ಶ್ರೀಲಂಕಾದಲ್ಲಿ ಸೋಂಕಿತರ ಪೈಕಿ ನಾವಿಕರೇ ಹೆಚ್ಚು
Team Udayavani, May 6, 2020, 2:45 PM IST
ಕೊಲಂಬೊ: ಶ್ರೀಲಂಕಾದಲ್ಲಿ ಈ ವರೆಗೆ ಒಟ್ಟು 752 ಜನರಿಗೆ ಕೋವಿಡ್ ವೈರಸ್ ಸೋಂಕು ತಗುಲಿದೆ. ಆಘಾತಕಾರಿ ಅಂಶ ಎಂದರೆ ನೌಕಾಪಡೆಯ ಸಿಬಂದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಒಟ್ಟು 752 ಪ್ರಕರಣಗಳ ಪೈಕಿ 327 ಮಂದಿ ನೌಕಾಪಡೆ ಸಿಬಂದಿಯಾಗಿದ್ದಾರೆ. ಸೋಮವಾರ 33 ಹೊಸ ಕೋವಿಡ್ ಪ್ರಕರಣ ದೃಢಪಟ್ಟಿದ್ದು, ಅವರಲ್ಲಿ 31 ಮಂದಿ ವೆಲಿಸರಾ ಶಿಬಿರದಲ್ಲಿರುವ ಲಂಕಾದ ನಾವಿಕರಾಗಿದ್ದಾರೆ.
ಉಳಿದ ಇಬ್ಬರು ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದವರಾಗಿದ್ದಾರೆ. ರಾಜಧಾನಿ ಕೊಲಂಬೊ ಬಳಿ ಇರುವ ವೆಲಿಸರಾ ಶಿಬಿರದಲ್ಲಿರುವ ಅಧಿಕಾರಿಗಳು ಕೋವಿಡ್ ಸೋಂಕಿತ ಮಾದಕ ವ್ಯಸನಿಗಳ ಜತೆ ಸಂಪರ್ಕ ಹೊಂದಿದ್ದರು ಎಂಬ ಶಂಕೆ ಇದೆ.
ಬಳಿಕ ಅವರು ಅಲ್ಲಿಂದ ರಜೆಯಲ್ಲಿ ಮನೆಗೆ ತೆರಳಿದ್ದರು. ಇದು ಸೋಂಕು ಹರಡಲು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. 752 ಜನರಿಗೆ ಸೋಂಕು ತಗುಲಿದ್ದು, ಅವರಲ್ಲಿ 194 ಜನ ಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ