ನಷ್ಟದಲ್ಲೇ ಮತ್ತೆ ಸರಕಾರಿ ಬಸ್‌ ಸಂಚಾರ ಆರಂಭ

ಕೆಎಸ್‌ಆರ್‌ಟಿಸಿ: ದಿನವೊಂದಕ್ಕೆ 15 ಲಕ್ಷ ರೂ.ಆದಾಯ ಕೊರತೆ

Team Udayavani, Jun 8, 2020, 6:11 AM IST

ನಷ್ಟದಲ್ಲೇ ಮತ್ತೆ ಸರಕಾರಿ ಬಸ್‌ ಸಂಚಾರ ಆರಂಭ

ವಿಶೇಷ ವರದಿ -ಪುತ್ತೂರು: ಎರಡುವರೆ ತಿಂಗಳುಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಬಸ್‌ ಓಡಾಟ ಆರಂಭಿಸಲು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿ ಸಿದ್ಧತೆ ನಡೆದಿದೆ. ಒಂದೆಡೆ ಕೋವಿಡ್-19 ಸಂಕಷ್ಟ, ಇನ್ನೊಂದೆಡೆ ನಿರೀಕ್ಷಿತ ಆದಾಯ ಕೊರತೆ ನಡುವೆ ಸರಕಾರಿ ಬಸ್‌ ಮತ್ತೆ ಸಂಚರಿಸಬೇಕಿದೆ.

ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ಪ್ರತಿ ದಿನ 75 ಲಕ್ಷ ರೂ. ಆದಾಯ ನಿರೀಕ್ಷಿಸುತ್ತದೆ. ಆದರೆ ಕೋವಿಡ್-19 ಎಫೆಕ್ಟ್ ಮೊದಲೇ 60 ಲಕ್ಷ ರೂ. ಸಂಗ್ರಹಗೊಂಡು 15 ಲಕ್ಷ ರೂ. ಕೊರತೆ ಉಂಟಾಗುತ್ತಿತ್ತು. ತಿಂಗಳ ಅಂಕಿ ಅಂಶದಲ್ಲಿ ಕೆಲವು ಘಟಕ ಲಾಭದಲ್ಲಿದ್ದರೆ, ಇನ್ನು ಕೆಲವು ಘಟಕ ನಷ್ಟ ಅನುಭವಿಸುತ್ತವೆ. ಇಲ್ಲಿ ಖರ್ಚು-ವೆಚ್ಚ ಸರಿ ಸಮವಾದರೂ ಲಾಭ ಸಿಗುತ್ತಿಲ್ಲ. ಮುಖ್ಯವಾಗಿ ಗರಿಷ್ಠ ಪ್ರಮಾಣದಲ್ಲಿ ರಿಯಾಯಿತಿ ದರ ಪಾಸ್‌ ವಿತರಣೆ ಕೂಡ ಆದಾಯ ಸಂಗ್ರಹದ ಮೇಲೆ ಪರಿಣಾಮ ಬೀರಿದೆ ಎನ್ನುತ್ತಿದೆ ಅಂಕಿ ಅಂಶ.

ಪ್ರತಿ ಬಸ್‌ನ ಪ್ರತಿ ಕಿ.ಮೀ. ಓಡಾಟಕ್ಕೆ ತಲಾ 36 ರೂ. ಖರ್ಚು ತಗಲುತ್ತದೆ. ವಿಭಾಗ ವ್ಯಾಪ್ತಿಯಲ್ಲಿ 560 ಬಸ್‌ಗಳಿದ್ದು, ಅವುಗಳಿಗೆ ಪ್ರತಿ ಕಿ.ಮೀ.ಗೆ 20,160 ರೂ.ಖರ್ಚು ತಗಲುತ್ತದೆ. ಆದರೆ ಕೆಎಸ್‌ಆರ್‌ಟಿಸಿಗೆ ಪ್ರತಿ ಕಿ.ಮೀ.ಗೆ ಸಿಗುವ ಆದಾಯ 22ರಿಂದ 25 ರೂ. ತನಕ ಮಾತ್ರ. ಅಂದರೆ ಒಟ್ಟು ಬಸ್‌ನ ಪ್ರತಿ ಕಿ.ಮೀ.ಗೆ 25 ರೂ. ಸಂಗ್ರಹದಂತೆ ಲೆಕ್ಕ ಹಾಕಿದರೆ 14,000 ರೂ. ಮಾತ್ರ ಲಭಿಸಿದಂತಾಗುತ್ತದೆ. ಅಂದರೆ ಪ್ರತಿ ಕಿ.ಮೀ.ನಲ್ಲಿ ನಿರೀಕ್ಷಿತ ಆದಾಯದಲ್ಲಿ 6,000 ರೂ. ಗಳಷ್ಟು ಕೊರತೆ ಉಂಟಾಗಿದೆ.

ಕೋವಿಡ್-19 ಎಫೆಕ್ಟ್ : ನಷ್ಟ
ಕೋವಿಡ್-19 ಬಳಿಕ ಮೇ 19ರಿಂದ ಕೆಎಸ್‌ಆರ್‌ಟಿಸಿ ಉಪವಿಭಾಗದ ಎಲ್ಲ ಘಟಕ ವ್ಯಾಪ್ತಿಯಲ್ಲಿ ಒಟ್ಟು 50 ಬಸ್‌ ಓಡಾಟ ಆರಂಭಿಸಿವೆ. ಜೂ. 7ರ ವೇಳೆ 130 ಬಸ್‌ಗಳು ಓಡಾಡುತ್ತಿವೆ. ಆದಾಯ ಪ್ರಮಾಣ ಕುಸಿತ ಕಂಡು ನಷ್ಟದಲ್ಲಿ ಸಂಚರಿಸುತ್ತಿದೆ. ಉದಾಹರಣೆಗೆ ಪುತ್ತೂರು-ಮಂಗಳೂರು ನಡುವೆ ಈ ಹಿಂದೆ ಪ್ರತಿ ಕಿ.ಮೀ.ಗೆ 25 ರೂ. ಆದಾಯ ಬರುತ್ತಿದ್ದರೆ, ಈಗ 21 ರೂ.ನಷ್ಟು ಮಾತ್ರ ಸಂಗ್ರಹವಾಗುತ್ತಿದೆ. ಹಾಗೇ ಪುತ್ತೂರು-ಬೆಂಗಳೂರು ಬಸ್‌ನಲ್ಲಿ 32 ರೂ. ಇದ್ದ ಆದಾಯ ಈಗ 14 ರೂ.ನಿಂದ 20 ರೂ.ನೊಳಗಿದೆ. ಜತೆಗೆ ಈ ಹಿಂದೆ 4ರಿಂದ 8 ಟ್ರಿಪ್‌ ಓಡಾಡುತ್ತಿದ್ದ ಮಾರ್ಗದಲ್ಲಿ ಈಗ 2 ಟ್ರಿಪ್‌ ಮಾತ್ರ ಸಂಚರಿಸುತ್ತಿವೆ.

35 ಶೇ.ನೌಕರರು ಕರ್ತವ್ಯಕ್ಕೆ ಹಾಜರು
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ವ್ಯಾಪ್ತಿಯಲ್ಲಿ 6 ತಾಲೂಕುಗಳು ಒಳಗೊಂಡಿವೆ. ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಹಾಗೂ ಮಡಿಕೇರಿ ಘಟಕಗಳಿವೆ. ಒಟ್ಟು 2,400 ಮಂದಿ ಸಿಬಂದಿಯಿದ್ದಾರೆ. ಈ ಪೈಕಿ ಶೇ. 33ರಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜೂ. 8ರಿಂದ ಇದರ ಪ್ರಮಾಣ ಹೆಚ್ಚಾಗಲಿದೆ. ಹೊರ ಜಿಲ್ಲೆಯ ನೌಕರರು ಕರ್ತವ್ಯಕ್ಕೆ ಮರಳಿ ಬರುತ್ತಿದ್ದಾರೆ. ಆರೋಗ್ಯ ಪ್ರಮಾಣ ಪತ್ರ, ತಪಾಸಣೆ ಬಳಿಕವಷ್ಟೇ ಕರ್ತವ್ಯಕ್ಕೆ ಸೇರಿಸಲಾಗುತ್ತಿದೆ. ಈ ಬಾರಿ ಸಿಬಂದಿಗೆ ಕೋವಿಡ್-19 ಪರಿಣಾಮ ಆದಾಯ ಕೊರತೆ ಉಂಟಾಗಿ ವೇತನ ಪಾವತಿ ವಿಳಂಬವಾಗಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಳ ನಿರೀಕ್ಷೆ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಬಸ್‌ ಓಡಾಟ ನಡೆಸುತ್ತಿದೆ. ಪ್ರಯಾಣಿಕ ಸಂಖ್ಯೆ ಇಳಿಮುಖದಿಂದ ಆದಾಯದಲ್ಲಿ ಇಳಿಮುಖವಾಗಿದೆ. ಜೂ. 8ರಿಂದ ದೇವಾಲಯಗಳು ಪುನರಾರಂಭದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ. ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್‌ ಓಡಾಟ ಹೆಚ್ಚಳದ ಬಗ್ಗೆ ನಿರ್ಧರಿಸಲಾಗುವುದು.
 - ನಾಗೇಂದ್ರ ಕುಮಾರ್‌, ವಿಭಾಗೀಯ
ನಿಯಂತ್ರಣಾಧಿಕಾರಿ, ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.