ವುಹಾನ್‌: ಒಬ್ಬೊಬ್ಬರದ್ದೂ ಒಂದೊಂದು ಕಥೆ

ನವ ಜೀವನದ ನಿರೀಕ್ಷೆಯಲ್ಲಿ

Team Udayavani, Apr 26, 2020, 5:45 AM IST

ವುಹಾನ್‌: ಒಬ್ಬೊಬ್ಬರದ್ದೂ ಒಂದೊಂದು ಕಥೆ

ಸಾಂದರ್ಭಿಕ ಚಿತ್ರ

ವುಹಾನ್‌: ಈಗಿನ ಕೋವಿಡ್-19 ಉಗಮ ಸ್ಥಾನ ಎಂದೇ ಗುರುತಿಸಲಾದ ಚೀನದ ವುಹಾನ್‌ ನಗರದಲ್ಲಿ ಈಗ ನಿಧಾನವಾಗಿ ಜನಜೀವನ ಆರಂಭವಾಗುತ್ತಿದೆ. ಆದರೂ ಅಲ್ಲಿನ ವ್ಯಾಪಾರಿಗಳ ಸ್ಥಿತಿ ಅಯೋಮಯ.

ವುಹಾನ್‌ನಲ್ಲಿ ಸದ್ಯ ಲಾಕ್‌ಡೌನ್‌ ಹಿಂಪಡೆಯ ಲಾಗಿದ್ದರೂ ಎರಡನೇ ಹಂತದ ಕೋವಿಡ್-19 ಸೋಂಕಿನ ಭೀತಿಯಿಂದ ಜನಸಂಚಾರ ವಿರಳವಾಗಿದೆ. ವ್ಯಾಪಾರ, ಉದ್ಯೋಗ ಕ್ಷೇತ್ರ ತೀವ್ರ ಸಂಕಷ್ಟದಲ್ಲಿದೆ. ಅಲ್ಲಿನ ಪ್ರತಿಯೋರ್ವನದ್ದೂ ಒಂದೊಂದು ಕಥೆ.

ವಾಂಗ್‌ ಎಂಬವರು ವುಹಾನ್‌ನ ಖ್ಯಾತ ಹೊಟೇಲ್‌ ಉದ್ಯಮಿ. ಮೂರು ತಿಂಗಳ ಹಿಂದೆ ತನ್ನ ರೆಸ್ಟೋರೆಂಟ್‌ನ ಸಿಬಂದಿಗೆ ಚೀನದ ಹೊಸ ವರ್ಷ ಹಾಗೂ ತನ್ನ ಉದ್ಯಮ ಮೂರನೇ ವರ್ಷದ ಹಿನ್ನೆಲೆಯಲ್ಲಿ ಭರ್ಜರಿ ಬೋನಸ್‌ ನೀಡಿ ಸಂಭ್ರಮಿಸಿದ್ದರು. ಈಗ ಅವರ ಕಥೆಯೇ ಬೇರೆ.

ಕೋವಿಡ್-19 ಹಿನ್ನೆಲೆಯಲ್ಲಿ ಈ ನಗರ ಸುಮಾರು 76 ದಿನಗಳ ಲಾಕ್‌ಡೌನ್‌ನಲ್ಲಿದ್ದು ಈಗ ನಿಧಾನ ವಾಗಿ ಜೀವಕಳೆ ತುಂಬಿಸಿ ಕೊಳ್ಳು ತ್ತಿದೆ. ಆದರೆ ವ್ಯಾಪಾರಿಗಳು ಮಾನಸಿಕ ವಾಗಿ, ಆರ್ಥಿಕವಾಗಿ ತುಂಬಾ ಕುಗ್ಗಿ ಹೋಗಿದ್ದಾರೆ. ಅವರಲ್ಲಿ ಯಾವ ಲವಲವಿಕೆಯೂ ಕಂಡು ಬರುತ್ತಿಲ್ಲ.

ಎಪ್ರಿಲ್‌ 8ರಿಂದ ವುಹಾನ್‌ನಲ್ಲಿ ಲಾಕ್‌ಡೌನ್‌ ಹಿಂಪಡೆಯಲಾಗಿದೆ. ಆದರೆ ಎರಡು ವಾರ ಕಳೆದ ಬಳಿಕವೂ ವ್ಯಾಪಾರ ಸಂಸ್ಥೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಸರಕಾರ ಅನುಮತಿ ನೀಡಿಲ್ಲ. ಮೂರು ತಿಂಗಳಿನಿಂದ ವ್ಯಾಪಾರವಿಲ್ಲದ ಕಾರಣ ತಾನು ಸುಮಾರು 8,500 ಡಾಲರ್‌ (60,000 ಯಾನ್‌) ಬಾಡಿಗೆ ನೀಡಲು ಬಾಕಿಯಿದೆ. ಈಗ ಎರಡನೇ ಹಂತದ ಕೋವಿಡ್-19 ಸೋಂಕಿನ ಭೀತಿಯಿಂದ ಆರ್ಥಿಕ ಸಂಕಷ್ಟ ಹೆಚ್ಚಾಗಿದ್ದು, ಅಂಗಡಿಗಳನ್ನು ಮುಚ್ಚದೆ ಬೇರೆ ದಾರಿಯಿಲ್ಲ ಎಂದು ವಾಂಗ್‌ ಹೇಳುತ್ತಾರೆ.

ವಾಂಗ್‌ ಈಗ ಬೇರೆ ಉದ್ಯೋಗದ ಹುಡುಕಾಟ ದಲ್ಲಿದ್ದಾರೆ. ಆದರೆ ವುಹಾನ್‌ನಲ್ಲೆಲ್ಲೂ ಈಗ ಉದ್ಯೋಗವೇ ಸಿಗುತ್ತಿಲ್ಲವಂತೆ! ಅತ್ತ ವ್ಯಾಪಾರವೂ ಇಲ್ಲ, ಇತ್ತ ಉದ್ಯೋಗವೂ ಇಲ್ಲ. ಜೀವನ ನಡೆಸೋದು ಹೇಗೆ ಎಂಬ ದೊಡ್ಡ ಪ್ರಶ್ನೆಗೆ ಉತ್ತರವಿಲ್ಲದ ಉತ್ತರ ಹುಡುಕುತ್ತಿರುವವರೇ ಹೆಚ್ಚು.

ಇದು ಕೇವಲ ವಾಂಗ್‌ ಒಬ್ಬರ ಕಥೆಯಲ್ಲ. ಅಲ್ಲಿನ ಪ್ರತಿಯೋರ್ವ ವ್ಯಾಪಾರಿಯದ್ದೂ ಇದೇ ಕಥೆ. ವುಹಾನ್‌ ರಾಜಧಾನಿ ಹುಬೇ ಪ್ರಾಂತ್ಯದ ಈ ವರ್ಷದ ತ್ತೈಮಾಸಿಕ ಆರ್ಥಿಕತೆಯಲ್ಲಿ ಶೇ. 40ರಷ್ಟು ಇಳಿಕೆ ಯಾಗಿದೆ ಎಂದು ಸರಕಾರಿ ಏಜೆನ್ಸಿಗಳೇ ಹೇಳುತ್ತಿವೆ.

ಲಾಕ್‌ಡೌನ್‌, ಆರ್ಥಿಕ ನಷ್ಟ ಹಾಗೂ ಗೆಳೆಯರು, ಸಂಬಂಧಿಕರ ಸಾವಿ ನಿಂದ ಜರ್ಝರಿತರಾಗಿರುವ ಜನರು ಜೀವನೋತ್ಸಾಹವನ್ನು ಕಳೆದು ಕೊಂಡಿದ್ದಾರೆ. ತನ್ನ ಮೂವರು ಸಂಬಂಧಿ ಕರಿಗೆ ಕೋವಿಡ್-19 ಸೋಂಕಾಗಿದ್ದು, ಈ ಪೈಕಿ ಓರ್ವ ಸಾವಿಗೀಡಾಗಿದ್ದಾನೆ. ಆತನ ಅಂತ್ಯಕ್ರಿಯೆಯ ಅವಕಾಶವೂ ಸಿಕ್ಕಿಲ್ಲ ಎಂದು ವಾಂಗ್‌ ಹೇಳುತ್ತಾರೆ.

ಪ್ರಮುಖ ನಗರ
ಚೀನದ ಒಂದು ಪ್ರಮುಖ ಕೈಗಾರಿಕಾ ಮತ್ತು ಸಾರಿಗೆ ಹಬ್‌ ಆಗಿರುವ 11 ಮಿಲಿಯನ್‌ ಜನಸಂಖ್ಯೆ ಹೊಂದಿರುವ ವುಹಾನ್‌ ನಗರವು ಯಾಂಗೆl ನದಿ ತೀರದಲ್ಲಿದೆ. ಇಲ್ಲಿ ಜನವರಿ 23ರಿಂದ ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಎಲ್ಲ ವ್ಯವಹಾರಗಳೂ ಸ್ತಬ್ಧವಾಗಿವೆ. ಹುಬೇ ಪ್ರಾಂತ್ಯದಲ್ಲಿ ಕೊರೊನಾದಿಂದ 4,512 ಸಾವು ಸಂಭವಿಸಿದೆ.

ಲಾಕ್‌ಡೌನ್‌ ಹಿಂಪಡೆದ ಬಳಿಕ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಆದರೆ ವ್ಯಾಪಾರ ಸಂಸ್ಥೆಗಳಿಗೆ ಕೆಲವು ನಿರ್ಬಂಧ ವಿಧಿಸಿರುವುದರಿಂದ ಹಿಂದಿನಂತೆ ವ್ಯಾಪಾರವಾಗುತ್ತಿಲ್ಲ. ಹೆಸರು ಬಹಿರಂಗ ಮಾಡಲಿಚ್ಛಿಸದ ವ್ಯಕ್ತಿಯೋರ್ವ ಎಲೆಕ್ಟ್ರಾನಿಕ್ಸ್‌ ಹಾಗೂ ಯಂತ್ರೋಪಕರಣಗಳ ವ್ಯಾಪಾರ ಮಾಡುತ್ತಿದ್ದು, ಆತನ ಸಂಸ್ಥೆಯ ಪರಿಸರವನ್ನು ವಾಹನ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿರುವ ಕಾರಣ ಸರಿಯಾಗಿ ವ್ಯಾಪಾರವೇ ಆಗುತ್ತಿಲ್ಲ. ತಾನು ವಾರ್ಷಿಕ 24,000 ಡಾಲರ್‌ (1,70,000 ಯಾನ್‌) ಬಾಡಿಗೆ ನೀಡುತ್ತಿದ್ದೇನೆ. ಈ ರೀತಿ ಸಂಕಷ್ಟದಲ್ಲಿರುವ ಎಲ್ಲರಲ್ಲೂ ಆಕ್ರೋಶವಿದೆ. ಆದರೆ ಏನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳುತ್ತಿದ್ದಾನೆ. ನಾವು ಎಷ್ಟೆಲ್ಲ ಕಷ್ಟದಲ್ಲಿದ್ದರೂ ಸರಕಾರದ ಕಡೆಯಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.