ವುಹಾನ್ನಲ್ಲಿ ಲಕ್ಷಾಂತರ ಜನರಿಗೆ ಮತ್ತೆ ಸೋಂಕು ಪರೀಕ್ಷೆ
Team Udayavani, May 13, 2020, 10:50 AM IST
ವುಹಾನ್ : ಕಳೆದ 35 ದಿನಗಳಿಂದ ಯಾವುದೇ ಹೊಸ ಸೋಂಕು ಪ್ರಕರಣ ದಾಖಲಾದ ಕಾರಣ ನಿಶ್ಚಿಂತೆಯಿಂದ ಇದ್ದ ಚೀನದ ವುಹಾನ್ನಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದ್ದು, ವಾರಂತ್ಯದಲ್ಲಿ 6 ಹೊಸ ಪ್ರಕರಣಗಳು ದಾಖಲಾಗಿವೆ. ಅಚ್ಚರಿ ಎಂದರೆ ಸದ್ಯ ಪತ್ತೆಯಾಗಿರುವ ಅಷ್ಟು ಸೋಂಕು ಪ್ರಕರಣಗಳು ದೇಶಿಯ ಮೂಲದೇ ಆಗಿವೆ.
ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಮತ್ತೆ ಸೋಂಕು ಹರಡುವ ಭೀತಿ ಶುರುವಾಗಿದ್ದು, ಸ್ಥಳೀಯ ಅಧಿಕಾರಿಗಳು ಮುಂಬರುವ ಹತ್ತು ದಿನಗಳ ಕಾಲ ನಗರಾದ್ಯಂತ ನ್ಯೂಕ್ಲಿಕ್ ಆ್ಯಸಿಡ್ ಪರೀಕ್ಷೆಯನ್ನು ನಡೆಸಲು ಯೋಜನೆ ರೂಪಿಸಿದ್ದಾರೆ. ನಿತ್ಯ ಸುಮಾರು 11 ಲಕ್ಷಕ್ಕೂ ಹೆಚ್ಚು ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು.