವುದಾಗಿ ವರದಿ ವಿವರಿಸಿದೆ.
ಧಾರ್ಮಿಕ ಸಭೆಯನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದರೂ ಡೋಂಟ್ ಕೇರ್ ಎಂದು ಖಡ್ಗ ಹಿಡಿದು ಪೋಸ್ ಕೊಟ್ಟ ಸ್ವಯಂಘೋಷಿತ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ ಎಂದು ವರದಿ ತಿಳಿಸಿದೆ.
ಸ್ವಯಂಘೋಷಿತ ಮಹಿಳೆಯ ಆಶ್ರಮದ ಬಳಿ ಸೇರಿದ್ದ ಜನರನ್ನು ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿರುವುದಾಗಿ ವರದಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಮೊದಲ ದಿನದ ಲಾಕ್ ಡೌನ್ ವಿರೋಧಿಸಿ ಮಹಿಳೆ ಧಾರ್ಮಿಕ ಸಭೆಯನ್ನು ಏರ್ಪಡಿಸಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ