Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ
ಕೋವಿಡ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಚೀನಾ ಸರ್ಕಾರ ಈ ಕಠಿಣ ನಿರ್ಧಾರ ತಳೆದಿತ್ತು ಎಂದು ವರದಿ ಹೇಳಿದೆ.
Team Udayavani, Apr 8, 2020, 3:34 PM IST
ಬೀಜಿಂಗ್:ಇಡೀ ಜಗತ್ತನ್ನೇ ಕಂಗೆಡಿಸಲು ಮೂಲ ಕಾರಣವಾಗಿದ್ದ ಕೋವಿಡ್ 19 ವೈರಸ್ ನ ಕೇಂದ್ರಸ್ಥಾನವಾದ ಚೀನಾದ ವುಹಾನ್
ಪ್ರಾಂತ್ಯದ ಮೇಲೆ ಹೇರಿದ್ದ 2 ತಿಂಗಳ ಕಾಲದ ಲಾಕ್ ಡೌನ್ ಅಂತ್ಯಗೊಂಡಿರುವುದಾಗಿ ಬುಧವಾರ ವರದಿ ತಿಳಿಸಿದೆ. ಆದರೆ ಎರಡನೇ
ಬಾರಿ ಮತ್ತೆ ಕೋವಿಡ್ 19 ವೈರಸ್ ಹರಡುವ ಭಯದಿಂದ ಚೀನಾದ ಉಳಿದೆಡೆ ಲಾಕ್ ಡೌನ್ ಮುಂದುವರಿಸುವ ಮೂಲಕ
ನಾಗರಿಕರಿಗೆ ನಿರ್ಬಂಧ ವಿಧಿಸಿದೆ ಎಂದು ವಿವರಿಸಿದೆ.
ಕೋವಿಡ್ 19 ವೈರಸ್ ಸ್ವರೂಪ ತೀವ್ರ ಸ್ವರೂಪ ತಾಳುತ್ತಿರುವಂತೆಯೇ ಚೀನಾ ಇಡೀ ವುಹಾನ್ ಪ್ರಾಂತ್ಯವನ್ನೇ ಲಾಕ್ ಡೌನ್
ಮಾಡಿತ್ತು. ವುಹಾನ್ ಜನಸಂಖ್ಯೆ 11 ಲಕ್ಷ. ಕೋವಿಡ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಚೀನಾ ಸರ್ಕಾರ ಈ ಕಠಿಣ ನಿರ್ಧಾರ
ತಳೆದಿತ್ತು ಎಂದು ವರದಿ ಹೇಳಿದೆ.
ವುಹಾನ್ ನಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ 19 ಸೋಂಕು ತಗುಲಿತ್ತು. ಮೂರು ಸಾವಿರಕ್ಕೂ ಅಧಿಕ ಜನರು
ಸಾವನ್ನಪ್ಪಿದ್ದರು. ಶೇ.80ರಷ್ಟು ಜನರು ಕೋವಿಡ್ ವೈರಸ್ ಗೆ ಬಲಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾರಣಾಂತಿಕ ವೈರಸ್ ಜಗತ್ತಿನಾದ್ಯಂತ 1.4 ಮಿಲಿಯನ್ ಗಿಂತಲೂ ಅಧಿಕ ಜನರಿಗೆ ಹರಡಿತ್ತು. 82 ಸಾವಿರ ಜನರು
ಸಾವನ್ನಪ್ಪಿದ್ದರು. ಅಲ್ಲದೇ ಲಾಕ್ ಡೌನ್ ನಿಂದಾಗಿ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ