ಬ್ರೆಜಿಲ್ : ಗುಟ್ಟು ರಟ್ಟಾಗದಂತೆ ಅಂಕಿ ಅಂಶ ಪ್ರಕಟನೆ ಬಂದ್‌!


Team Udayavani, Jun 8, 2020, 12:54 PM IST

ಗುಟ್ಟು ರಟ್ಟಾಗದಂತೆ ಅಂಕಿ ಅಂಶ ಪ್ರಕಟನೆ ಬಂದ್‌!

ರಿಯೊ ಡಿ ಜನೈರೋ: ವಿಚಿತ್ರ ಕ್ರಮವೊಂದರಲ್ಲಿ ಬ್ರೆಜಿಲ್‌ ಕೋವಿಡ್‌ ಪೀಡಿತರ ಸಂಖ್ಯೆ, ಮೃತರ ಸಂಖ್ಯೆಯನ್ನು ಪ್ರಕಟಿಸುವುದನ್ನೇ ಸ್ಥಗಿತಗೊಳಿಸಿದೆ. ಈ ಮೂಲಕ ಪರೋಕ್ಷವಾಗಿ ಕೋವಿಡ್‌ ಪ್ರಕರಣ-ಸಾವು “ಲೆಕ್ಕಕ್ಕಿಲ್ಲ’ದಷ್ಟು ಉಲ್ಬಣಗೊಂಡಿದೆ ಎಂಬುದನ್ನು ಸಾಬೀತು ಪಡಿಸಿದೆ. ಬ್ರೆಜಿಲ್‌ ಸರಕಾರದ ಈ ಕ್ರಮ ತಜ್ಞರ ಖಂಡನೆಗೂ ಒಳಗಾಗಿದೆ.

ಈ ಮೊದಲೇ ತಜ್ಞರು ಬ್ರೆಜಿಲ್‌ನ ಅಂಕಿ ಅಂಶಗಳು ಸರಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ನೈಜ ದತ್ತಾಂಶ ಗಳನ್ನು ತಿರುಚಲಾಗಿದ್ದು, ಅವುಗಳನ್ನು ಮರೆಮಾಚಲಾಗುತ್ತಿದೆ ಎಂದು ಹೇಳಿದ್ದಾರೆ.

ಬ್ರೆಜಿಲ್‌ನಲ್ಲಿ ಕೋವಿಡ್‌ ಸಾವಿನ ಸಂಖ್ಯೆಗಳು 34 ಸಾವಿರಕ್ಕೇರಿದಾಗ ಪ್ರಕಟಿಸಿದ ಸಂಖ್ಯೆಗಳೇ ಕೊನೆಯ ಅಧಿಕೃತ ಸಂಖ್ಯೆಗಳಾಗಿವೆ. ಆ ಬಳಿಕ ಸರಿಯಾದ ಅಂಕಿ ಅಂಶಗಳನ್ನು ಪ್ರಕಟಿಸಲಾಗಿಲ್ಲ ಎಂದು ಹೇಳಲಾಗಿದೆ. ಆ ಹೊತ್ತಿಗೆ ಬ್ರೆಜಿಲ್‌ ಜಗತ್ತಿನಲ್ಲೇ ಮೂರನೇ ಅತಿ ಹೆಚ್ಚು ಕೋವಿಡ್‌ ಸಾವು ಕಂಡ ದೇಶ ಎಂದು ಹೇಳಲಾಗಿತ್ತು. ಇದೇ ಸಂದರ್ಭ ಒಟ್ಟು ಪ್ರಕರಣಗಳ ಸಂಖ್ಯೆ 6.15 ಲಕ್ಷಕ್ಕೂ ಹೆಚ್ಚಾಗಿತ್ತು. ಬ್ರೆಜಿಲ್‌ನ ಜನಸಂಖ್ಯೆ ಸುಮಾರು 21 ಕೋಟಿಯಾಗಿದ್ದು, ಜಗತ್ತಿನ 7ನೇ ಅತಿ ದೊಡ್ಡ ಜನಸಂಖ್ಯೆ ಹೊಂದಿದ ದೇಶವಾಗಿದೆ.

ಶುಕ್ರವಾರದ ಬಳಿಕ ಅಲ್ಲಿನ ಆರೋಗ್ಯ ಸಚಿವಾಲಯ ಕೋವಿಡ್‌ ಅಂಕಿ ಅಂಶಗಳನ್ನು ಕೊಡುವುದನ್ನು ನಿಲ್ಲಿಸಿದೆ. ಆದ್ದರಿಂದ ವೆಬ್‌ಸೈಟ್‌ ಅನ್ನು ನಿಲ್ಲಿಸಲಾಗಿದೆ. ಟೀಕೆಗಳ ಬಳಿಕ ಶನಿವಾರ ಮತ್ತೆ ವೆಬ್‌ಸೈಟ್‌ ಪುನರಾರಂಭಗೊಂಡಿದ್ದರೂ, ಅದರಲ್ಲಿ ವಾರದ ಮತ್ತು ತಿಂಗಳಿನ ಅಂಕಿ ಅಂಶಗಳು ಮಾತ್ರ ಇದ್ದವು. ಆದರೆ ದೈನಂದಿನ ಮಾಹಿತಿಗಳು ಇರಲಿಲ್ಲ. ಸದ್ಯ ಹಿಂದಿನ 24 ತಾಸುಗಳ ಅಂಕಿ ಅಂಶಗಳು ಮಾತ್ರ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಇನ್ನು ಬ್ರೆಜಿಲ್‌ನ ಅಧ್ಯಕ್ಷ ಜೈಲ್‌ ಬೊಲ್ಸೊನಾರೋ ಅವರು ಟ್ವೀಟ್‌ ಮಾಡಿ ಶನಿವಾರ ಮೃತಪಟ್ಟವರ ಅಂಕಿ ಅಂಶಗಳು ಬ್ರೆಜಿಲ್‌ನ ಈಗಿನ ಕೋವಿಡ್‌ ಪರಿಸ್ಥಿತಿ ಬಗ್ಗೆ ಹೇಳುವುದಿಲ್ಲ ಎಂಬರ್ಥದ ಟ್ವೀಟ್‌ ಮಾಡಿದ್ದರು.

ಬ್ರೆಜಿಲ್‌ನ ಖಾಸಗಿ ತನಿಖಾ ವ್ಯಕ್ತಿಗಳು ಹೇಳುವ ಪ್ರಕಾರ ಮೇ 14ರವರೆಗೆ ಬ್ರೆಜಿಲ್‌ನಲ್ಲಿ ಸುಮಾರು 5 ಲಕ್ಷ ಸಾವುಗಳು ಸಂಭವಿಸಿವೆ. ರಿಯೋ ನಗರದಲ್ಲಿ ಅಷ್ಟು ಪ್ರಮಾಣದ ಮರಣ ಪ್ರಮಾಣ ಪತ್ರಗಳನ್ನು ನೀಡಲಾಗಿದ್ದು ಈ ಬಗ್ಗೆ ಸಂಶಯ ಮೂಡಿಸಿವೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.