ಕಸ್ತೂರ್ಬಾ ನಗರ ವಾರ್ಡ್‌ನಲ್ಲಿ ಬೆಟ್ಟದಷ್ಟು ಸಮಸ್ಯೆ

ಮಳೆಗಾಲ ಬಂತೆಂದರೆ ಕೃತಕ ನೆರೆ ಭೀತಿ ; ಕಾಡುವ ಮೂಲ ಸೌಕರ್ಯಗಳ ಕೊರತೆ

Team Udayavani, Jun 6, 2020, 8:05 AM IST

ಕಸ್ತೂರ್ಬಾನಗರ ವಾರ್ಡ್‌ನಲ್ಲಿ ಬೆಟ್ಟದಷ್ಟು ಸಮಸ್ಯೆ

ಕಸ್ತೂರ್ಬಾ ನಗರ ವಾರ್ಡ್‌ನಲ್ಲಿ ಹಾದು ಹೋದ ಕಿರಿದಾದ ರಸ್ತೆ ಬದಿ ಅಪಾಯಕಾರಿ ಮರ.

ಉಡುಪಿ: ಮುಂಗಾರು ಮೆಲ್ಲನೆ ಕಾಲಿಟ್ಟಿದೆ. ಕೆಲವೇ ದಿನಗಳಲ್ಲಿ ಬಿರುಸು ಪಡೆದುಕೊಳ್ಳುವ ಮುನ್ಸೂಚನೆ ನೀಡಿದೆ. ಮಳೆಗಾಲ ಎದುರಿಸಲು ಕಸ್ತೂರ್ಬಾ ನಗರ ವಾರ್ಡ್‌ ಸಕಲ ರೀತಿಯಲ್ಲಿ ಸಜ್ಜಾಗಬೇಕಿದೆ. ವಾರ್ಡ್‌ ನಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅದರಲ್ಲೂ ನೆರೆ ಭೀತಿ ಇಲ್ಲಿನ ಹಲವು ಕುಟುಂಬಗಳನ್ನು ಕಾಡುತ್ತಿದೆ.

ಕಸ್ತೂರ್ಬಾ ನಗರ ವಾರ್ಡ್‌ನಲ್ಲಿ ಚರಂಡಿ ಹೂಳೆತ್ತುವ ಕಾರ್ಯ ನಡೆದಿಲ್ಲ. ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಿಲ್ಲ. ಕುದ್ಮಾರು ಶಾಲೆಗೆ ತೆರಳುವ ರಸ್ತೆಯುದ್ದಕ್ಕೂ ಬದಿಗಳಲ್ಲಿ ಮರಗಳಿದ್ದು, ಅವುಗಳ ಬುಡ ಸವೆದು ಉರುಳಿ ಬೀಳಲು ಸಿದ್ಧವಾಗಿವೆ. ಬಿಸಿಎಂ ಕಾಲನಿ ರಸ್ತೆಯಲ್ಲಿ ಬ್ರಹತ್‌ ಗಾತ್ರದ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದೆ. ಮರ ಮಗುಚಿ ಬಿದ್ದಲ್ಲಿ ಈ ಭಾಗದಲ್ಲಿ ಹಾದುಹೋದ ಹಲವು ವಿದ್ಯುತ್‌ ಕಂಬಗಳಿಗೆ ಹಾನಿ ಉಂಟು ಮಾಡಲಿದೆ. ಈ ರಸ್ತೆಯಲ್ಲಿ ನಿತ್ಯ ಹಲವರು ಓಡಾಡುತ್ತಿದ್ದು, ಭೀತಿ ಆವರಿಸಿದೆ.

ಕಾರ್ಮಿಕ ಕುಟುಂಬಗಳೇ ಹೆಚ್ಚು
ಡಿಸಿಎಂ ಕಾಲನಿ ಸನಿಹದಲ್ಲಿ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಆದರೆ ರಸ್ತೆ ಬದಿಯ ಮಣ್ಣನ್ನು ಇನ್ನೂ ತೆರವುಗೊಳಿಸಿಲ್ಲ. ರಸ್ತೆ ಬದಿಗಳ ಸ್ಲಾಬ್‌ಗಳು ಬಿರುಕು ಬಿಟ್ಟಿವೆ. ಪಾದಚಾರಿಗಳು, ವಾಹನಗಳು ಅಪಾಯಕ್ಕೆ ಸಿಲುಕಿದ ಉದಾ ಹರಣೆಗಳಿವೆ. ವಾರ್ಡ್‌ನಲ್ಲಿ ಕಾರ್ಮಿಕ ಕಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಟ್ರೀ ಕಟ್ಟಿಂಗ್‌ ನಡೆದಿಲ್ಲ
ವಾರ್ಡ್‌ ವ್ಯಾಪ್ತಿಯಲ್ಲಿ ಅಳವಡಿಸಿರುವ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಸಣ್ಣ ಗಾಳಿ ಮಳೆ ಬಂದರೂ ವಿದ್ಯುತ್‌ ವ್ಯತ್ಯಯವಾಗುತ್ತದೆ. ಮೆಸ್ಕಾಂ ರಸ್ತೆಯ ಇಕ್ಕೆಲಗಳಲ್ಲಿ “ಟ್ರೀ’ ಕಟ್ಟಿಂಗ್‌ ಇನ್ನೂ ನಡೆಸಿಲ್ಲ. ಬುಡ್ನಾರು ಶಾಲೆ ಬಳಿ ಮರಗ‌ಳಿರುವ ಕೆಳಭಾಗದಲ್ಲಿ ವಿದ್ಯುತ್‌ ತಂತಿಗಳು ಹಾದು ಹೋಗಿದ್ದು, ಮರಗಳು ಬಾಗಿ ಅದರ ಮೇಲೆ ಬೀಳುವ ಹಂತಕ್ಕೆ ತಲುಪಿವೆ.

ಎಲ್ಲರಿಗೂ ಸೂರು ಸಿಕ್ಕಿಲ್ಲ
ವಾರ್ಡ್‌ನ ವಿವಿಧ ಭಾಗಗಳಲ್ಲಿ ಬಡ ಕುಟುಂಬಗಳು ವಾಸಿಸುತ್ತಿವೆ. ಕಾಲನಿಗಳೂ ಇವೆ. ಸ್ಥಳೀಯ ನಿವಾಸಿಗಳಲ್ಲಿ ಕೆಲವರು ಸೂರು ವಂಚಿತರೂ ಇದ್ದಾರೆ. ಸುಮಾರು ಏಳೆಂಟು ಮಂದಿ ಸೂರಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಮನೆಗಳ ದುರಸ್ತಿಯಾಗದೇ ಅನೇಕ ಕುಟುಂಬಗಳು ಹಳೆಯ ಮನೆಗಳಲ್ಲಿ ಈಗ ವಾಸವಾಗಿವೆ. ಮಳೆಗಾಲದಲ್ಲಿ ಹೇಗೆ ಜೀವನ ನಡೆಸುವುದು ಎನ್ನುವ ಆತಂಕ ಅವರೆಲ್ಲರನ್ನು ಕಾಡುತ್ತಿದೆ.

30 ಮನೆಗಳಿಗೆ ಕೃತಕ ನೆರೆ ಭೀತಿ
ಡಯಾನ-ಎಂಜಿಎಂ ರಸ್ತೆಯ ಪಕ್ಕದಲ್ಲಿ ಹೊಳೆಯೊಂದು ಹರಿಯುತ್ತಿದೆ. ಇದು ಮುಂದಕ್ಕೆ ಕಲ್ಸಂಕ ಬಳಿ ಇಂದ್ರಾಣಿ ನದಿ ಸೇರುತ್ತದೆ. ಹೊಳೆಯಲ್ಲಿ ತುಂಬಿದ ಹೂಳು ತೆರವುಗೊಳಿಸಿಲ್ಲ. ಹೊಳೆಯಲ್ಲಿ ಎಂಟಕ್ಕೂ ಅಧಿಕ ತೆಂಗಿನ ಮರಗಳು ಬಿದ್ದುಕೊಂಡಿವೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗದೆ ಕೃತಕ ನೆರೆ ಸೃಷ್ಟಿಯಾಗುತ್ತದೆ. ಇದು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿ ಸಮಸ್ಯೆ ಉಂಟಾಗುತ್ತದೆ.

ಮಳೆಗಾಲ ಬಂತೆಂದರೆ ನಡುಕ
ಕಳೆದ ಬಾರಿಯ ಮಳೆಗಾಲ ಇಲ್ಲಿ ಭಾರೀ ಸಮಸ್ಯೆ ಸೃಷ್ಟಿಸಿತ್ತು. ಹೊಳೆ ಬದಿಯಲ್ಲಿ ಕೆಲವು ಮನೆಯ ಫೌಂಡೇಶನ್‌ವರೆಗೆ ಮಳೆ ನೀರು ಬರುತ್ತದೆ. ಕೆಲವು ಮನೆಗಳು ಮುಳುಗಡೆಯಾಗುತ್ತವೆ. ಈ ಬಾರಿ ಕೂಡ ಅದೇ ಭೀತಿಯಲ್ಲಿ ನಿವಾಸಿಗಳಿದ್ದಾರೆ. ತೋಡಿನ ಬದಿಯಲ್ಲಿ 30ಕ್ಕೂ ಅಧಿಕ ಮನೆಗಳಿದ್ದು, ಮಳೆಗಾಲ ಬಂತು ಎನ್ನುವಾಗ ಅವರಿಗೆ ನಡುಕ ಶುರುವಾಗುತ್ತದೆ.

ಲಿಖಿತ ಮಾಹಿತಿ ಸಲ್ಲಿಕೆ
ವಾರ್ಡ್‌ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಬಗ್ಗೆ ನಗರಸಭೆಗೆ ಲಿಖಿತವಾಗಿ ತಿಳಿಸಿದ್ದೇನೆ. ಕೆಲವು ತುರ್ತು ಕಾಮಗಾರಿ ನಡೆದಿವೆ. ಮುಖ್ಯವಾಗಿ ರಸ್ತೆ ಬದಿಗಳ ಅಪಾಯಕಾರಿ ಮರ ತೆರವು ಹಾಗೂ ತೋಡಿನ ಹೂಳೆತ್ತುವ ಕೆಲಸ ಮಳೆ ಆರಂಭವಾಗುವ ಮೊದಲೇ ಆಗಬೇಕಿದೆ.
– ರಾಜು, ಕಸ್ತೂರ್ಬಾ ನಗರ ವಾರ್ಡ್‌ ಸದಸ್ಯ

ಚರಂಡಿಯಲ್ಲಿ ಹೂಳು
ಚರಂಡಿಯ ಕೆಲವು ಕಡೆಗಳಲ್ಲಿ ಹೂಳು ತುಂಬಿಕೊಂಡಿದೆ. ಸಾಧಾರಣ ಮಳೆಗೆ ಸಮಸ್ಯೆಯಾಗದಿದ್ದರೂ ದೊಡ್ಡ ಮಳೆ ಸಮಸ್ಯೆ ತರಬಹುದು.
– ರಾಧಾಕೃಷ್ಣ ಕೆ.ಜಿ., ಸ್ಥಳಿಯ ನಿವಾಸಿ

ಟಾಪ್ ನ್ಯೂಸ್

1-wewqewewq

H.D. Revanna;ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್: ದೇವೇಗೌಡರ ನಿವಾಸಕ್ಕೆ ಎಸ್ ಐಟಿ !

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

Priyanka Gandhi Slams PM Modi in Banaskantha Rally

ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ

Allu Arjun: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿ ದಾಖಲೆ ಬರೆದ ʼಪುಷ್ಪ ಪುಷ್ಪʼ ಹಾಡು

Allu Arjun: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿ ದಾಖಲೆ ಬರೆದ ʼಪುಷ್ಪ ಪುಷ್ಪʼ ಹಾಡು

1-wwqewqe

BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ

8

ಅಮಿತಾಭ್‌ ಟು ಶಾರುಖ್:‌ ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewewq

H.D. Revanna;ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್: ದೇವೇಗೌಡರ ನಿವಾಸಕ್ಕೆ ಎಸ್ ಐಟಿ !

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

1-wewqewq

Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.