ಒಲಿಂಪಿಕ್ಸ್ ಮುಂದೂಡಿಕೆ: ಹೆಚ್ಚುವರಿ ವೆಚ್ಚ ಜಪಾನ್ ತಲೆಗೆ
Team Udayavani, Apr 14, 2020, 3:54 PM IST
ಟೋಕ್ಯೋ: ಇಲ್ಲಿ ನಡೆಯಬೇಕಿರುವ ಒಲಿಂಪಿಕ್ಸ್ ಕ್ರೀಡಾಕೂಟವು ಕೋವಿಡ್-19 ಕಾರಣದಿಂದಾಗಿ ಸುಮಾರು ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಲಿದೆ ಎಂದು ಅಧ್ಯಕ್ಷ ಥಾಮಸ್ ಬಾಕ್ ತಿಳಿಸಿದ್ದಾರೆ.
ಕೂಟದ ಮುಂದೂಡಿಕೆಯಿಂದ ಹೆಚ್ಚುವರಿ 45 ಸಾವಿರ ಕೋಟಿ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, 2013ರಲ್ಲಿ ಟೋಕ್ಯೋದಲ್ಲಿ ಒಲಿಂಪಿಕ್ಸ್ ಆಯೋಜನೆ ಮಾಡುವ ಅವಕಾಶ ನೀಡುವ ವೇಳೆ ಮಾಡಿಕೊಂಡಿರುವ ಒಪ್ಪಂದದಂತೆ, ಐಒಸಿ ಪಾಲು ಹೊರತಾದ ಎಲ್ಲ ನಷ್ಟವನ್ನೂ ಜಪಾನ್ ಭರಿಸಬೇಕಿದೆ. ಆದರೆ, ಐಒಸಿಗೆ ಎಷ್ಟು ಹೆಚ್ಚುವರಿ ವೆಚ್ಚ ಬರಲಿದೆ ಎನ್ನುವುದನ್ನು ಈಗಲೇ ಹೇಳುವುದು ಅಸಾಧ್ಯ ಎಂದಿದ್ದಾರೆ.
ಕೋವಿಡ್-19 ಕಾರಣದಿಂದ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. 2021ರ ಜುಲೈ 23ರಿಂದ ಆಗಸ್ಟ್ ಎಂಟರವರೆಗೆ ಜಾಗತಿಕ ಮಹಾ ಕ್ರೀಡಾಕೂಟ ನಿಗಧಿಯಾಗಿದೆ.