ಅನವಶ್ಯಕ ತಿರುಗಾಟ: ರಸ್ತೆಗಳು ಬಂದ್
Team Udayavani, Apr 18, 2020, 1:12 PM IST
ಲಿಂಗಸುಗೂರು: ರಸ್ತೆಗಳನ್ನು ಬಂದ್ ಮಾಡಿರುವುದು
ಲಿಂಗಸುಗೂರು: ಲಾಕ್ಡೌನ್ ಜಾರಿಯಾಗಿದ್ದರಿಂದ ಸಾರ್ವಜನಿಕರ ಅನವಶ್ಯಕವಾಗಿ ತಿರುಗಾಟಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಪಟ್ಟಣದ ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ಮೇ 3ರ ವರೆಗೆ ಲಾಕ್ಡೌನ್ ಜಾರಿಯಲ್ಲಿದ್ದರೂ ಸಾರ್ವಜನಿಕರ ತಿರುಗಾಟ ಮಾತ್ರ ಎಂದಿನಂತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಪುರಸಭೆ ಅಧಿಕಾರಿಗಳು ಪಟ್ಟಣದ ಗುರುಗುಂಟಾ ರಸ್ತೆ, ರಾಘವೇಂದ್ರ ಮಠದ ರಸ್ತೆ, ಅಂಚೆ ಕಚೇರಿ ರಸ್ತೆ, ಕರಡಕಲ್ ರಸ್ತೆ ಸೇರಿ ಎಲ್ಲ ಒಳ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಪೂರ್ಣ ಬಂದ್ ಮಾಡಿದ್ದಾರೆ.
ಸಾರ್ವಜನಿಕರ ಹಿತದೃಷ್ಠಿಯಿಂದ ಶನಿವಾರದ ಸಂತೆ ಸಹ ರದ್ದುಗೊಳಿಸಲಾಗಿದೆ. ಆದರೂ ವ್ಯಾಪಾರ-ವಹಿವಾಟುಗಳಿಗಾಗಿ ಸೇರಿ ಜನ ಗುಂಪು ಸೇರಿದ್ದು ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಮುತ್ತಪ್ಪ ತಿಳಿಸಿದ್ದಾರೆ.