ನೀರೂ ಕುಡಿಯುವಂತಿಲ್ಲ; ಶೌಚಕ್ಕೂ ಹೋಗುವಂತಿಲ್ಲ… ; ಕೋವಿಡ್ ವಾರಿಯರ್‌ಗಳ ಸಂಕಷ್ಟ

Team Udayavani, Apr 30, 2020, 6:06 AM IST

ನೀರೂ ಕುಡಿಯುವಂತಿಲ್ಲ; ಶೌಚಕ್ಕೂ ಹೋಗುವಂತಿಲ್ಲ… ; ಕೋವಿಡ್ ವಾರಿಯರ್‌ಗಳ ಸಂಕಷ್ಟ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಂಗಳೂರು: ‘ತಲೆಯಿಂದ ಪಾದದವರೆಗೆ ಮುಚ್ಚುವ ಸುರಕ್ಷಾ ಕಿಟ್‌ ಧರಿಸಿ ಕೆಲಸ… ಮಧ್ಯೆ ಶೌಚಾಲಯಕ್ಕೂ ಹೋಗುವಂತಿಲ್ಲ, ನೀರೂ ಕುಡಿಯುವಂತಿಲ್ಲ.

ಬೆವರಿನಲ್ಲಿ ತೊಯ್ದುಕೊಂಡೇ ಕೆಲಸ ಮಾಡುತ್ತೇವೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ರೋಗಿಗಳ ಸೇವೆಯಲ್ಲಿ ಧನ್ಯತಾ ಭಾವವಿದೆ’

ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಕೋವಿಡ್ 19 ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನರ್ಸ್‌ಗಳಲ್ಲೊಬ್ಬರಾದ ಮೂಲತಃ ಬಂಟ್ವಾಳದ ಅನಂತಾಡಿಯ ಪ್ರಸ್ತುತ ಕಾಪುವಿನಲ್ಲಿ ವಾಸವಾಗಿರುವ ಶಕಿಲಾ ಅವರನ್ನು ಸಂಪರ್ಕಿಸಿದ ‘ಉದಯವಾಣಿ’ಯೊಂದಿಗೆ ತಮ್ಮ ಕೆಲಸದ ಬಗ್ಗೆ ಅವರು ಹೇಳಿಕೊಂಡದ್ದು ಹೀಗೆ.

ಸುರಕ್ಷಾ ಕಿಟ್‌ನಲ್ಲಿ
ಆರೋಗ್ಯ ಇಲಾಖೆ ನಮಗೆ ಎಲ್ಲ ರೀತಿಯ ಸುರಕ್ಷಾ ಕಿಟ್‌ಗಳನ್ನು ಒದಗಿಸಿದೆ. ತಲೆಯಿಂದ ಪಾದದವರೆಗೂ ಮುಚ್ಚುವ ದಿರಿಸುಗಳು ಅದರಲ್ಲಿವೆ. ಲೆಗ್ಗಿಂಗ್ಸ್‌, ಇಡೀ ದೇಹ ಮುಚ್ಚುವ ಗೌನ್‌, ಅದರ ಮೇಲೆ ಪ್ಲಾಸ್ಟಿಕ್‌ ಕವರ್‌ ಮಾದರಿಯ ಇನ್ನೊಂದು ದಿರಿಸು, ಗಾಗಲ್ಸ್‌, ಮಾಸ್ಕ್, ಗ್ಲೌಸ್‌ ಸೇರಿದಂತೆ ಐದಾರು ದಿರಿಸುಗಳನ್ನು ಧರಿಸಿಯೇ ದಿನನಿತ್ಯವೂ ಚಿಕಿತ್ಸೆಗೆ ತೆರಳಬೇಕು ಎನ್ನುತ್ತಾರೆ.

ಇಡೀ ದೇಹ ಮುಚ್ಚುವ ದಿರಿಸು ಧರಿಸಿದ ಮೇಲೆ ಶೌಚಾಲಯಕ್ಕೆ ಹೋಗುವುದಕ್ಕೆ ಆಗುವುದಿಲ್ಲ. ಬೇಸಗೆ ಬಿಸಿಯಲ್ಲಿ ಬಾಯಾರಿದರೂ ಅದನ್ನು ತಡೆದುಕೊಳ್ಳುತ್ತೇವೆ. ಸೆಕೆಯನ್ನು ತಡೆದುಕೊಳ್ಳಲಾಗದಿದ್ದರೂ ಕೆಲಸವನ್ನು ಹಂಚಿಕೊಂಡು ನಿರ್ವಹಿಸುತ್ತೇವೆ ಎನ್ನುತ್ತಾರೆ ಶಕಿಲಾ.

ಫೋನ್‌ನಲ್ಲಿ ವಿಚಾರಣೆ
ಇತರ ರೋಗಿಗಳಂತೆ ಆಗಾಗ್ಗೆ ಹೋಗಿ ಕೋವಿಡ್ ರೋಗಿಗಳನ್ನು ವಿಚಾರಿಸುವುದಕ್ಕೆ ಆಗುವುದಿಲ್ಲ. ಕೌಂಟರ್‌ನಲ್ಲಿರುವ ದೂರವಾಣಿ ಸಂಖ್ಯೆಯನ್ನು ಪ್ರತಿ ರೋಗಿಗೂ ನೀಡಲಾಗುತ್ತದೆ. ಅವರಿಗೆ ಆಹಾರ, ಬಾಯಾರಿಕೆ ಅಗತ್ಯವಿದ್ದಲ್ಲಿ ಅವರೇ ಕರೆ ಮಾಡುತ್ತಾರೆ. ಸಿಬಂದಿಯೂ ಆಗಾಗ ಯೋಗಕ್ಷೇಮ ವಿಚಾರಿಸುತ್ತಾರೆ.

ಆಸ್ಪತ್ರೆಯಲ್ಲೂ ಸ್ನಾನ; ಮನೆಯಲ್ಲೂ ಸ್ನಾನ
ಕೆಲಸ ಮುಗಿದ ತತ್‌ಕ್ಷಣ ಆಸ್ಪತ್ರೆಯಲ್ಲೇ ಸ್ನಾನ ಮಾಡುತ್ತೇವೆ. ಸಮವಸ್ತ್ರವನ್ನು ಹೈಪೋಕ್ಲೋರೈಡ್‌ಗೆ ಹಾಕಿ ರೋಗಾಣು ಮುಕ್ತಗೊಳಿಸಿ ಮನೆಗೆ ಹೋಗುತ್ತೇವೆ. ನೇರ ಬಚ್ಚಲು ಮನೆಗೆ ಹೋಗಿ ಮತ್ತೆ ಸ್ನಾನ ಮಾಡಿ ಬಟ್ಟೆಯನ್ನೆಲ್ಲ ಬಿಸಿನೀರಿನಲ್ಲಿ ತೊಳೆದ ಬಳಿಕವಷ್ಟೇ ಮನೆಯೊಳಗಡೆ ಹೋಗುತ್ತೇವೆ. ನಮ್ಮ ಮನೆಯಲ್ಲಿ ಪತಿ ಮತ್ತು ಮಗಳು ಇದ್ದಾರೆ. ಅವರೊಂದಿಗೆ ಸಾಮಾಜಿಕ ಅಂತರದಲ್ಲೇ ಇರುತ್ತೇನೆ ಎಂದು ತಮ್ಮ ಇತ್ತೀಚಿನ ದಿನಚರಿ ಬಗ್ಗೆ ಶಕಿಲಾ ವಿವರಿಸುತ್ತಾರೆ.

ಟಾಪ್ ನ್ಯೂಸ್

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

jairam ramesh

PM ಮೋದಿ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ: ಕಾಂಗ್ರೆಸ್

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

15

ʼIndian 2ʼ ರಿಲೀಸ್ ಮುಂದೂಡಿಕೆ ಬೆನ್ನಲ್ಲೇ ಧನುಷ್‌ ʼರಾಯನ್‌ʼ ಬಿಡುಗಡೆಗೆ ಪ್ಲ್ಯಾನ್

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

jairam ramesh

PM ಮೋದಿ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ: ಕಾಂಗ್ರೆಸ್

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.