ಈ ವರ್ಷ ನಡೆಯಲ್ಲ ಐಪಿಎಲ್: ಮುಂದಿನ ವರ್ಷ ಬೃಹತ್ ಹರಾಜು ಇಲ್ಲ?
Team Udayavani, Mar 31, 2020, 4:38 PM IST
ಮುಂಬೈ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಭಾರತದ ವರ್ಣರಂಜಿತ ಕ್ರೀಡಾಕೂಟ ಐಪಿಎಲ್ ಈಗಾಗಲೇ ಆರಂಭವಾಗಬೇಕಿತ್ತು. ಆದರೆ ಕೋವಿಡ್-19 ಸೋಂಕಿನ ಕಾರಣ ಐಪಿಎಲ್ ಈ ವರ್ಷ ನಡೆಯುವುದು ಬಹುತೇಕ ಅನುಮಾನ.
ಮುಂದಿನ ವರ್ಷದ ಐಪಿಎಲ್ ಗೂ ಮುನ್ನ ಪೂರ್ಣ ಪ್ರಮಾಣದ ಹರಾಜು ನಡೆಸಲು, ಈ ಮುಂಚೆ ನಿರ್ಧರಿಸಲಾಗಿತ್ತು. ಅಂದರೆ ಫ್ರಾಂಚೈಸಿಗಳು ತಮ್ಮ ಆಯ್ಕೆಯ ಕೆಲವೇ ಆಟಗಾರರನ್ನು ಉಳಿಸಿಕೊಂಡು, ಉಳಿದವರನ್ನೆಲ್ಲ ಹರಾಜಿಗೆ ಬಿಡಬೇಕು. ನಂತರ ಫ್ರಾಂಚೈಸಿಗಳು ಹೊಸ ಆಟಗಾರರೊಂದಿಗೆ ಹೊಸರೂಪ ತಳೆಯುತ್ತವೆ.
ಈ ಹಿಂದೆಯೂ ಮೂರು ಬಾರಿ ಈ ರೀತಿಯ ಹರಾಜು ನಡೆದಿತ್ತು. ಅದನ್ನು ಮುಂದಿನ ವರ್ಷಾರಂಭದಲ್ಲಿ ನಡೆಸುವ ಯೋಚನೆಯಿತ್ತು. ಆದರೆ ಸದ್ಯ ಈ ವರ್ಷ ಐಪಿಎಲ್ ನಡೆಯದ ಕಾರಣ ಈಗ ಇರುವ ತಂಡವನ್ನೇ ಉಳಿಸಿಕೊಂಡು ಮುಂದಿನ ವರ್ಷ ಐಪಿಎಲ್ ಆಡುವ ಗುರಿ ಬಿಸಿಸಿಐ ಮುಂದಿದೆ ಎನ್ನಲಾಗಿದೆ.
ಹಾಗಾಗಿ ಪೂರ್ಣ ಪ್ರಮಾಣದ ಹರಾಜು ಈಗ ರದ್ದಾಗಿದೆ. ಹರಾಜು ಮುಂದಿನ ವರ್ಷದ ಕೊನೆಗೆ ಅಥವಾ ಅದರ ಮುಂದಿನ ವರ್ಷ ನಡೆಯುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ