ಕಾಡುಕೋಣ ಸಾವು: ತನಿಖೆಗೆ ಆಗ್ರಹ

ನಿಡಿಗಲ್‌ ಸಮೀಪದ ರಕ್ಷಿತಾರಣ್ಯದಲ್ಲಿ ಅಂತ್ಯಸಂಸ್ಕಾರ

Team Udayavani, May 7, 2020, 5:36 AM IST

ಕಾಡುಕೋಣ ಸಾವು: ತನಿಖೆಗೆ ಆಗ್ರಹ

ಸಾಂದರ್ಭಿಕ ಚಿತ್ರ.

ಬೆಳ್ತಂಗಡಿ/ಮಂಗಳೂರು: ಮಂಗಳೂರು ನಗರಕ್ಕೆ ಮಂಗಳವಾರ ಬಂದ ಕಾಡುಕೋಣವನ್ನು ಸೆರೆಹಿಡಿದ ಕ್ರಮ ಅವೈಜ್ಞಾನಿಕ ವಾಗಿದ್ದ ಕಾರಣ ಅದು ಸಾವನ್ನಪ್ಪಿದ್ದು, ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಜೆರಾರ್‌x ಟವರ್‌ ಅವರು ಬುಧವಾರ ಬರ್ಕೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕಾಡುಕೋಣ ಸಾವನ್ನಪ್ಪುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ಭರಿತ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
“ಮೊದಲು ಆ ಕಾಡುಕೋಣ ನಗರಕ್ಕೆ ಹೇಗೆ ಬಂತು ಎಂಬ ಪ್ರಶ್ನೆ ಮೂಡುತ್ತದೆ. ದಾರಿ ತಪ್ಪಿ ಬಂದಿದ್ದರೆ ಅದರ ಜೀವಕ್ಕೆ ಅಪಾಯವಾಗದಂತೆ ಹಿಡಿದು ಕಾಡಿಗೆ ಬಿಡುವುದಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿತ್ತು’ ಎಂದು ಪರಿಸರವಾದಿ ದಿನೇಶ್‌ ಹೊಳ್ಳ ಪ್ರತಿಕ್ರಿಯಿಸಿದ್ದಾರೆ.

ಚಾರ್ಮಾಡಿಯಲ್ಲಿ ಸಾವು
ನಗರದಲ್ಲಿ ಓಡಾಡಿ ಸುಸ್ತಾಗಿದ್ದ ಕಾಡು ಕೋಣ ವನ್ನು ಪೂರ್ವಾಹ್ನ 11 ಗಂಟೆ ವೇಳೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಸೆರೆಹಿಡಿದು ಲಾರಿಯಲ್ಲಿ ಚಾರ್ಮಾಡಿಯ ಅರಣ್ಯಕ್ಕೆ ಕೊಂಡೊಯ್ಯಲಾಗಿತ್ತು. ಎರಡೂವರೆ ಗಂಟೆ ಬಳಿಕ ಬಿ.ಸಿ. ರೋಡ್‌ಗೆ ತಲುಪುವಾಗ ಕೋಣಕ್ಕೆ ಪ್ರಜ್ಞೆ ಬಂದಿತ್ತು. ಚಾರ್ಮಾಡಿ ತಲುಪಿದ ಬಳಿಕವೂ 2 ತಾಸು ಕಾಲ ಪ್ರಜ್ಞೆಯಿತ್ತು.

ಬಳಿಕ ಅದು ಯಾವುದೇ ರೀತಿಯ ಚಲನೆ ತೋರದ ಕಾರಣ ಸಂಶಯದಿಂದ ಚಾರ್ಮಾಡಿ ಯಲ್ಲಿ ರುವ ಸರಕಾರಿ ಪಶು ವೈದ್ಯರನ್ನು ಸ್ಥಳಕ್ಕೆ ಕರೆಯಿಸಿ ಪರೀಕ್ಷಿಸಿದ್ದು, ಅವರು ಸಾವನ್ನು ದೃಢಪಡಿಸಿದರು. ಬಳಿಕ ನಿಡಿಗಲ್‌ ಸಮೀಪದ ನರ್ಸರಿಯಲ್ಲಿ ಅರಣ್ಯ ಇಲಾಖೆ ಮಾರ್ಗಸೂಚಿಯಂತೆ ಕಾಡುಕೋಣವನ್ನು ದಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.ಕೋಣ ವಿಪರೀತ ಬಳಲಿತ್ತು. ಅರಣ್ಯಕ್ಕೆ ಬಿಡುವ ಮುನ್ನ 4 ಟಬ್‌ ನೀರು ಸುರಿದ ಬಳಿಕ ಚೇತರಿಸಿಕೊಂಡಂತೆ ಕಂಡಿತ್ತು. ಎರಡು ಬಾರಿ ಎದ್ದು ನಿಂತಿತ್ತಾದರು ಮೂರನೇ ಬಾರಿಗೆ ಕುಸಿದು ಬಿದ್ದು ಸಾವನ್ನಪ್ಪಿದೆ ಎಂದು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಬಿ. ಸುಬ್ಬಯ್ಯ ನಾಯ್ಕ ತಿಳಿಸಿದ್ದಾರೆ.

ಅಂತ್ಯಸಂಸ್ಕಾರ ವೇಳೆ ವಲಯಾರಣ್ಯಾಧಿಕಾರಿಗಳಾದ ಬಿ. ಸುಬ್ಬಯ್ಯ ನಾಯ್ಕ,ಶ್ರೀಧರ್‌,ಸಿಬಂದಿ ಉಪಸ್ಥಿತರಿದ್ದರು.

ಹೈಡೋಸೇಜ್‌ನಿಂದ ಸಾವನ್ನಪ್ಪಿಲ್ಲ
ಅರಿವಳಿಕೆ ಪ್ರಮಾಣ ಹೆಚ್ಚಳದಿಂದ ಮೃತ ಪಟ್ಟಿದೆ ಎಂಬುದು ವದಂತಿಯಷ್ಟೆ. ಮನುಷ್ಯರ ಸಂಪರ್ಕದಿಂದ ದೂರ ಇರುವ ಕಾಡುಪ್ರಾಣಿಗಳು ಒಮ್ಮಿಂದೊಮ್ಮೆಲೆ ಜನನಿಬಿಡ ಪ್ರದೇಶಕ್ಕೆ ಕಾಲಿಟ್ಟರೆ ಭಯಗೊಂಡು ಹೃದಯ ಬಡಿತ ಹೆಚ್ಚಾಗುತ್ತದೆ. ಜಿಂಕೆಯಂಥ ಜೀವಿಗಳು ಮನುಷ್ಯ ಮುಟ್ಟಿದ ಕ್ಷಣ ದಲ್ಲೇ ಸಾವನ್ನಪ್ಪುತ್ತವೆ. ಕಾಡುಕೋಣ ಆರೋಗ್ಯ ವಾಗಿದ್ದರೂ ಬಳಲಿಕೆ ಮತ್ತು ಭಯ ದಿಂದ ಹೃದಯಾ ಘಾತ ವಾಗಿದೆ ಎಂದು ಮರಣೋ ತ್ತರ ಪರೀಕ್ಷೆ ನಡೆಸಿದ ಚಾರ್ಮಾಡಿಯ ಸರಕಾರಿ ಪಶು ವೈದ್ಯಾಧಿಕಾರಿ ಮಂಜ ನಾಯ್ಕ ಮತ್ತು ಅರಿವಳಿಕೆ ನೀಡಿದ್ದ ಪಿಲಿಕುಳದ ಜೈವಿಕ ಉದ್ಯಾನವನದ ಪಶು ಅಧಿಕಾರಿ ಡಾ| ವಿಷ್ಣು ತಿಳಿಸಿದ್ದಾರೆ.

ಅರಿವಳಿಕೆ ಔಷಧ ಅಧಿಕವಾಗಿ ಸಾವ ನ್ನಪ್ಪಿದೆ ಎಂಬುದು ಆರೋಪ ವಷ್ಟೆ. ಶಿಷ್ಟಾಚಾರ ದಂತೆ ಮರಣೋ ತ್ತರ ಪರೀಕ್ಷೆ, ಅಂತ್ಯ ಸಂಸ್ಕಾರ ಎಲ್ಲವೂ ನಡೆದಿವೆ. ಎಲ್ಲ ಪ್ರಕ್ರಿಯೆ ಗಳ ವೀಡಿಯೋ, ಫೋಟೋ ಗಳು ಇಲಾಖೆ ಯಲ್ಲಿವೆ. ಮರಣೋತ್ತರ ಪರೀಕ್ಷೆಯ ವರದಿ ಶುಕ್ರವಾರ ಕೈಸೇರಲಿದೆ.
– ಕರಿಕಾಳನ್‌,
ದ.ಕ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ

ಟಾಪ್ ನ್ಯೂಸ್

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.